ಪ್ರಶಿಕ್ಷಣ ವರ್ಗ 2ದಿನದ ಶಿಬಿರಕ್ಕೆ ತೇಲ್ಕೂರ ಚಾಲನೆ

ಸೇಡಂ,ನ,21: ತಾಲೂಕಿನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ತಾಲೂಕಾ ಮಂಡಲ ವತಿಯಿಂದ ಎರಡು ದಿನದ ಪ್ರಶಿಕ್ಷಣ ವರ್ಗಕ್ಕೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರು ತಾಲೂಕಿನ ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ ಚಾಲನೆ ನೀಡಿದರು.
ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಒಂದು ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಶಿಸ್ತುಬದ್ಧವಾದ ಒಗ್ಗಟ್ಟಿನಿಂದ ಎಲ್ಲಾ ಮನಸ್ಸುಗಳನ್ನು ಗಟ್ಟಿ ನಿರ್ಧಾರ ತೆಗೆದುಕೊಂಡಾಗ ಮಾತ್ರ ಪಕ್ಷ ಬಲವರ್ಧನೆಯ ಆಗುತ್ತೆ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಕಾರ್ಯಕರ್ತರು ಶಿಸ್ತುಬದ್ಧವಾಗಿ ಒಡೆಯುವ ಮನಸುಗಳ ನಡುವೆ ಇದ್ದರೂ ಕೂಡ ಅವರ ಭಾವನೆಗಳನ್ನು ಅರ್ಥಮಾಡಿಕೊಂಡು ಈಗಲಾದರೂ ಆಗೋದಿಲ್ಲ ಆದರೆ ಮುಂದಿನ ದಿನಗಳಲ್ಲಿ ನೀವು ಅಂದುಕೊಂಡಿದ್ದು ಸಾಧಿಸಲು ನಿಮಗೆ ದೊರೆಯಲು ಸಾಧ್ಯವಾಗುತ್ತದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಡಿ ವಿಶ್ವವೇ ಗುರುವಾಗಿ ಗುರುತಿಸಿಕೊಳ್ಳಲು ಕಾರಣವೇನು ಅವರ ಸಿಸ್ತು ಅವರ ಬದುಕಿನಲ್ಲಿ ಆಗಿರತಕ್ಕಂತ ಘಟನೆಗಳು ಅವರನ್ನು ಗಟ್ಟಿಯಾಗಿ ಮಾಡಿ ನಮ್ಮ ಪಕ್ಷ ಇಡೀ ಜಗತ್ತಿನಾದ್ಯಂತ ಗುರುತಿಸುವಂತೆ ಮಾಡಿದ ಮಹಾನ್ ನಾಯಕ ನಮ್ಮ ಕೇಂದ್ರದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕಿನ ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀ ಪರ್ವತ ರೆಡ್ಡಿ ಪಾಟೀಲ್ ನಾಮವರ, ನಾಗಪ್ಪ ಕೊಳ್ಳಿ, ಅಮರನಾಥ ಪಾಟೀಲ್, ಮತ್ತು ಓಂ ಪ್ರಕಾಶ್ ಪಾಟೀಲ್ ತರನಳ್ಳಿ, ಲಕ್ಷ್ಮೀನಾರಾಯಣ್ ಚಿಮ್ಮನಚೋಡ್ ಕರ್, ವೀರೇಶ್ ಪಾಟೀಲ್ ರಾಯಕೋಡ, ಜಗದೇವಪ್ಪ ಸಾಹುಕಾರ್, ತಾಲೂಕಿನ ಅನೇಕ ಗ್ರಾಮೀಣ ಪ್ರದೇಶದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.