ಪ್ರಶಸ್ತಿ ಪುರಸ್ಕೃತ ರಾಣಾಜಿ, ಕೊರೊನಾ ವಾರಿಯರ್ಸಗೆ ಸನ್ಮಾನ

ರಾಯಚೂರು,ಜ.೦೯- ಸಮಾಜದಲ್ಲಿ ನಿರಂತರವಾಗಿ ಜನರ ಸೇವೆ ಮಾಡುವವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸುವುದು, ಅವರಿಗೆ ಮತ್ತಷ್ಟು ಸಮಾಜ ಮುಖಿ ಕೆಲಸ ಮಾಡಲು ಪ್ರೇರೆಪಿಸಿದಂತೆ ಎಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್ ಬೋಸರಾಜು ಅಭಿಪ್ರಾಯ ತಿಳಿಸಿದರು.
ನಗರದ ಸಿಯಾತಲಾಬ್ ಬಡಾವಣೆಯಲ್ಲಿರುವ ಶ್ರೀ ಇಛ್ಛ ವರದಾನಿ ಅಂಬಾಭವಾನಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜ ಸೇವಕರಿಗೆ ಪ್ರೋತ್ಸಾಹಿಸುವ ಕೆಲಸ ಶ್ಲಾಘನೀಯವಾಗಿದೆ.
ಕರೋನಾ ಸಂದರ್ಭದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರ ನಿರಂತರ ಜನರ ಸೇವೆ ಪ್ರಶಂಶನೀಯವಾಗಿದೆ ಎಂದರು. ನಂತರ ನಗರ ಸಭೆ ಹಿರಿಯ ಸದಸ್ಯರಾದ ಜಯಣ್ಣ ಮಾತನಾಡಿ, ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜ ಸೇವಕರನ್ನು ಗುರುತಿಸುವ ಕಾರ್ಯ ಶ್ಲಾಘನೀಯವಾಗಿದೆ. ಕರೋನಾ ಸಂದರ್ಭದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮನೆಬಾಗಿಲಿಗೆ ಹೋಗಿ ಸೇವೆ ಮಾಡಿದ್ದು ಮರೆಯಲು ಸಾಧ್ಯವಿಲ್ಲ ಎಂದರು.
ನಂತರ ಗೃಹ ರಕ್ಷಕದಳ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಪರಿಗಣಿಸಿ ಮುಖ್ಯ ಮಂತ್ರಿ ಪದಕ ಹಾಗೂ ರಾಷ್ಟ್ರ ಪ್ರಶಸ್ತಿಗೆ ಭಾಜನರಾದ ರಾಣಾಜಿ ಅವರನ್ನು ಹಾಗೂ ಕಳೆದ ಮೂರು ವರ್ಷಗಳಿಂದ ಕರೋನಾ ಮಹಾಮಾರಿ ನಿಯಂತರಣಕ್ಕೆ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರನ್ನು ಹಾಗೂ ಬಡಾವಣೆಯ ಹಿರಿಯ ನಾಗರಿಕರನ್ನು ಎಐಸಿಸಿ ಕಾರ್ಯದರ್ಶಿಗಳಾದ ಎನ್.ಎಸ್ ಬೋಸರಾಜು ಅವರು ಗೌರವಿಸಿ ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ನಗರಸಭೆ ಹಿರಿಯ ಸದಸ್ಯರಾದ ಜಯಣ್ಣ, ಕೆ. ಶಾಂತಪ್ಪ, ಜಿ ಶಿವಮೂರ್ತಿ, ನರಸಿಂಹಲು ಮಾಡಗಿರಿ, ಬೀಮರಾಯ್, ಬಸವರಾಜ್ ಪಾಟೀಲ ಅತ್ತನೂರು, ಶಾಲಂ, ರಾಜೇಶ್ ಸೇರಿದಂತೆ ಬಡಾವಣೆಯ ಅನೇಕರು ಇದ್ದರು.