ಪ್ರಶಿಕ್ಷಣ ವರ್ಗದಿಂದ ಸಕಾರಾತ್ಮಕವಾಗಿ ಪಕ್ಷ ಸಂಘಟನೆಯಲ್ಲಿ ರೂಪಿಸಿಕೊಳ್ಳಬೇಕು: ರಾಮದಾಸ್

ಮೈಸೂರು, ನ.22: ಭಾರತೀಯ ಜನತಾ ಪಾರ್ಟಿ, ಮಂಡಲ ಮಟ್ಟದ 2 ದಿನದ ಪ್ರಶಿಕ್ಷಣ ವರ್ಗದ 2 ನೇ ದಿನದ ಕಾರ್ಯಕ್ರಮವು ಶ್ರೀ ನಾಮದೇವ ಭವನದಲ್ಲಿ ಜರುಗಿತು.
ರಾಜ್ಯ ಭಾಜಪಾ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಿದ ಮಾನ್ಯ ಶಾಸಕ ಎಸ್.ಎ. ರಾಮದಾಸ್ ಅವರು ಇಂತಹ ಪ್ರಶಿಕ್ಷಣ ವರ್ಗಗಳು ಪಕ್ಷ ಸಂಘಟನೆ ಅಲ್ಲದೇ ಜೀವನದ ಮೌಲ್ಯಗಳನ್ನು ಕೂಡಾ ನೀಡುತ್ತದೆ. ಈ ಪ್ರಶಿಕ್ಷಣ ವರ್ಗದಿಂದ ಸಕಾರಾತ್ಮಕವಾಗಿ ಪಕ್ಷ ಸಂಘಟನೆಯಲ್ಲಿ ರೂಪಿಸಿಕೊಳ್ಳಬೇಕು.
ನರೇಂದ್ರ ಮೋದಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಮೋ ದಿವಸ್ ಎಂಬ ದೊಡ್ಡ ಆನ್ಲೈನ್ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೆವು ಅದರಲ್ಲಿ ಸುಮಾರು 2500 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ ಎಂಬುದು ಸಂತಸದ ವಿಷಯ.
ರಾಜಕೀಯ ಪಕ್ಷಗಳಲ್ಲಿ ಪಾರದರ್ಶಕತೆ ತರಲು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ eಟeಛಿಣoಟ boಟಿಜs ಣಡಿಚಿಟಿsಠಿeಡಿಚಿಟಿಛಿಥಿ ಎಂಬ ನೀತಿಯನ್ನು ತಂದಿತು ಇದು ಮೋದಿ ಸರ್ಕಾರ ದೇಶದಲ್ಲಿ ತರುತ್ತಿರುವ ಬದಲಾವಣೆಗೆ ಉದಾಹರಣೆಯಾಗಿದೆ ಎಂದರು.
ಸಂಧ್ಯಾ ಸುರಕ್ಷಾ ಯೋಜನೆ, ಸ್ವಚ್ಛ ವಾಯು ಸ್ಟ್ರೀಟ್ ಟೆಸ್ಟ್ ಬೆಡ್, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರದಿಂದ 5 ಸಾವಿರ ರೂ. ಪರಿಹಾರ, ಪಿ.ಎಂ.ಕಿಸಾನ್ ಯೋಜನೆ, ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಮುಂತಾದ ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಹೇಳಿದರು
ಕೊರೊನಾ ಸಮಯದಲ್ಲಿಯೇ ಮನೆಬಾಗಿಲಿಗೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಅಲ್ಲೇ ಸಮಸ್ಯೆಗಳನ್ನು ಬಗೆಹರಿಸುವ ಯೋಗಕ್ಷೇಮ ಯಾತ್ರೆಯನ್ನು ಮಾಡಿದ್ದೆವು ಇದು ರಾಜ್ಯ ಸರ್ಕಾರದ ಜನಸೇವಕ ಎಂಬ ಯೋಜನೆಯ ಮೂಲವಾಗಿದೆ.
ನೆನ್ನೆ ಬೆಳಗ್ಗೆ ಪೇಪರ್ ಓದುವಾಗ ಹೆಚ್.ಡಿ.ಕೋಟೆಯ ಟ್ರೈಬಲ್ ಕಮ್ಯುನಿಟಿಯ ಓರ್ವ ಹೆಣ್ಣು ಮಗಳು ಓದಬೇಕು ಎಂದು ಅಳಲು ತೋಡಿಕೊಂಡಿದ್ದಳು ಅದನ್ನು ಗಮನಿಸಿ ಕೃಷ್ಣರಾಜ ಕ್ಷೇತ್ರದ ಪ್ರಶಿಕ್ಷಣ ವರ್ಗ ಮುಗಿಯೋ ಒಳಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದಾದರೂ ಒಂದು ಯೋಜನೆಯಿಂದ ಅನುಕೂಲ ಮಾಡಬೇಕೆಂದು ನಿರ್ಧರಿಸಿ ಕೂಡಲೇ ಸಮಾಜ ಕಲ್ಯಾಣ ಇಲಾಖೆಯ Pಇಖಿಅ(Pಡಿe ಇxಚಿmiಟಿಚಿಣioಟಿ ಖಿಡಿಚಿiಟಿiಟಿg ಅeಟಿಣeಡಿ) ಯೋಜನೆ ಅಡಿಯಲ್ಲಿ ಆ ಹೆಣ್ಣುಮಗಳಿಗೆ ಅನುಕೂಲ ಮಾಡಲು ತೀರ್ಮಾನಿಸಿದೆ.
ಎರೆಡು ದಿನ ನಡೆದ ಈ ಪ್ರಶಿಕ್ಷಣ ವರ್ಗದಲ್ಲಿ ಎಲ್ಲರು ಒಟ್ಟಿಗೆ ಸೇರಿ ನಮ್ಮ ಭಾವನೆ ಹಂಚಿಕೊಂಡಿರುತ್ತೇವೆ. ಈ ಪ್ರಶಿಕ್ಷಣ ವರ್ಗದಲ್ಲಿ ಕೆಲವರು ಸಂತೋಷವಾಗಿ, ಕಾಡಾಚಾರಕ್ಕೆ, ಬಲವಂತವಾಗಿ ಭಾಗಿಯಾಗಿರುತ್ತೀರಿ ಆದರೆ ಇದರ ಸದುಪಯೋಗ ಪಡೆಯುವ ಮೂಲಕ ಎಲ್ಲದ್ದನ್ನು ಸೂಕ್ಷಮವಾಗಿ ಗಮನಿಸಿ, ಅದನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಪಕ್ಷದ ಸಂಘಟನೆಯೆ, ರಾಷ್ಟ್ರಬಕ್ತಿಯೇ ಪರಮ ಉದ್ದೇಶ ಹೊಂದಿದ್ದ ಶ್ಯಾಮ ಪ್ರಸಾದ ಮುರ್ಖಜಿ ರವರು ಹಾಗೂ ದೇಶವನ್ನು, ದೇಶ ಸೇವೆಯನ್ನು ಆತ್ಮ ಎಂದು ಪರಿಗಣಿಸಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಬಗ್ಗೆ ಮಾಹಿತಿ ತಿಳಿಸಿದರು.
ಸಮಾರೋಪ ಭಾಷಣ ಮಾಡಿದ ರಾಜ್ಯ ಉಪಾಧ್ಯಕ್ಷರಾದ ರಾಜೇಂದ್ರ ರವರು ಇದುವರೆಗೂ ನಾನು 8 ಪ್ರಶಿಕ್ಷಣ ವರ್ಗಗಳಿಗೆ ಭಾಗವಹಿಸಿದ್ದೇನೆ ಎಲ್ಲದರಲ್ಲು ಕೃಷ್ಣರಾಜ ಕ್ಷೇತ್ರದ ಪ್ರಶಿಕ್ಷಣ ವರ್ಗ ಬಿನ್ನವಾಗಿ ಹಾಗೂ ಬಹಳ ವಿಶೇಷವಾಗಿ ಅತಿಅದ್ಬುತವಾಗಿದೆ ಎಂದು ತಿಳಿಸಿದಿರು.
ಕಳೆದ 25 ವರ್ಷಗಳಿಂದ ಜನಸೇವೆಯಲ್ಲಿ ಅಪಾರ ಅನುಭವ ಪಡೆದಿರುವ ಎಸ್.ಎ.ರಾಮದಾಸ್ ರವರು ಅಂತ್ಯೋದಯ ಯೋಜನೆಯನ್ನು ಪಂಡಿತ್ ದೀನ್ ದಯಾಳ್ ರವರ ಆಶಯದಂತೆ ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ಹಗಲಿರುಳು ಶ್ರಮಿಸುತಿದ್ದಾರೆ ಇವರ ಅನುಭವ ರಾಜ್ಯದ ಎಲ್ಲಾ ಕ್ಷೇತ್ರಕ್ಕೆ ಸಿಗಬೇಕಿದೆ ರಾಜ್ಯದ ಸಚಿವರಾಗಿ ಇವರಿಗೆ ಹೆಚ್ಚಿನ ಸೇವೆ ಸಲ್ಲಿಸಲು ಅವಕಾಶ ಸಿಗಬೇಕೆಂದು ಆಶಿಸಿದರು
ಸಮಾರೋಪ ಸಮಾರಂಭದಲ್ಲಿ ಪ್ರಶೀಕ್ಷಣ ವರ್ಗದ ಸಂಚಾಲಕರೂ ಹಾಗೂ ನಗರ ಪಾಳಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಕ್ಷೇತ್ರಾಧ್ಯಕ್ಷರಾದ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ನೂರ್ ಫಾತೀಮ, ನಾಗೇಂದ್ರ ಕುಮಾರ್.ಜೆ ಮುಂತಾದವರು ಉಪಸ್ಥಿತರಿದ್ದರು.
ಬೆಳಿಗ್ಗೆ ನಡೆದ ವರ್ಗವನ್ನುದೇಶಭಕ್ತಿ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯರಾದ ಗಣೇಶ್ ಕಾರ್ಣಿಕ್ ಅವರು ರಕ್ಷಣಾ ಸಾಮಥ್ರ್ಯದ ಜೊತೆಗೆ ಆತ್ಮನಿರ್ಭರ ಭಾರತದ ಸಂಕಲ್ಪ ಎಂಬ ವಿಷಯದ ಬಗ್ಗೆ ಮಾತನಾಡಿ ಮೊದಲು ಸೈನ್ಯದಲ್ಲಿ ಒಂದು ಗುಂಡು ಹೊಡೆಯಬೇಕಾದರೂ ಮೇಲಿನ ಅಧಿಕಾರಿಗಳ ಆಜ್ಞೆ ಬೇಕಿತ್ತು ಆದರೆ 1 ಗುಂಡು ಆ ಕಡೆಯಿಂದ ಬಂದರೆ 10 ಗುಂಡು ಹೊಡೆದು ನಂತರ ಮೇಲಿನವರಿಗೆ ತಿಳಿಸಿ ಎಂದು ಹೇಳುವ ನಾಯಕತ್ವ ನಮ್ಮಲ್ಲಿದೆ.
ಶೇಕಡಾವಾರು 80 ರಷ್ಟು ಸೈನ್ಯಕ್ಕೆ ಬೇಕಾದ ಪರಿಕರಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು ಆದರೆ ಇದೀಗ ನರೇಂದ್ರ ಮೋದಿ ನಾಯಕತ್ವದಲ್ಲಿ ಸೈನ್ಯಕ್ಕೆ ಬೇಕಾದ ಬಹುತೇಕ ಪರಿಕರಗಳನ್ನು ದೇಶದಲ್ಲೇ ಉತ್ಪಾದಿಸಿ ಹೊರ ದೇಶಕ್ಕೆ ರಫ್ತು ಮಾಡುವ ಹಂತಕ್ಕೆ ತಲುಪಿದ್ದೇವೆ ಈ ಕಲ್ಪನೆಯಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತದ ಕಲ್ಪನೆ ಅಡಗಿದೆ.
ಸೈನ್ಯದಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ತಮ್ಮ ಸ್ವಂತ ಅನುಭವವನ್ನು ಹೇಳಿಕೊಂಡ ಕ್ಯಾ.ಗಣೇಶ್ ಕಾರ್ಣಿಕ್ ಅವರು ಆಗಿನ ಕಾಲದಲ್ಲಿ ಕೈ ಗವಸು, ಬುಲೆಟ್ ಪ್ರೂಫ್ ಜಾಕೆಟ್, ಗಾಗಲ್ಸ್, ಸ್ನೋ ಜಾಕೆಟ್ಸ್ ಗಳ ಕೊರತೆಯಿಂದ ಸೈನಿಕರಾಗಿದ್ದ ತೊಂದರೆ ಬಗ್ಗೆ ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡರು ಆದರೆ ಇಂದು ಸೈನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹೆಚ್ಚಿನ ಮಹತ್ವ ನೀಡಿದ್ದು ಇದು ಆತ್ಮನಿರ್ಭರ ಭಾರತದ ಸಂಕಲ್ಪ ಅಲ್ಲದೇ ಮತ್ತಿನ್ನೇನು ಅಲ್ಲ ಎಂದು ಹೇಳಿದರು.
ಒಂದು ರಥ ಎಳಿಯುವಾಗ ಆ ಪುಣ್ಯ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಿ ಒಂದೇ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತೇವೆ ಅದೇ ರೀತಿ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿಯೂ ಎಲ್ಲರೂ ಒಗ್ಗಟ್ಟಾಗಿ ಕೈ ಜೋಡಿಸುವ ಕಾರ್ಯದಲ್ಲಿ ಆತ್ಮನಿರ್ಭರ ಭಾರತದ ಕಲ್ಪನೆ ಅಡಗಿದೆ.
ಪ್ರಪಂಚದ ಎಲ್ಲಾ ದೇಶಗಳೂ ಚೀನಾದ ಮೇಲೆ ಅವಲಂಬಿತರಾಗಬೇಕೆನ್ನುವ ಚಿಂತನೆಯಲ್ಲಿ ಚೀನಾ ದೇಶವು ಖಂಆIಅಂಐ ಇಘಿPಂಓSIಔಓISಒ ಅನ್ನು ಪ್ರಾರಂಭಿಸಿದೆ .
ನಮ್ಮ ದಿನನಿತ್ಯದ ಬದುಕಿನಲ್ಲಿ ಸ್ವದೇಶಿ ಚಿಂತನೆ ನಡೆಸುವುದರಲ್ಲಿ ಆತ್ಮನಿರ್ಭರ ಭಾರತ ಅಡಗಿದೆ. ರಕ್ಷಣಾ ಕ್ಷೇತ್ರದ ಜೊತೆಗೆ ಎಲ್ಲಾ ಕ್ಷೇತ್ರದಲ್ಲೂ ಪ್ರಪಂಚಕ್ಕೆ ಭಾರತ ಮುಂಚೂಣಿಯಲ್ಲಿರಬೇಕು ಸ್ವಾವಲಂಬಿ ಭಾರತವಾಗಬೇಕು ಇದೇ ಆತ್ಮನಿರ್ಭರತೆಯ ಕಲ್ಪನೆ.
ಈ ಹಿಂದಿನ ಕೇಂದ್ರ ಸರ್ಕಾರ ಹೇಳಿತ್ತು ನಮ್ಮ ಬಳಿಯಲ್ಲಿ ರಫೇಲ್ ಯುದ್ಧ ವಿಮಾನಗಳನ್ನು ತೆಗೆದುಕೊಳ್ಳಲು ಹಣವಿಲ್ಲ ಎಂದು. ಇದೀಗ ಅದನ್ನು ತೆಗೆದುಕೊಳ್ಳುವುದರ ಜೊತೆಗೆ ನಮ್ಮ ದೇಶದಲ್ಲೇ ನಾವು ದೇಶದಲ್ಲೇ ತಯಾರು ಮಾಡಲು ಹೊರಟಿದ್ದೇವೆ, 1962 ರ ಯುದ್ಧದಲ್ಲಿ ತುಕಡಿ ತುಕಡಿಗಳ ಸೈನಿಕರು ಪ್ರಾಣ ತೆತ್ತರು ಕಾರಣ ಅವರ ಬಳಿಯಲ್ಲಿ ಮದ್ದುಗುಂಡುಗಳ ಕೊರತೆ ಇತ್ತು ಆದರೆ ಈಗ ಆ ಪರಿಸ್ಥಿತಿ ಇಲ್ಲ. ಪರಂ ವೈಭವಂ ನೇತುಮೇತತ್ ಸ್ವರಾಷ್ಟ್ರಮ್ ಎಂಬ ಕಲ್ಪನೆಯಡೆಗೆ ನಾವೆಲ್ಲರೂ ಕೆಲಸ ನಿರ್ವಹಿಸಬೇಕಾಗಿದೆ. ಶತ್ರುಗಳೂ ಕೂಡಾ ನಮ್ಮನ್ನು ನೋಡಿ ಹೆದರುವಂತಹ ಆತ್ಮನಿರ್ಭರ ಭಾರತವಾಗಿ ನಾವು ಎದ್ದು ನಿಲ್ಲಬೇಕಿದೆ. ಸ್ವಂತವಾಗಿ ರಾಜಕೀಯ ಬೆಳವಣಿಗೆಯ ಕುರಿತು ಯೋಚನೆ ಮಾಡುವುದರ ಜೊತೆಗೆ ಭಾರತವನ್ನು ಆತ್ಮನಿರ್ಭರ ಮಾಡಬೇಕಿದೆ ಇದಕ್ಕೆ ನಾವೆಲ್ಲರೂ ಸಂಕಲ್ಪ ಮಾಡಬೇಕಿದೆ.