ಪ್ರಶಸ್ತಿ ಸಾಧಕರಿಗೆ ಜವಾಬ್ದಾರಿ ಹೆಚ್ಚಿಸುತ್ತದೆ:ರಾಮಲಿಂಗಶ್ರೀ

ತಾಳಿಕೋಟೆ:ಜು.17: ಸಾಧಕರಿಗೆ ನೀಡುವ ಪ್ರಶಸ್ತಿಗಳು ಕೇವಲ ಸಾಧನೆಗಾಗಿ ನೀಡಿದ ಪ್ರಶಸ್ತಿಗಳಲ್ಲಾ ಆ ಪ್ರಶಸ್ತಿ ಸಮಾಜದಲ್ಲಿ ಇನ್ನಷ್ಟು ಜವಾಬ್ದಾರಿಯುತವಾಗಿ ಕೆಲಸ ಮಾಡಲು ಪ್ರೇರಣೆ ನೀಡುವಂತವುಗಳಾಗಿವೆ ಎಂದು ಚಬನೂರಿನ ಹಿರೇಮಠದ ಜ್ಯೋತಿಷ್ಯರತ್ನ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ನುಡಿದರು.

ಶನಿವಾರರಂದು ತಮಿಳನಾಡಿನ ಹೊಸೂರಿನಲ್ಲಿ ಯುನವರ್ಶಲ್ ಡೆವ್ಹಲೆಪ್‍ಮೆಂಟ್ ಕೌನ್ಸಿಲ್ ಪೌಂಡೇಶನ್ ವತಿಯಿಂದ ಆಯೋಜಿಸಲಾದ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಅವರು ಸಮಾಜದಲ್ಲಿ ಜವಾಬ್ದಾರಿ ಹೊತ್ತು ಮಾಡಿದ ಸಾಧನೆ ಗುರುತಿಸಿ ನೀಡಲಾದ ಪ್ರಶಸ್ತಿ ಮತ್ತು ಗೌರವ ಮನೆಯಲ್ಲಿ ಇಡುವಂತಹದ್ದಲ್ಲಾ ಅಂತಹ ಪ್ರಶಸ್ತಿಗಳು ದೇಶದಲ್ಲಿಯ ಯುವ ಪಿಳಿಗೆಯ ಮೇಲೆ ಪರಿಣಾಮ ಬೀರುವದರೊಂದಿಗೆ ದೇಶದಲ್ಲಿ ಗುರುತರವಾದ ಜವಾಬ್ದಾರಿಯನ್ನು ಹೆಚ್ಚಿಸಬೇಕಾಗಿದೆ ನಮ್ಮ ಭಾರತ ದೇಶ ಪುಣ್ಯಭೂಮಿಯಾಗಿದೆ ಈ ಮಣ್ಣಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಸಾಧಕರನ್ನಾಗಿ ಕಾಣಬೇಕಾಗಿದೆ ಈ ಮಣ್ಣಿನ ಸತ್ವ ಮತ್ತು ಮಹತ್ವ ಬಹಳಷ್ಟಿದೆ ಇದನ್ನು ಅರೀತುಕೊಂಡು ಸಮಾಜದಲ್ಲಿ ಜವಾಬ್ದಾರಿಯುತವಾಗಿ ಎಲ್ಲರು ಸಾಗಬೇಕಾಗಿದೆ ಸಾಧಕರು ಎಂದು ಗುರುತಿಸಿಕೊಳ್ಳಲು ಹಣ ಬೇಕಿಲ್ಲಾ ಮಾಡುವ ಸಮಾಜ ಸೇವಾ ಕೆಲಸದಲ್ಲಿ ಪ್ರಾಮಾಣಿಕತೆ ಎಂಬುದು ಅಡಗಿರಬೇಕು ಆಗ ಇಡೀ ಸಮಾಜವೇ ನಮ್ಮನ್ನು ಗುರುತಿಸುತ್ತದೆ ಎಂದ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ನೀಡಲಾದ ಪ್ರಶಸ್ತಿ ಸಮಾಜವನ್ನು ಬದಲಾವಣೆಯತ್ತ ತರುವಂತದ್ದಾಗಲಿ ಸಾಧಕರು ಸಮಾಜದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿ ಯುವ ಪಿಳಿಗೆ ಸಾಧನೆಯ ಮೂಲಕ ದೇಶದ ಹೆಸರನ್ನು ಪ್ರಪಂಚದಾದ್ಯಂತ ಬೆಳಗಿಸುವಂತಹ ಕಾಲ ಕೂಡಿಬರಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೌಂಡೇಶನ್ ಅಧ್ಯಕ್ಷ ಡಾ.ಪಿ.ಸ್ಪೋಲ್ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಸತ್ಕರಿಸಲಾಯಿತು.

ವೇದಿಕೆಯ ಮೇಲೆ ಡಾ.ಕೆ.ಪ್ರಭಾಕರ, ಪಿ.ಶೆಲವನ್, ಜಿ.ರವಿ, ಚಂದ್ರಿಕಾ ಮೊದಲಾದವರು ಇದ್ದರು.