ಪ್ರಶಸ್ತಿ ಪ್ರದಾನ, ಉಪನ್ಯಾಸ

ಧಾರವಾಡ,ಏ3 : ನಾವು ನಿಮಗಾಗಿ ನೀವು ನಮಗಾಗಿ' ಎಂಬುದು ಸಹಕಾರಿ ಸಂಘದ ಮುಖ್ಯತತ್ವ. ಇದು ಆದರ್ಶ ಸಮಾಜದ ಬುನಾದಿ. ಸಾರ್ವತ್ರಿಕ ಸೇವೆ ಹಾಗೂ ಸಮ ಸಮಾಜ ನಿರ್ಮಿಸುವಲ್ಲಿ ಅದರ ಪಾತ್ರ ಹಿರಿದಾಗಿದೆ ಎಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ರಾಜೇಂದ್ರ ಪೋದ್ದಾರ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಪ್ರೊ.ಎಸ್.ಎಸ್. ದೇಸಾಯಿದತ್ತಿ ಉದ್ಘಾಟನೆ ಮತ್ತುಅನುಪಮ ಸಹಕಾರಿ’ ಪ್ರಶಸ್ತಿ ಪ್ರದಾನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಸ್ತುತ ಜಾಗತಿಕ ಸಂದರ್ಭದಲ್ಲಿ ಸಹಕಾರ ಕ್ಷೇತ್ರದ ಮುಂದಿರುವ ಸವಾಲುಗಳು ಮತ್ತು ಪರಿಹಾರಗಳು' ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು. ಭಾರತದಲ್ಲಿಯೇ ಮೊಟ್ಟಮೊದಲ ಸಹಕಾರಿ ಸಂಘವು ಅವಿಭಜಿತ ಧಾರವಾಡ ಜಿಲ್ಲೆಯ ಕಣಗಿನಹಾಳದಲ್ಲಿ 1905 ರಲ್ಲಿ ಪತ್ತಿನ ಸಹಕಾರಿ ಸಂಘ ಸಿದ್ಧನಗೌಡ್ರು ಪಾಟೀಲರಿಂದ ಸ್ಥಾಪನೆಯಾದದ್ದು. ಇದು ನಮ್ಮೆಲ್ಲರ ಹೆಮ್ಮೆ. ರೈತರನ್ನು ಮಧ್ಯವರ್ತಿಗಳ ಶೋಷಣೆಯಿಂದ ತಪ್ಪಿಸುವ ಉದ್ದೇಶವಾಗಿದೆ. ಇದುವ್ಯಕ್ತಿಗಾಗಿ ಸಮಾಜ, ಸಮಾಜಕ್ಕಾಗಿ ವ್ಯಕ್ತಿ’ ಎಂಬ ತತ್ವದಡಿ ಉಳಿತಾಯ ಹಾಗೂ ಸ್ವಸಹಾಯ ಎಂಬ ನೈತಿಕತೆ ಹಾಗೂ ಜೀವನ ವಿಧಾನದಗುರಿ ಹೊಂದಿದೆ.
ಆದರೆ 1990ರ ಅವಧಿಯಲ್ಲಿ ಜಾಗತೀಕರಣದ ಪ್ರಭಾವದಿಂದ ಕೃಷಿ ಹಾಗೂ ಸಹಕಾರಿ ಕ್ಷೇತ್ರ ನಮ್ಮಜೀವನ ವಿಧಾನದಲ್ಲಿ ಬದಲಾವಣೆ ತಂದಿತು. ಸಹಕಾರಿಕ್ಷೇತ್ರ ವಿಫಲವಾದರೆ ಗ್ರಾಮೀಣ ಕೃಷಿ ಬದುಕು ವಿಫಲವಾಗುತ್ತದೆ. ಸಹಕಾರಿ ಗುಣ ಪ್ರಕೃತಿ ಹಾಗೂ ನಮ್ಮ ಮನೆಯಿಂದ ಪ್ರಾರಂಭವಾಗಿ ವಿಶ್ವವ್ಯಾಪಿಯಾಗಿ ಹರಡಿದ್ದನ್ನು ನಾವು ಚಿಂತಿಸಲೇ ಇಲ್ಲ. ಬ್ರಿಟೀಷರು, ಭಾರತದ ಹಾಲು ಇಂಗ್ಲಂಡಿನಚರಂಡಿ ನೀರಿಗಿಂತಕಲುಷಿತ ಎಂಬ ಧೋರಣೆ ತಾಳಿದ ಸಂದರ್ಭದಲ್ಲಿ ಡಾ. ವರ್ಗೀಸ್ ಕುರಿಯನ್ ಸಹಕಾರಿ ತತ್ವದಡಿ ಅಮೂಲ' ಹಾಗೂಆನಂದ’ ಸಂಘ ಸ್ಥಾಪಿಸಿ ಕ್ಷೀರಕ್ರಾಂತಿ ಮಾಡಿ ಬ್ರಿಟೀಷರ ಧೋರಣೆ ವಿರುದ್ಧ ಕ್ರಾಂತಿಕಾರಕ ಬದಲಾವಣೆತಂದರು.
ಇಂದು ಸಹಕಾರಿ ತತ್ವದಡಿ ಪ್ರಾರಂಭವಾಗಿ `ಇಫ್ಕೋ'' ರೈತರಿಗಾಗಿ ರಸಗೊಬ್ಬರ ಕಾರ್ಖಾನೆ ಸ್ಥಾಪಿಸಿ ದಾಖಲೆ ಮಾಡಿದೆ.ಭಾರತದಲ್ಲಿ ಸಹಕಾರಿ ತತ್ವದಡಿ ಗೋಕಾಕದಲ್ಲಿ ವಿದ್ಯುತ್ ಸರಬರಾಜು ಯಲ್ಲಾಪೂರದ ತೋಟಗಾರಿಕಾ ಸಹಕಾರಿ ಸಂಘದ ಸಾಧನೆಗಳು ವಿಶ್ವವೇ ಬೆರಗು ಗೊಳಿಸುವಂತಿದೆ. ಪ್ರಸ್ತುತ ಸಂದರ್ಭದಲ್ಲಿ ಸಹಕಾರಿ ಸಾಧನೆ ಬಗ್ಗೆ ಚಿಂತನ-ಮಂಥನಅಗತ್ಯ. ಜಾಗತೀಕರಣದ ನೆಪದಲ್ಲಿ ಸಹಕಾರಿಕ್ಷೇತ್ರ ನಿರ್ಲಕ್ಷಿಸಿದರೆ ದುರ್ಭಿಕ್ಷೆ ತಪ್ಪಿದ್ದಲ್ಲ ಎಂದು ಹೇಳಿದರು. ಕರ್ನಾಟಕರಾಜ್ಯ ಸಹಕಾರಿ ಮಹಾಮಂಡಳದ ಅಧ್ಯಕ್ಷ ಜಿ.ಪಿ. ಪಾಟೀಲ ದತ್ತಿ ಉದ್ಘಾಟಿಸಿ ಮಾತನಾಡಿ, ಪ್ರೊ.ಎಸ್.ಎಸ್. ದೇಸಾಯಿ ಹಾಗೂ ಎಸ್.ಜಿ. ಪಾಟೀಲರು ಶ್ರೇಷ್ಠ ಸಹಕಾರಿಗಳು. ಇರ್ವರೂ ಆ ಕ್ಷೇತ್ರದಲ್ಲಿ ಪ್ರಾಮಾಣಿಕತೆ ನಿಸ್ವಾರ್ಥ ಭಾವನೆಯಿಂದ ಬದ್ಧತೆಯಿಂದ ಕಾರ್ಯನಿರ್ವಹಿಸಿದ್ದಾರೆ. ಆದರೆ ಇಂದು ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕತೆ ವಿಶ್ವಾಸದ ಕೊರತೆ ಇರುವುದ ವಿಷಾದನೀಯ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕ.ವಿ.ವಿ.ಯ ಎಮೆರಿಟಸ್ ಪ್ರಾಧ್ಯಾಪಕ ಡಾ.ಸಿ.ಆರ್.ಯರವಿನತೆಲಿಮಠ ಮಾತನಾಡಿ, ಪ್ರೊ.ಎಸ್.ಎಸ್. ದೇಸಾಯಿ ನನ್ನ ಶಿಷ್ಯ. ಅವರು ತಮ್ಮ ಗುರುಗಳಿಗಿಂತಲೂ ದೊಡ್ಡ ಸಾಧನೆ ಮಾಡಿದ್ದು ಸ್ಮರಣೀಯವಾದುದು.ಸಮಾಜಮುಖಿ ಚಿಂತಕರಾದ ಅವರೊಬ್ಬ ಶ್ರೇಷ್ಠ ಶೈಕ್ಷಣಿಕ, ಸಹಕಾರಿ ಧುರೀಣರು ಎಂದು ಶ್ಲಾಘಿಸಿದರು. ಧಾರವಾಡ ಕೆ.ಸಿ.ಸಿ. ಬ್ಯಾಂಕ್ ವಿಶ್ರಾಂತ ಪ್ರಧಾನ ವ್ಯವಸ್ಥಾಪಕ ಎಸ್.ಜಿ. ಪಾಟೀಲಅನುಪಮ ಸಹಕಾರಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಈ ಸಹಕಾರಿ ಪ್ರಶಸ್ತಿ ನನ್ನ ಹೊಣೆಗಾರಿಕೆ ಹೆಚ್ಚಿಸಿದೆ ಎಂದು ಹೇಳಿದರು.
ಕವಿ ಎಸ್.ಎಸ್. ಚಿಕ್ಕಮಠ ಪ್ರೊ.ಎಸ್.ಎಸ್. ದೇಸಾಯಿ ಕುರಿತು ಸ್ವರಚಿತ ಕವನ ವಾಚಿಸಿ ಸ್ಮರಣಿಕೆ ಸಲ್ಲಿಸಿದರು.ಪ್ರೊ.ಎಸ್.ಎಸ್. ದೇಸಾಯಿ ಉಪಸ್ಥಿತರಿದ್ದು ದತ್ತಿಯಉದ್ದೇಶ ಹಾಗೂ ಸಹಕಾರಿ ಕ್ಷೇತ್ರದತಮ್ಮ ಸಾಧನೆ ತಿಳಿಸಿದರು.
ವೀರಣ್ಣಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ,ಗುರು ಹಿರೇಮಠ, ದತ್ತಿದಾನಿ ಶೋಭಾದೇಸಾಯಿ, ಸುನೀಲ ಪಾಟೀಲ, ಲಿಂಗರಾಜ ಪಾಟೀಲ, ಚೇತನತಾಯಣ್ಣವರ್, ಮಲ್ಲಿಕಾರ್ಜುನ ಪಾಟೀಲ, ನಂದಾ ಪಾಟೀಲ, ಶರಣಪ್ಪ ಮೆಣಸಿನಕಾಯಿ, ಸಂಗಮೇಶ ಮೆಣಸಿನಕಾಯಿ, ಅನಸೂಯಾ ಮೆಣಸಿನಕಾಯಿ, ಪಾರ್ವತಿ ಮೆಣಸಿನಕಾಯಿ, ವೀರಭದ್ರಪ್ಪಕುಂಬಾರ, ಬಿ.ಡಿ. ಪಾಟೀಲ, ಸಿ.ಎಸ್. ಪಾಟೀಲ, ಪ್ರೊ. ಸವದಿ, ಸುಬ್ಬಾಪೂರಮಠ ಸೇರಿದಂತೆ ಕುಮಾರೇಶ್ವರ ಸಹಕಾರಿ ಗೃಹ ನಿರ್ಮಾಣ ಸಂಘದ ನಿರ್ದೇಶಕರು, ದೇಸಾಯಿ ಪರಿವಾರದವರು ಉಪಸ್ಥಿತರಿದ್ದರು.