ಪ್ರಶಸ್ತಿ ಪುರಸ್ಕಾರಗಳಿಂದ ಸಾಮಾಜಿಕ ಜವಾಬ್ದಾರಿ ಹೆಚ್ಚಾಗುತ್ತದೆ : ವೀರಭದ್ರಪ್ಪ ಉಪ್ಪಿನ

ಬೀದರ:ಜ.2:ಗೌರವ ಸನ್ಮಾನ ಪ್ರಶಸ್ತಿ ಪುರ ಸ್ಕಾರಗಳನ್ನು ನೀಡುವುದರಿಂದ ಅದನ್ನು ಪಡೆದವರಿಗೆ ಸಾಮಾ ಜಿಕ ಜವಾಬ್ದಾರಿ ಹೆಚ್ಚಾಗುತ್ತದೆ ಎಂದು ಪಶು ವೈದ್ಯಕೀಯ ವಿಶ್ವ ವಿದ್ಯಾಲಯದಲ್ಲಿ ನಿವೃತ್ತ ಉಪ ಹಣಕಾಸು ಅಧಿಕಾರಿಯಾದ ವೀರಭದ್ರಪ್ಪ ಉಪ್ಪಿನರವರು ಅಭಿಪ್ರಾಯ ಪಟ್ಟರು.
ಅವರು ಬೀದರ್ ಜಿಲ್ಲೆಯ ಚಿಟಗುಪ್ಪ ಪಟ್ಟಣ ದಲ್ಲಿ ಶ್ರೀಮತಿ ಶರಣ ಮ್ಮ ಗುರಯ್ಯ ಮಾಸ್ಟರ್ ಟ್ರಸ್ಟ್ ವತಿಯಿಂದ ನೀಡಲಾದ “2023 ನೇ ಸಾಲಿನ ರಾಜ್ಯ ಮಟ್ಟದ ಮಾಸ್ಟರ್ ಪ್ರಶಸ್ತಿ” ಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ವಿಶ್ವವಿದ್ಯಾಲಯದ ಸೇವೆ ಯಿಂದ ನಿವೃತ್ತರಾದ ಮೇಲೆ, ಸದಾ ಸಾಮಾಜಿಕ ಚಟುವಟಿಕೆ ಗಳಲ್ಲಿ ಗುರುತಿಸಿಕೊಂಡಿರುವ ತಮಗೆ ಈ ರಾಜ್ಯ ಮಟ್ಟದ ಪ್ರಶಸ್ತಿಯಿಂದ ಸಾರ್ವಜನಿಕ ಚಟುವಟಿಕೆಗಳಲ್ಲಿ ಮತ್ತಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳು ವಂತೆ ಪ್ರೇರಣೆ ನೀಡಿದೆ ಎಂದ ರು. ತಮ್ಮ ವಿವಿಧ ಚಟುವಟಿಕೆ ಗಳನ್ನು ಗುರುತಿಸಿ ಈ ಟ್ರಸ್ಟ್ ನೀಡಿರುವ ಪ್ರಶಸ್ತಿಗೆ ಹರ್ಷ ವ್ಯಕ್ತ ಪಡಿಸಿದರು. ಶರಣ ಬಸ ವೇಶ್ವರ ಕಾಲೇಜಿನ ಶಿಕ್ಷಕಿ ಹಾಗೂ ಟ್ರಸ್ಟನ ಕಾರ್ಯದರ್ಶಿ ಶ್ರೀಮತಿ ಮಂಗಲಾ ವೆಂಕಟೇಶ ಕಪರೆಯವರು ಪ್ರಾಸ್ತಾವಿಕವಾಗಿ ಮಾತನಾಡಿ, 1950-1970 ರ ಅವಧಿಯಲ್ಲಿ, ಚಿಟಗುಪ್ಪ ಪಟ್ಟಣದಲ್ಲಿ ಮನೆ ಪಾಠಕ್ಕೆ ಹೆಸರುವಾಸಿಯಾದ ತಮ್ಮ ತಂದೆಯವರಾದ ದಿವಂಗತ ಗುರಯ್ಶಾ ಸ್ವಾಮಿಯವರಿಗೆ ಜನರು ಪ್ರೀತಿಯಿಂದ ಮಾಸ್ಟರ್ ಎಂದೇ ಸಂಬೋಧಿಸುತ್ತಿದ್ದರು.(1977 ರಲ್ಲಿ ನಿಧನರಾಗಿದ್ದಾರೆ) ಆದ್ದರಿoದಲೆ ನಮ್ಮ ಟ್ರಸ್ಟ್ ನಿoದ ಪ್ರತಿ ವರ್ಷ ಸಾಮಾಜಿಕ ಸೇವೆ, ಶಿಕ್ಷಣ, ಕಲೆ, ಸಾಹಿ ತ್ಯ, ಸಂಸೃತಿ, ಸಾಂಸ್ಕøತಿಕ, ಹೋರಾ ಟ ಮುಂತಾದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗುರುತಿಸಿ, ಅವರಿಗೆ “”ರಾಜ್ಯ ಮಟ್ಟದ ಮಾಸ್ಟರ್ ಪ್ರಶಸ್ತಿ”” ಯನ್ನು ನೀಡಲು ನಿರ್ಧರಿಸಲಾಗಿದೆ. ಅದರ ಅಡಿಯಲ್ಲಿ ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ವೀರಭದ್ರಪ್ಪ ಉಪ್ಪಿನರವರಿಗೆ 2023 ನೆ ಮಾಸ್ಟರ್ ರಾಜ್ಯ ಪ್ರಶಸ್ತಿಯನ್ನು ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ನುಡಿದರು. ಟ್ರಸ್ಟ್ ನ ಅಧ್ಯಕ್ಷೆಯಾದ ಜ್ಯೋತಿ ವಿ. ಮಠ ಪತಿಯವರು ಅಧ್ಯಕ್ಷೀಯ ಭಾಷಣ ಮಾಡಿದರು. ಪ್ರವೀಣ್ ಮಠಪತಿಯವರು ನಿರೂಪಿಸಿ ದರು. ಕೊನೆಯಲ್ಲಿ ಈರಯ್ಯ ಮಠಪತಿಯವರು ವಂದಿಸಿ ದರು. ರಾಜಶೇಖರ್ ಉಪ್ಪಿನ,ಶಿವಕುಮಾರ್, ಪ್ರೀತಿ ವಿಷ್ಣು ಪ್ರಭಾಕರ್, ತಾರಾಬಾಯಿ, ರೇಣುಕಾ, ಸುಶೀಲಾ ಎಂ. ಶೀಲಾವತಿ ಪಾಟಿಲ್, ಬಸಯ್ಯ ಸ್ವಾಮಿ, ರೇಣು ಕಾ, ಶಾಂತ ಯ್ಯಾ ಸ್ವಾಮಿ, ಜೈಶ್ರೀ ರಾಜಾ ಪುರ, ಸರಸ್ವತಿಬಾಯಿ ಉಪ್ಪಿನ, ಕೆದಾರ್, ರೇಖಾ ಆರ್. ಉಪ್ಪಿನ, ಮುಂತಾದವರು ಹಾಜರಿದ್ದರು