
ಬೀದರ :ಮಾ.1: ಹೊಸ ಸಂಶೋಧನೆಗಳನ್ನು ಆರಂಭಿಸಲು ದೊಡ್ಡ ದೊಡ್ಡ ಪ್ರಯೋಗಾಲಯಗಳೆನು ಬೇಕಾಗಿಲ್ಲಾ ನಾವು ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಏಕೆ, , ಹೇಗೆ ಏನು ಎಂಬ ಪ್ರಶ್ನೆಗಳೊಂದಿಗೆ ಆಲೋಚನೆ ಮಾಡಿದಾಗ ಹೊಸ ಸಂಶೋಧನೆಗಳಿಗೆ ನಾಂದಿ ಹಾಡಬಹುದು ಎಂದು ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ ಬೆಂಗಳೂರಿನ ಹಿರಿಯ ವಿಜ್ಞಾನಿ ಡಾ. ಗಿರೀಶ್ ಹೇಳಿದರು. ಅವರು ಮಂಗಳವಾರ ನಗರದ ಚೆನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಬೀದರ, ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರ ಹಾಗೂ ಸ್ವಾಮಿ ನರೇಂದ್ರ ಕಾಲೇಜು ಬೀದರ ಇವರ ಸಂಯುಕ್ತಾಶ್ರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಿಜ್ಞಾ ನ ಮತ್ತು ವಿದ್ಯಾರ್ಥಿಗಳ ನೇರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಿ.ವಿ ರಾಮನ್‍ರವರು ಬೆಳಗಿನ ಜಾವ ಆಕಾಶ ನೋಡಿದಾಗ ಅವರಿಗೆ ಆಕಾಶವು ನೀಲಿ ಬಣ್ಣದಲ್ಲಿ ಗೋಚರಿಸಿತು ಆದೇ ರೀತಿ ಸಮುದ್ರ ಕೂಡ ನೀಲಿ ಬಣ್ಣದಲ್ಲಿ ಕಾಣಿಸಿತು ಅವರಲ್ಲಿ ಇದು ಏಕೆ ಎಂಬ ಪ್ರಶ್ನೆ ಉದ್ಭವಿಸಿದಾಗ ಅವರು ಸಂಶೋಧನೆ ಕೈಗೊಂಡರು ಅದರ ಫಲವಾಗಿ ಬೆಳಕಿನ ಚದುರುವಿಕೆಯಿಂದ ಆಕಾಶ ನೀಲಿ ಬಣ್ಣದಲ್ಲಿ ಗೋಚರಿಸಿದರೆ ಸಮುದ್ರ ಅದರ ಪ್ರತಿಬಿಂಬದಿಂದ ನೀಲಿ ಬಣ್ಣದಲ್ಲಿ ಕಾಣಿಸುತ್ತದೆ ಎಂದು ತಿಳಿದುಬಂತು ಮುಂದೆ ಅದು ಅವರಿಗೆ ನೋಬಲ್ ಪಾರಿತೋಷಕ ದೊರೆಯುವಂತೆ ಮಾಡಿತು ಆದರಿಂದ ಮಕ್ಕಳು ನಿಮ್ಮ ಸುತ್ತಮುತ್ತಲಿನ ವಷ್ತುಗಳನ್ನು ವೈಜ್ಞಾನಿಕ ದೃಷ್ಠಿಕೊನದಿಂದ ನೋಡುವ ಮನೋಭಾವ ಬೇಳಿಸಿಕೊಳ್ಳಬೇಕೆಂದು ಮಕ್ಕಳಿಗೆ ಸಲಹೆ ನೀಡಿದರು. ಮಕ್ಕಳು ಜೀವದಲ್ಲಿ ದಿನನಿತ್ಯ ಪ್ರಶ್ನೆಮಾಡುವ ಹಾಗೂ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಗುಣಗಳನ್ನು ವೃದ್ಧಿಸಿಕೊಳ್ಳಬೇಕು ಅದೇ ರೀತಿ ಶಿಕ್ಷಕರು ಮತ್ತು ಪೋಷಕರು ಸಹ ಮಕ್ಕಳಲ್ಲಿ ಇಂತಹ ಮನೋಭಾವ ವೃದ್ಧಿಗೆ ಪ್ರಯತ್ನಿಸಬೇಕು ಎಂದರು. ಬೀದರ ಸಹಾಯಕ ಆಯುಕ್ತ ಲವಿಶ್ ಓರ್ಡಿಯಾ ವಿದ್ಯಾಥಿಗಳೊಂದಿಗೆ ಯು.ಪಿ.ಎಸ್.ಸಿ ಪರೀಕ್ಷೆ ತೈಯ್ಯಾರಿ ಕುರಿತು ಸಂವಾದ ನಡೆಸಿ ಮಾತನಾಡಿ ವಿದ್ಯಾರ್ಥಿಗಳು ದೊಡ್ಡ ಗುರಿಯೊಂದಿಗೆ ನಿರಂತರ ಪ್ರಯತ್ನ ಹಾಗೂ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಿದಲ್ಲಿ ಯಶಸ್ಸು ದೊರೆಯುತ್ತದೆ ಎಂದು ಹೇಳಿದರು. ಬೀದರ ಡಯಟ್ ಉಪ ಪ್ರಾಂಶುಪಾಲ ಡಾ.ಮಹ್ಮದ್ ಗುಲಸಿನ್ ಮಾತನಾಡಿ ಉತ್ತಮ ತೈಯ್ಯಾರಿಯಿಂದ ಪರೀಕ್ಷೆ ಭಯವನ್ನು ಹೊಗಲಾಡಿಸಬಹುದು ಆದರಿಂದ ಮಕ್ಕಳು ಪರೀಕ್ಷೆಗೆ ಹೇದರದೆ ಉತ್ತಮ ತೈಯ್ಯಾರಿ ನಡೆಸಬೇಕು ಅಂದಾಗ ಜಯ ನಿಮ್ಮದಾಗುವುದು ಎಂದ ಅವರು ಜೀವನದ ಗುರಿ ಸಾಧನೆಗೆ ಉತ್ತಮ ಯೋಜನೆ, ರೂಪಿಸಿಕೊಂಡು ಒಳ್ಳೆಯ ಸಿದ್ದತೆ ನಡೆಸಿದರೆ ಯಶಸ್ಸು ನಿಮ್ಮದಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಬೀದರ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಕುಮಾರ ಬೆಳಮಗಿ, ಸ್ವಾಮಿ ನರೇಂದ್ರ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಚಿಮಕೋಡ, ಸ್ವಾಮಿ ನರೇಂದ್ರ ಪದವಿ ಪೂರ್ವ ಕಾಲೇಜಿನ ಆಡಳಿತ ಅಧಿಕಾರಿ ಕಲ್ಪನಾ ಮಠಪತಿ, ಎಸ್.ಎಸ್.ಕೆ ಬೀದರ ಸಹಾಯಕ ಯೋಜನಾ ಸಮನ್ವಯಾಧಿಕಾರಿ ಗುಂಡಪ್ಪಾ ಹುಡಗೆ, ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ಮುಖ್ಯಸ್ಥ ಬಾಬುರಾವ ಎನ್ ಸಳಸಾರೆ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಗೀತಾ, ಬೀದರ ಡಯಟ್‍ನ ಉಪನ್ಯಾಸಕರುಗಳಾದ ಧನರಾಜ ಗುಡಮೆ, ಶಿವಾಜಿ ರಾಠೋಡ, ಸರ್ಕಾರಿ ಪ್ರೌಢ ಶಾಲಾ ಮುಖ್ಯಗುರುಗಳ ಸಂಘದ ಅಧ್ಯಕ್ಷ ಭೀಮಣ್ಣ ಹಡಪದ, ನಾವದಗೇರಿಯ ಸಿ.ಆರ್.ಪಿ. ಬಸವಕುಮಾರ, ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ಸಿಬ್ಬಂದಿ ವಿಶಾಲ ಎಸ್ ಕಡ್ಯಾಳ, ಸೇರಿದಂತೆ ವಿವಿಧ ಶಾಲಾ ಕಾಲೇಜು ಮಕ್ಕಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.