ಪ್ರಶಾಂತಕುಮಾರ ಶಾಸ್ತ್ರಿಗೆ ರಾಷ್ಟ್ರೀಯ ವೈದಿಕ ಶಿರೋಮಣಿ ಪ್ರಶಸ್ತಿ

ಸಿರವಾರ.ಜ.೧೧- ಬೆಂಗಳೂರಿನ ವೈದಿಕ ಚಾರಿಟೇಬಲ್ ಟ್ರಸ್ಟ್ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸಹಯೋಗದಲ್ಲಿ ನೀಡುವ ರಾಷ್ಟ್ರೀಯ ವೈದಿಕ ಶಿರೋಮಣಿ ಪ್ರಶಸ್ತಿಗೆ ತಾಲೂಕಿನ ಹರವಿ ಗ್ರಾಮದ ಬಸವೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ಜ್ಯೋತಿಷ್ಯ, ಶ್ರೀ,ವೇ,ಮೂ ಪ್ರಶಾಂತಕುಮಾರ ಶಾಸ್ತ್ರಿ ಶೀಲವಂತಮಠ ಅವರಿಗೆ ಒಲಿದು ಬಂದಿದೆ. ಬೆಂಗಳೂರಿನಲ್ಲಿ ಇದೆ ತಿಂಗಳು ೧೬ ರಿಂದ ೧೮ ವರೆಗೂ ಮೂರು ದಿನಗಳ ಕಾಲ ಜರುಗುವ ರಾಷ್ಟ್ರೀಯ ಮಟ್ಟದ ವೀರಶೈವ ಲಿಂಗಾಯತ ಅರ್ಚಕ ಪುರೋಹಿತರಿಗಾಗಿ ನೂತನ ಗೃಹ ಪ್ರವೇಶ ಪ್ರಯೋಗಿಕ ರಾಷ್ಟ್ರೀಯ ಮಟ್ಟದ ಕಾರ್ಯಗಾರದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕರ್ನಾಟಕ ಸಾಂಸ್ಕೃತಿಕ ವಿಶ್ವವಿದ್ಯಾಲಯದ ಉಪಕುಲಪತಿ ಮತ್ತು ನಿರ್ಧೇಶಕರಾದ ಡಾ. ಪ್ರಕಾಶ ಆರಗ ಪಾಗೋಜಿ ಬಿ ಎಸ್ ಪರಮಶಿವಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ರಾಯಚೂರು ಜಿಲ್ಲಾ ಪುರೋಹಿತ ಅರ್ಚಕರ ಸಂಘದ ಅದ್ಯಕ್ಷ ವಿದ್ವಾನ್ ಡಾ.ಗಂಗಾಧರಯ್ಯಸ್ವಾಮಿ, ಹಾಗೂ ಮಹಾಲಕ್ಷ್ಮಿ ಗುರುಕುಲದ ವೈದಿಕ ಚಾರಿಟೇಬಲ್ ಟ್ರಸ್ಟ್ ಅದ್ಯಕ್ಷ ವೇ.ಬ್ರ.ಶ್ರೀ ಕೆ.ಎನ್ ರಾಜಕುಮಾರ ಶಾಸ್ತ್ರಿಗಳು ತಿಳಿಸಿದ್ದಾರೆ