
ಕಲಬುರಗಿ;ಆ.4: 2023-24ರ ಶೈಕ್ಷಣಿಕ ವರ್ಷದಿಂದ ಬಿ.ಫಾರ್ಮ್ ಮತ್ತು ಡಿ.ಫಾರ್ಮ್ ಎರಡು ಹೊಸ ಕೋರ್ಸ್‍ಗಳನ್ನು, ಈ ಪ್ರತಿಯೊಂದು ಕೋರ್ಸ್‍ಗಳಲ್ಲಿ 60 ವಿದ್ಯಾರ್ಥಿಗಳ ಸೇರ್ಪಡೆಯೊಂದಿಗೆ ಪರಿಚಯಿಸುವ ಮೂಲಕ ಶರಣಬಸವ ವಿಶ್ವವಿದ್ಯಾಲಯವು ಈ ಪ್ರದೇಶದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶಗಳ ಮತ್ತೊಂದು ಮಾರ್ಗವನ್ನು ತೆರೆದಿದೆ.
ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನೀಲಕುಮಾರ ಬಿಡವೆ ಹಾಗೂ ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ ಅವರು ಶುಕ್ರವಾರ ಕಲಬುರಗಿಯಲ್ಲಿ ಜಂಟಿ ಹೇಳಿಕೆಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. 60 ವಿದ್ಯಾರ್ಥಿಗಳ ಪ್ರವೇಶದೊಂದಿಗೆ ಎರಡು ವರ್ಷಗಳ ಡಿ.ಫಾರ್ಮ್ ಕೋರ್ಸ್‍ನ ಪ್ರಾರಂಭಕ್ಕೆ ಆರಂಭದಲ್ಲಿ ತನ್ನ ಅನುಮೋದನೆಯನ್ನು ನೀಡಿದೆ ಮತ್ತು ಈಗ ನಾಲ್ಕು ವರ್ಷಗಳ ಬಿ.ಫಾರ್ಮ್ ಕೋರ್ಸ್‍ನ ಪ್ರಾರಂಭವನ್ನು ಅನುಮೋದಿಸುವ ನಿರ್ಧಾರವನ್ನು PಅI (Phಚಿಡಿmಚಿಛಿಥಿ ಅouಟಿಛಿiಟ oಜಿ Iಟಿಜiಚಿ) ಪ್ರಕಟಿಸಿದೆ ಎಂದು ಹೇಳಿದರು.
ಶರಣಬಸವ ವಿಶ್ವವಿದ್ಯಾಲಯವು 2023-24 ರ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳನ್ನು ಎರಡೂ ಕೋರ್ಸ್‍ಗಳಲ್ಲಿ ಪ್ರವೇಶ ಪಡೆದುಕೊಳ್ಳಲು PಅI (Phಚಿಡಿmಚಿಛಿಥಿ ಅouಟಿಛಿiಟ oಜಿ Iಟಿಜiಚಿ) ಅನುಮತಿ ನೀಡಿದೆ.
ಡಾ. ಅನೀಲ ಕುಮಾರ ಬಿಡವೆ ಮತ್ತು ಡಾ. ಲಕ್ಷ್ಮೀ ಪಾಟೀಲ್ ಮಾಕಾ ಮಾತನಾಡಿ, ಕಲಬುರಗಿಯಲ್ಲಿ ಇಂತಹ ಸೌಲಭ್ಯದ ಬಹುಕಾಲದ ಕನಸನ್ನು ನನಸು ಮಾಡಲು ಹಾಗೂ ಪೂರ್ಣ ಪ್ರಮಾಣದ ವೈದ್ಯಕೀಯ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲು ಇದು ವಿಶ್ವವಿದ್ಯಾಲಯದ ಮೊದಲ ಹೆಜ್ಜೆಯಾಗಿದೆ ಎಂದರು.
ಶರಣಬಸವ ವಿಶ್ವವಿದ್ಯಾಲಯದ ಸಂಸ್ಥಾಪಕರು ಹಾಗೂ ಕುಲಾಧಿಪತಿಗಳು, ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಡಾ. ದಾಕ್ಷಾಯಿಣಿ ಅವ್ವಾಜಿ, ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಹಾಗೂ ವಿವಿಯ ಉಪಕುಲಪತಿ ಡಾ. ನಿರಂಜನ್ ವಿ ನಿಷ್ಠಿ ಸೇರಿದಂತೆ ಇನ್ನಿತರ ಗಣ್ಯರು, ಈ ಎರಡು ಹೊಸ ಕೋರ್ಸ್‍ಗಳನ್ನು ಪ್ರಾರಂಭಿಸಲು PಅI ನ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲು ಹಗಲಿರುಳು ಶ್ರಮಿಸಿದ ವಿಶ್ವವಿದ್ಯಾಲಯದ ಇಡೀ ತಂಡವನ್ನು ಅಭಿನಂದಿಸಿದರು.