ಪ್ರಸಕ್ತ ಸಮಾಜಕ್ಕೆ ಬುದ್ದ ಬಸವ ಭೀಮ ತತ್ವ ಅಗತ್ಯವಿದೆ:

ಜಗಳೂರು.ಫೆ.27:ಪ್ರಸಕ್ತ ಸಮಾಜ ಬುದ್ದ ಬಸವ ಭೀಮ ತತ್ವ ಹಾಗೂ ಮರುಳಸಿದ್ದನ ವೈಜ್ಞಾನಿಕ ಪ್ರಜ್ಞೆಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಪ್ರೋ.ಲಿಂಗಪ್ಪ ಹೇಳಿದರು.ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಕಸಾಪದಿಂದ ಆಯೊಜಿಸಿದ್ದ ಅನುಭಾವಿ ಕವಿ ಮಹಾಲಿಂಗರಂಗ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿ ಕನ್ನಡಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನುಡಿ ಹೇಳಿದರು.ಅಕ್ಷರದವ್ವ ಸಾವಿತ್ರಿ ಭಾಯಿಫುಲೆ ,ಫಾತೀಮಾ ಶ್ರೀ ಅವರನ್ನು ಸ್ಮರಿಸಬೇಕಿದೆ.ಕನ್ನಡ ನಮ್ಮೆಲ್ಲರ ಕರುಳು ಭಾಷೆ ತನ್ನದೇ ನಡೆ ನುಡಿ ಸಾಂಸ್ಕೃತಿಕ ಪರಂಪರೆ ಇತಿಹಾಸ ಕನ್ನಡ ಭಾಷೆಗಿದೆ.ಬಸವಣ್ಣನಗಿಂತ ಹಿರಿಯನಾದ ಮರುಳಸಿದ್ದರು ತಾಲೂಕಿನಲ್ಲಿ ನಡೆದಾಡಿ ಲೋಕಕಲ್ಯಾಣಕ್ಕಾಗಿ ಮೌಢ್ಯತೆ ವಿರೋಧಿಸುತ್ತಾ ವೈಜ್ಞಾನಿಕ ಜನಜಾಗೃತಿ ಮೂಡಿಸಿ,ನಂತರ ಕಟ್ಟಿದ ಸಿರಿಗೆರೆ ಮಠ ಇಂದು ಬೃಹನ್ಮಠವಾಗಿ ಬೆಳೆದಿದೆ.ನಂತರದ ಸಿರಿಗೆರೆ ಶ್ರೀಗಳು ಯಾರೊಬ್ಬರೂ ಯಜ್ಞ ಯಾಗಾದಿಗಳನ್ನು ಪಾಲಿಸಿಲ್ಲ ಇದು ಮಠದ ಪರಂಪರೆ ಎಂದು ಬಣ್ಣಿಸಿದರು.ಮನುಕುಲದ ಮುಂದೆ ಎರಡು ಪ್ರಶ್ನೆಗಳು ಯುದ್ದ ಮತ್ತು ಬುದ್ದ ನಮಗೆ ಯುದ್ದ ಬೇಡ ಬುದ್ದ ಬೇಕು.ಬುದ್ದ ಪ್ರಜ್ಞೆ ಅವಶ್ಯಕತೆಯಿದೆ.ಬಸವಣ್ಣನವರು ಅಲ್ಪ ವರ್ಷದಲ್ಲಿನ ವಚನ ಮತ್ತುಸಾಮಾಜಿಕ ಕ್ರಾಂತಿ ಇಂದಿಗೂ ಅವಿಸ್ಮರಣೀಯ,ಅಲ್ಲದೆ ದೇಶಕ್ಕೆ ಆಳುವುದನ್ನು ಪರಿಚಯಿಸಿದವರು ಬಾಬಾಸಾಹೇಬ ಅಂಬೇಡ್ಕರ್ ಎಂದು ತಿಳಿಸಿದರು.ನಾನು ಕಂಡ ಬಾಲ್ಯದಿಂದ ಇಂದಿನವರೆಗೂ ಶಿಕ್ಷಣ,ಸಾಹಿತ್ಯ,ಸಾಂಸ್ಕೃತಿಕ,ಸಾಮಾಜಿಕ,ವಿವಿಧ ಕ್ಷೇತ್ರಗಳಲ್ಲಿ ಸಾಧಕರ ಕುರಿತು ಅಧ್ಯಕ್ಷರು ನುಡಿಗಳನ್ನು ಕಿರು ಒತ್ತಿಗೆಯಲ್ಲಿ ಅಭಿನಂದನೆ ತಿಳಿಸಲಾಗಿದೆ ಎಂದರು.