ಪ್ರಶಸ್ತಿ ಪ್ರದಾನ


ಲಕ್ಷ್ಮೇಶ್ವರ,ಮಾ.10: ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ದಿನಾಂಕ 12 ರಂದು ಮಂಗಳವಾರ ಸಂಜೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕೃತಿಕಾ ಮಾಗಡಿ ಅವರ ಏಳನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ನನ್ನಮ್ಮ ಸೂಪರ್ ಸ್ಟಾರ್ 2024 ಹಾಗೂ ಸುಕೃತಿಮಾ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ತಾಲೂಕ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷರಾದ ಮಂಜುನಾಥ್ ಮಾಗಡಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮತ್ತು ಕೃತಿಕಾ ಮಾಗಡಿ ಅವರ ಹುಟ್ಟು ಹಬ್ಬದ ಪ್ರಯುಕ್ತ ನನ್ನಮ್ಮ ಸೂಪರ್ ಸ್ಟಾರ್ 2024 ಎಂಬ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಅವರು ಇದು ತಾಯಿ ಮತ್ತು ಮಗಳ ಭಾಂದವ್ಯೆ ಬೆಸೆಯುವ ಮೋಜುನ ಆಟವಾಗಿದ್ದು ಈಗಾಗಲೇ ನೂರಕ್ಕೂ ಹೆಚ್ಚು ಸ್ಪರ್ದಾಳುಗಳು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಬಂಗಾರದ ಪದಕ ವಿಜೇತ ಕುಸ್ತಿಪಟು ಜಯಶ್ರೀ ಗುಡುಗುಂಟಿ ಇವಳಿಗೆ ಪ್ರಕೃತಿ ಮಾ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಹರಿಹರದ ಹರ ಕ್ಷೇತ್ರ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಜಗದ್ಗುರು ವಚನಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ ಅಧ್ಯಕ್ಷತೆಯನ್ನು ಸುನೀತಾ ಮಾಗಡಿ ವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡ ದೇವಣ್ಣ ಬಳಿಗಾರ ಮತ್ತು ಚಂಬಣ್ಣಾ ಬಾಳಿಕಾಯಿ ಅವರು ಪತ್ರಿಕಾಗೋಷ್ಠಿಯಲ್ಲಿ ಉದ್ಘಾಟನೆಯನ್ನು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಉಪಾಧ್ಯಕ್ಷರಾದ ವಸಂತ ಹುಲ್ಲತ್ತಿ ಅವರು ನೆರವೇರಿಸಲಿದ್ದು ಸುಕೃತಿಮಾ ಪ್ರಶಸ್ತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಮಾಡಲಿದ್ದಾರೆ ಉಪನ್ಯಾಸಕರಾಗಿ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಕೃಷಿಕ ಮಹಿಳೆ ರಾಜೇಶ್ವರಿ ಪಾಟೀಲ್ ನೀಡಲಿದ್ದು ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಸುಧಾ ಹುಚ್ಚಣ್ಣವರ್ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮವನ್ನು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಹಾಗೂ ಮುಖ್ಯ ಅತಿಥಿಗಳಾಗಿ ಜಯಮ್ಮ ಅಂದಲಗಿ ಮತ್ತು ನ್ಯಾಯವಾದಿ ನಂದಾ ಅಮಾಸಿ ಆಗಮಿಸಲಿದ್ದಾರೆ ಎಂದು ನಿವೃತ್ತ ಶಿಕ್ಷಕ ಎಸ್ ಎಫ್ ಆದಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗಂಗಾಧರ ಬಾಳಿಕಾಯಿ ಮಲ್ಲಣ್ಣ ಪಾಟೀಲ ಬಸವರಾಜ ಬಾಳೆಕಾಯಿ ಮಲ್ಲೇಶಣ್ಣ ಕಣವಿ ಶಿವನ ಗೌಡ್ರು ಅಡರಕಟ್ಟಿ ಗಂಗಾಧರ್ ಮೆಣಸಿನಕಾಯಿ ಬಸವರಾಜ್ ಕಲ್ಲೂರ ಶಿವಾನಂದ ಬನ್ನಿಮಟ್ಟಿ ಚಂದ್ರು ಮಾಗಡಿ ಇದ್ದರು.