ಪ್ರಶಸ್ತಿ ಪುರಸ್ಕøತ ಡಾ.ಮಹಾದೇವಪ್ಪ ಗಾದಗೆ ಅವರಿಗೆ ಸನ್ಮಾನ

ಕಲಬುರಗಿ,ಏ.25- ಪ್ರತಿಷ್ಠಿತ ಬಿಇಎಸ್‍ಟಿ ಅತ್ಯುತ್ತಮ ತರಬೇತಿ ಮತ್ತು ಉದ್ಯೋಗಾಧಿಕಾರಿ ಪ್ರಶಸ್ತಿ ಪುರಸ್ಕøತರಾದ ಡಾ.ಮಹಾದೇವಪ್ಪ ಜಿ.ಗಾದಗೆ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ನಗರದ ಪಿಡಿಎ ಕಾಲೇಜಿನಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಡಾ.ಎಸ್.ಎಸ್.ಹೆಬ್ಬಾಳ ವಹಿಸಿದ್ದರು. ಡಾ.ರವಿಂದ್ರ ಲಠ್ಠೆ ಸ್ವಾಗತಿಸಿದರು. ಅಕಾಡೆಮಿಕ್ ಡೀನ್ ಡಾ.ಸಿದ್ರಾಮ ಆರ್.ಪಾಟೀಲ, ಉಪ ಪ್ರಾಚಾರ್ಯರಾದ ಡಾ.ಶಶಿಧರ ಕಲಶೆಟ್ಟಿ ಅವರ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಡಾ.ಮಲ್ಲಿಕಾರ್ಜುನ ವಡ್ಡನಕೇರಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಅಕ್ಷಯ ಎ. ಅವರು ಪ್ರಶಸ್ತಿಯ ಕುರಿತು ತಮ್ಮ ಅನಸಿಕೆಯನ್ನು ವ್ಯಕ್ತಪಡಿಸಿದರು. ಪ್ರೊ.ಶರಣ ಪಡಶೆಟ್ಟಿ, ಪ್ರೊ.ಅವಿನಾಶ ಸಾಂಬ್ರಾಣಿ, ಡಾ.ನಾಗೇಶ ಸಾರಿಮಠ, ಡಾ.ಬಾಬುರಾವ ಶೇರಿಕಾರ, ಕಾಂತರಾಜ, ಭಾರತಿ ಹಿರೇಮಠ, ಆಶಿಷ ಬಡಶೇಷಿ ಮತ್ತು ಖಾಜಾ ಹುಸೇನ ಸೇರಿದಂತೆ ಹಲವರು ಭಾಗವಹಿಸಿದ್ದರು.