ಪ್ರಶಸ್ತಿ ಪ್ರದಾನ, ಸನ್ಮಾನ


ಹುಬ್ಬಳ್ಳಿ,ಜ.29:ಮನ್ಸೂರು ರೇವಣಸಿದ್ದೇಶ್ವರ ವಿದ್ಯಾಪೀಠ ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರು ಸಹಯೋಗದಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ನಡೆದ ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ -2023 ರ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕನಕ ಶ್ರೀ ರಾಜ್ಯ ಪ್ರಶಸ್ತಿ ಪುರಸ್ಕಾರ ಮಾಡಿ ಸನ್ಮಾನ ಮಾಡಲಾಯಿತು.
ಈ ಕನಕಶ್ರೀ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಹನಮಂತಪ್ಪ ಸಿದ್ದಪ್ಪ ಲಕ್ಷ್ಮೇಶ್ವರ ಅವರಿಗೆ ರಾಜನೀತಿ ಕನಕಶ್ರೀ ರಾಜ್ಯ ಪ್ರಶಸ್ತಿ ನೀಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ನೆರವೇರಿದರು. ಸಾನಿಧ್ಯವನ್ನು ಮನ್ಸೂರು ರೇವಣಸಿದ್ದೇಶ್ವರ ಮಹಾಮಠದ ಬಸವರಾಜ ದೇವರು ವಹಿಸಿದ್ದರು.