ಪ್ರಸನ್ನೇಶ್ವರ ದೇವಾಲಯದಲ್ಲಿ ಅಧಿಕ ಶ್ರಾವಣ ಮಾಸಾಚರಣೆ

Exif_JPEG_420

(ಸಂಜೆವಾಣಿ ವಾರ್ತೆ)
ವಿಜಯಪುರ:ಆ.7: ನಗರದ ನಗರದ ಹಳಕೇರಿ ಗಲ್ಲಿಯಲ್ಲಿ ಗಾಯಿ ಚಾಳ್ ಬಳಿಯ ಇರುವ ಪುರಾತನ ಶ್ರೀ ಪ್ರಸನ್ನೇ ಶ್ವರ ಹಾಗೂ ಶ್ರೀ ಪ್ರಸನ್ನಾಂಜನೇಯ ದೇವಾಲಯದಲ್ಲಿ ಇಂದು ಅಧಿಕ ಮಾಸದ ಪ್ರಯುಕ್ತ ಹಲವು ಬಗೆ ಧಾರ್ಮಿಕ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿತ್ತು.
ಅದರಂಗವಾಗಿ ಬೆಳಿಗ್ಗೆ ಸುಪ್ರಭಾತ, ಅಲಂಕಾರ ಸೇವೆ, ಫಲಪಂಚಾಮೃತ ನಡೆದವು. ನಂತರ ಶ್ರೀ ಸತ್ಯನಾಯಣ ಪೂಜೆ ಅರ್ಚಕ ಮದಭಾವಿ ಆಚಾರ್ಯರ ನೇತ್ರತ್ವದಲ್ಲಿ ಜರುಗಿತು.
ಬಳಿಕ ಯುವ ಪಂಡಿತ ಜಯತೀರ್ಥ ಪಂಢರಿ ಶ್ರೀಮದ್ಭಾಗವತ ಕುರಿತು ಉದ್ಭೋದಕ ಪ್ರವಚನ ನೀಡುತ್ತ, ಪ್ರಸ್ತುತ ದಿನಮಾನದಲ್ಲಿ ಭಾಗವತದ ಪ್ರಸ್ತುತತೆ ಕುರಿತು ವಿವರಿಸಿದರಲ್ಲದೇ ಭಾಗವತ ಶ್ರವಣದಿಂದ ಸಕಲ ಸಮಸ್ಯೆಗಳು ಪರಿಹಾರ ಆಗುವವದಲ್ಲದೇ ಪುಣ್ಯ ಪ್ರಾಪ್ತಿಯಾಗುವದು ಎಂದು ಹೇಳಿದರು.
ಬಳಿಕ ಬ್ರಾಹ್ಮಣ ಸುವಾಸಿನಿಯರ ಉಡಿ ತುಂಬುವ ಕಾರ್ಯಕ್ರಮ ಲಕ್ಷ್ಮೀ ಶೋಭಾನ ತಾರತಮ್ಯೋಕ್ತ ಭಜನೆ ಜರುಗಿ ಇಡೀ ದೇವಾಲಯವೆಲ್ಲ ಪುರುಷೋತ್ತಮನ ನಾಮಸ್ಮರಣೆಯಲ್ಲಿ ಲೀನವಾಯಿತು. ಮಹಿಳಾ ಮಂಡಳಿಯ ಸುಶ್ರಾವ್ಯ ಹಾಡುಗಳು ದೇವಾಲಯದಲ್ಲಿ ಮಾರ್ದನಿಸಿದವು.
ನಂತರ ದೇವಾಲಯದ ಗರ್ಭಗುಡಿಯ ಸುತ್ತಮುತ್ತ ಪಲ್ಲಕ್ಕಿ ಸೇವೆ ನಡೆದು ನೆರೆದ ಭಕ್ತರೆಲ್ಲ ಭಕ್ತಿ ಸಾಗರದಲ್ಲಿ ಮುಳು ಗಿತು. ಬಳಿಕ ಮಹಾ ಮಂಗಳಾರತಿ, ಮಹಾ ಪೂಜೆ, ತೀರ್ಥ ಪ್ರಸಾದ ನಡೆದವು.ಇಂದಿನ ಸರ್ವ ಸೇವೆಯನ್ನು ದೇವಾಲಯದ ಅರ್ಚಕ ಪ್ರಕಾಶಾಚಾರ್ಯ ಮದಭಾವಿ ವಹಿಸಿಕೊಂಡಿದ್ದರು.
ದೇವಾಲಯದ ಸಮಿತಿ ಪದಾಧಿಕಾರಿಗಳಾದ ನಾಗೇಶ ಕುಲಕರ್ಣಿ, ಆನಂದ ಗಾಯಿ, ವಸಂತರಾವ ಗಾಯಿ, ಜಗ ನ್ನಾಥ ಕುಲಕರ್ಣಿ, ಅನಿತಾ ಗಾಯಿ, ಸಂತೋóಷ ಕಠಾವಿ ಮುಂತಾದವರು ಅತ್ಯುತ್ಸಾಹದಿಂದ ಎಲ್ಲ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನೆರವೇರಿಸಿದರು.