ಪ್ರಶಸ್ತಿ ಪುರಸ್ಕøತರಿಗೆ ಸನ್ಮಾನ


ಕುಂದಗೋಳ,ಮಾ.12: ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಅಮೂಲ್ಯವಾದ ಸೇವೆಗಾಗಿ ವೈದ್ಯರ ಪಿತಾಮಹ ಭಾರತ ರತ್ನ ಪುರಸ್ಕೃತ ಡಾ. ಬಿ.ಸಿ.ರಾಯ್ ಪ್ರಶಸ್ತಿ ಪಡೆದ ತಾಲೂಕು ಆಸ್ಪತ್ರೆಯ ಮೂವರು ಸಿಬ್ಬಂದಿಯನ್ನು ಪಟ್ಟಣದ ಭೋವಿ ಸಮಾಜದ ವತಿಯಿಂದ ಸಮ್ಮಾನಿಸಲಾಯಿತು.
ಗೌರವ ಸ್ವೀಕರಿಸಿದ ಡಾ.ಎಸ್.ಎಮ್. ಕಗ್ಗಲಗೌಡರ ಮಾತನಾಡಿ ವೈದ್ಯರಲ್ಲಿ ಮನಸ್ಸು ಶಾಂತವಾಗಿ ಹಾಗೂ ದೇಹದಲ್ಲಿ ಹುಮ್ಮಸ್ಸು ಈ ಎರಡು ಲಕ್ಷಣಗಳು ಇದ್ದರೆ ಮಾತ್ರ ಈ ಮಟ್ಟಕ್ಕೆ ಬೆಳೆಯಲು ಸಾಧ್ಯ.ಬರುವ ರೋಗಿಗಳ ನೋವುಗಳನ್ನು ಅರ್ಥ ಮಾಡಿಕೊಂಡು ಆಸ್ಪತ್ರೆಯ ಸಿಬ್ಬಂದಿ ಎಲ್ಲರು ಕೈಜೋಡಿಸಿ ಕೆಲಸ ಮಾಡಿದರೆ ಮಾತ್ರ ನಾವೆಲ್ಲರೂ ಬೆಳೆಯುತ್ತೇವೆ. ಬಿಸಿ ರಾಯ್ ಪ್ರಶಸ್ತಿಯನ್ನು ತುಮಕೂರುನಲ್ಲಿ ತೆಗೆದುಕೊಂಡ ವೇಳೆ ಸಿಗದ ಆನಂದ ಕುಂದಗೋಳದ ನಾಗರಿಕರು ನಮ್ಮನ್ನು ಸನ್ಮಾನಿಸಿದಕ್ಕೆ ತಂಬಾ ಸಂತೋಷ ವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು ಅಲ್ಲದೆ ನನಗೆ ಮಾಡಿದ ಸಮ್ಮಾನ ಪ್ರಶಸ್ತಿ ನಮ್ಮ ಆಸ್ಪತ್ರೆಗೆ ಸಲ್ಲಬೇಕು ಎಂದರು.
ಪ್ರಶಸ್ತಿ ಪಡೆದು ಜೊತೆಗೆ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಡಾ. ರವೀಂದ್ರ ಭೋವೆರ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪ್ರಶಸ್ತಿ ಪಡೆದ ಡಾ. ಗಿರೀಶ್ ಚಿಕ್ಕನರಗುಂದ ಹಾಗೂ ತಾಲೂಕು ವೈದ್ಯಾಧಿಕಾರಿಯಾಗಿ ನೇಮಕಗೊಂಡ ಡಾ. ವಿದ್ಯಾವತಿ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವವರ ಪರವಾಗಿ ಡಾ! ಸಂತೋಷ್ ಹಾಸಲಕರ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಭಾಗೀರತಿ ಮೆಡ್ಲೇರಿ,ಡಾ! ರವೀಂದ್ರ ನಾಯಕ್,ಡಾ. ತಮ್ಮಯ್ಯ,ಡಾ. ವಿನಾಯಕ ಗಟ್ಟಿ,ಕಿಟ್ಟಪ್ಪ ಭೋವಿ,ಅಂಕುಶ ಭೋವಿ, ಈಶ್ವರಪ್ಪ ಭೋವಿ,ಅನಸವ್ವ ಭೋವಿ,ಶಂಕರ ಭೋವಿ, ರಾಘವೇಂದ್ರ ಭೋವಿ, ಭರಮಪ್ಪ ಭೋವಿ,ಕಿರಣ ಭೋವಿ, ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.