(ಸಂಜೆವಾಣಿ ವಾರ್ತೆ)
ಬಳ್ಳಾರಿ: ಜು,24- ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಪ್ರಶಾಂತಕುಮಾರ್ ಮಿಶ್ರಾ ನಿನ್ನೆ ಸಂಜೆ ಕಾರ್ಯಭಾರವಹಿಸಿಕೊಂಡಿದ್ದಾರೆ.
ಈ ವರಗೆ ಜಿಲ್ಲಾಧಿಕಾರಿಯಾಗಿದ್ದ ಪವನಕುಮಾರ ಮಾಲಪಾಟಿ ಕಾರ್ಯಭಾರ ಹಸ್ತಾಂತರಿಸಿದ್ದಾರೆ. ಇವರನ್ನು ಜು. 17ರಂದು ಸರ್ಕಾರ ವರ್ಗಾವಣೆಗೊಳಿಸಿ, ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಟಿ. ವೆಂಕಟೇಶ್ ಅವರನ್ನು ನೇಮಿಸಿತ್ತು. ಆದರೆ ಡಿಸಿ ನೇಮಕದ ಬಗ್ಗೆ ಜಿಲ್ಲೆಯ ಶಾಸಕರಲ್ಲಿನ ಅಸಮಾಧಾನದಿಂದಾಗಿ ವೆಂಕಟೇಶ್ ಅವರ ವರ್ಗಾವಣೆಯನ್ನು ಜು.21 ರಂದು ತಡೆ ಹಿಡಿದಿತ್ತು. ಈಗ ನೂತನ ಜಿಲ್ಲಾಧಿಕಾರಿಯಾಗಿ ಮಿಶ್ರಾ ಆಗಮಿಸಿದ್ದಾರೆ. ಇದರಿಂದ ಬಳ್ಳಾರಿ ಡಿಸಿ ನೇಮಕ ವಿಚಾರದಲ್ಲಾಗಿದ್ದ ಜಿಲ್ಲೆಯ ಜನಪ್ರತಿನಿಧಿಗಳ ನಡುವಿನ ತಿಕ್ಕಾಟಕ್ಕೆ ತೆರೆ ಬಿದ್ದಿದೆ.
ಐಎಎಸ್ 2014ನೇ ಬ್ಯಾಚ್ ನ ಮಿಶ್ರಾ ಅವರು. ಬಳ್ಳಾರಿಗೆ ಬರುವ ಮುನ್ನ ಬೆಂಗಳೂರಿನ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.