
ಬೈಲಹೊಂಗಲ,ಮಾ29: ಚಿತ್ರದುರ್ಗದ ಕರುನಾಡ ಹಣತೆ ಕವಿ ಬಳಗದಿಂದ ತುಮಕೂರ ಜಿಲ್ಲಾ ಕರುನಾಡ ಹಣತೆ ಕವಿ ಬಳಗ ಮತ್ತು ಬುಕ್ಕಾಪಟ್ಟಣ ಕನ್ನಡ ಸಾಹಿತ್ಯ ಪರಿಷತ್ತ ಇವರ ಸಹಯೋಗದಲ್ಲಿ ತುಮಕೂರ ಜಿಲ್ಲೆ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣದಲ್ಲಿ ನಡೆದ ಕರುನಾಡ ಹಣತೆ ಕಲ್ಪತರೋತ್ಸವ ಸಮ್ಮೇಳನ 2023 ಮತ್ತು ಐದನೇ ವಾರ್ಷಿಕೊತ್ಸವದಲ್ಲಿ ಪತ್ರಕರ್ತ ಸಿ.ವಾಯ್.ಮೆಣಶಿನಕಾಯಿಯವರಿಗೆ ಕರುನಾಡ ಹಣತೆ ಸಿದ್ಧಗಂಗಾ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.