ಪ್ರಶಸ್ತಿ ಪ್ರದಾನ ಕಾರ್ಯಕ್ರಮ


ಅಣ್ಣಿಗೇರಿ,ಮಾ.12: ಸಮಾಜಕ್ಕೆ ಪರಿಸರದ ಬಗ್ಗೆ ಪ್ರಜ್ಞೆ ಹಾಗೂ ಜಾಗೃತಿಮೂಡಿಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಡಾ. ಸುರೇಶ್ ಹೆಬ್ಬಿಕರ್ ಅವರ ಕಾರ್ಯ ಶ್ಲಾಘನೀಯ ಎಂದು ಡಂಬಳ- ಗದಗ ಶ್ರೀ ಜಗದ್ಗುರು ತೋಂಟದಾರ್ಯ ಸಿದ್ಧರಾಮ ಸ್ವಾಮೀಜಿ ಹೇಳಿದರು

ಶ್ರೀಮತಿ ನಿಂಗಮ್ಮ ಎಸ್ ಹೂಗಾರ ಸಮೂಹ ವಿದ್ಯಾಲಯದಲ್ಲಿ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ರಾಜ್ಯಪ್ರಶಸ್ತಿ ಪ್ರಧಾನ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸರ್ಕಾರ ಅಭಿವೃದ್ಧಿ ಹೆಸರಲ್ಲಿ ಕಾರ್ಖಾನೆ ಸ್ಥಾಪನೆಗೆ ಅವಕಾಶ ನೀಡುತ್ತಿರುವುದರಿಂದ ನಮ್ಮ ಜೀವಕ್ಕೆ ಹಾನಿಯುಂಟಾಗುತ್ತಿದೆ. ರಸ್ತೆ ವಿಸ್ತರಣೆಗಾಗಿ ಮರಗಳನ್ನು ನಾಶ ಮಾಡುತ್ತಿರುವುದು ದುರದೃಷ್ಟಕರ. ಆಮ್ಲಜನಕ ನೀಡುವ ಗಿಡ-ಮರಗಳನ್ನು ಕಡಿದರೆ, ಜೀವಸಂಕುಲ ಬದುಕುವುದು ಕಠಿಣವಾಗುತ್ತದೆ’ ಎಂದರು.

ಲಿಂ, ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ರಾಜ್ಯ ಪ್ರಶಸ್ತಿ ಸ್ವೀಕರಿಸಿದ ಸುರೇಶ್ ಹಬ್ಬ್ಳೀಕರ್ ಮಾತನಾಡಿ, ‘ಈ ಪ್ರಶಸ್ತಿ ನೀಡುವ ಮೂಲಕ ಮತ್ತಷ್ಟುಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಪ್ರೇರಣೆ ನೀಡಿದ್ದಾರೆ. ಗಿಡ- ಮರ ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ’ ಎಂದರು.

ಸಾಹಿತಿ ಚಂದ್ರಶೇಖರ ವಸ್ತ್ರದ, ಸಮಾಜಕ್ಕೆ ಹೆಬ್ಳೀಕರ್ ಸೇವೆ ಅಗತ್ಯ ಎಂದರು. ಡಾ.ಸುಧಾ ಕೌಜಗೇರಿ, ಫೆÇ್ರ.ಎಸ್.ಎಸ್. ಹರ್ಲಾಪೂರ ಮಾತನಾಡಿದರು. ಅಬ್ದುಲ್‍ಖಾದರ್ ನಡಕಟ್ಟಿನ, ಮಲ್ಲಿಕಾರ್ಜುನ ಸುರಕೋಡ, ಹಾಲಪ್ಪ ತುರಕಾಣಿ, ಮುತ್ತಣ್ಣ ಹಾಳದೋಟರ, ಮುತ್ತಣ್ಣ ನವಲಗುಂದ, ಕೃಷ್ಣ ಜಿಂಗಾಡೆ, ಅನ್ವರಭಾಷಾ ಹುಬ್ಬಳ್ಳಿ, ಡಾ. ಶಾಂತಾ ಲಕ್ಷ್ಮೇಶ್ವರ, ಕುಸುಮಾ ಉಳ್ಳಾಗಡ್ಡಿ, ವೇದವತಿ ಕಟ್ಟಿ ಇನ್ನತರರು ಉಪಸ್ಥಿತರಿದ್ದರು