ಪ್ರಶಸ್ತಿ ಪದವಿಗಳಿಂದ ದೂರ ಇರಬೇಕು; ಪಂಡಿತಾರಾಧ್ಯ ಶ್ರೀ

ಸಂಜೆವಾಣಿ ವಾರ್ತೆ

ಸಾಣೇಹಳ್ಳಿ; ಫೆ.22; ಪ್ರಶಸ್ತಿ ಪದವಿಗಳಿಂದ ದೂರ ಇರಬೇಕು ಎನ್ನುವುದು ಶರಣರ ಆಶಯ. ಯಾರು ಅಪರೂಪದ ಸಾಧನೆಯನ್ನು ಮಾಡಿರುತ್ತಾರೋ ಅಂತಹ ವ್ಯಕ್ತಿಯ ಬೆನ್ನು ತಟ್ಟಿದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಧನೆ ಮಾಡಲಿಕ್ಕೆ ಸ್ಪೂರ್ತಿ ದೊರೆಯುತ್ತದೆ. ಎಷ್ಟೋ ಸಂದರ್ಭದಲ್ಲಿ ಸಾಧನೆ ಮಾಡಿರುವಂಥವರನ್ನು ಮರೆತು ಇನ್ಯಾರಿಗೋ ಪ್ರಶಸ್ತಿಯನ್ನು ಕೊಡುವಂಥ ಪದ್ಧತಿ ನಮ್ಮಲ್ಲಿದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು. ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಛಯದಲ್ಲಿ ನಡೆದ ನಂಜುಂಡಸ್ವಾಮಿ ನೆನಪಿನ ಪ್ರಶಸ್ತಿ ಪ್ರದಾನ ಸಮಾರಂಭ-2024 ರ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿ ನಮ್ಮ ಸರಕಾರ ರಾಜ್ಯೋತ್ಸವ ಪ್ರಶಸ್ತಿ ಕೊಡ್ತಾ ಇದೆ. ಈ ಪ್ರಶಸ್ತಿಯನ್ನು ಪಡೆದುಕೊಳ್ಳಲಿಕ್ಕೆ ಅನೇಕರು ಶಿಫಾರಸ್ಸು ಮಾಡಿಸಿ ಪ್ರಶಸ್ತಿ ಪಡೆದುಕೊಳ್ಳುವರು. ಆಗ ಆ ಪ್ರಶಸ್ತಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತೆ. ಆದರೆ ಇಲ್ಲಿ ನಂಜುಂಡಸ್ವಾಮಿಯವರ ಹೆಸರಿನಲ್ಲಿ ಗೌರವ ತರುವ ನಿಟ್ಟಿನಲ್ಲಿ ಹೂಲಿ ಶೇಖರ್‌ರವರು ಪ್ರಶಸ್ತಿಗೆ ಭಾಜನರಾಗಿರುವುದು ಅಭಿನಂದನಾರ್ಹ. ಹೂಲಿ ಶೇಖರ್‌ರವರು ಈ ಪ್ರಶಸ್ತಿಗೆ ಅರ್ಜಿಹಾಕಿ ಪಡೆದುಕೊಂಡವರಲ್ಲ. ನೀವೇ ಅವರನ್ನು ಗುರುತಿಸಿ ಗೌರವಿಸಿರುವುದು. ಆಗ ಪ್ರಶಸ್ತಿ ಪಡೆದುಕೊಂಡAಥವರಿಗೂ ಗೌರವ, ಪ್ರಶಸ್ತಿ ಕೊಟ್ಟವರಿಗೂ ಗೌರವ ಬರುತ್ತೆ. ನಂಜುAಡ ಸ್ವಾಮಿಯವರು ಒಂದು ರೀತಿಯಲ್ಲಿ ಡಾಕ್ಟರ್ ಇದ್ದಂಗೆ. ಯಾರಿಗಾದರೂ ಖಾಯಿಲೆಯಾಗಿದ್ದರೆ ನಾವು ಪತ್ರ ಕಳಿಸುತ್ತಿದುದು ಡಾ. ಮಂಜುನಾಥ್‌ರವರಿಗೆ ಅಲ್ಲ; ನಂಜುAಡಸ್ವಾಮಿಯವರಿಗೆ. ಆಗ ಆ ಪತ್ರ ಮಂಜುನಾಥ್‌ರವರ ಹತ್ತಿರ ಹೋಗ್ತಾ ಇತ್ತು. ಆಗ ರೋಗಿಗೆ ಚಿಕಿತ್ಸೆ ಕೊಡಿಸಿ ಯಾವುದೇ ಖರ್ಚಿಲ್ಲದೇ ರೋಗಿಗಳಿಗೆ ಚಿಕಿತ್ಸೆ ಕೊಡ್ತಾ ಇದ್ದರು. ನಂಜುAಡಸ್ವಾಮಿ ಒಬ್ಬ ಅಪ್ಪಟ ಮಾನವೀಯತೆ ಇರುವಂಥ ವ್ಯಕ್ತಿ. ಎಲ್ಲರನ್ನು ಪ್ರೀತಿಸುವ ಗುಣ ಅವರಲ್ಲಿತ್ತು. ಯಾರನ್ನು ದ್ವೇಷಿಸುವಂಥ ಸ್ವಭಾವ ಅವರಲ್ಲಿರಲಿಲ್ಲ. ಅವರೇನೇ ಬರೆದರೂ ಹತ್ತಾರು ಜನರ ಜೊತೆಗೆ ಹಂಚಿಕೊಳ್ಳುತ್ತಿದ್ದರು. ಮಾದಾರ ಚೆನ್ನಯ್ಯ ನಾಟಕ ಬರೆದು ಮೊದಲು ಶಿವಸಂಚಾರ ನಾಟಕ ತಂಡದಿAದಲೇ ಪ್ರಯೋಗ ಆಗಬೇಕು ಎಂದು ನಮಗೆ ಹೇಳಿದರು. ಒಬ್ಬ ವ್ಯಕ್ತಿ ತನ್ನ ಸ್ವ ಆಸಕ್ತಿಯಿಂದ ರಂಗಭೂಮಿಗೆ ಬಂದು ನಾಟಕ ರಚಿಸಿದರು. ಸಂಘಟನೆ ಮಾಡಿದರು. ಯಾರು ಒಳ್ಳೆಯ ಕೆಲಸ ಮಾಡಿತ್ತಾರೋ ಅವರನ್ನು ಗುರುತಿಸಿ ಗೌರವಿಸುವಂಥ ದೊಡ್ಡ ಗುಣ ತೋ ನಂಜುAಡಸ್ವಾಮಿಯವರಲ್ಲಿತ್ತು. ಎಲ್ಲರನ್ನೂ ಒಂದು ಕಡೆ ಸೇರಿಸಿ ಗೌರವಿಸುವಂಥ ಒಬ್ಬ ಮಾನವೀಯ ಗುಣವುಳ್ಳ ವ್ಯಕ್ತಿ. ಯಾರು ಒಳ್ಳೆಯ ಕೆಲಸ ಮಾಡಿ ಸಮಾಜಮುಖಿ ಇರುವಂಥ ಚಿಂತನೆಯನ್ನಿಟ್ಟುಕೊAಡು ಸೇವಾ ಕಾರ್ಯಗಳನ್ನು ಮಾಡ್ತಾರೋ ಅಂಥವರನ್ನು ಜನರು ಬೇಗ ಮರೆತುÀಬಿಡ್ತಾರೆ. ಆದರೆ ನಂಜುAಡಸ್ವಾಮಿಯವರನ್ನು ಮರೆಯದೇ ಅವರ ಹೆಸರಿನಲ್ಲಿ ಪ್ರಶಸ್ತಿ ಕೊಡ್ತಾ ಇರುವಂಥದ್ದು ಬಹಳ ಸಂತೋಷ ಪಡಬೇಕಾದ ವಿಷಯ.ಈ ಪ್ರಶಸ್ತಿ ಪಡೆದುಕೊಂಡವರು ಹೂಲಿಶೇಖರ್‌ರವರು. ಹೂಲಿಶೇಖರ್ ತುಂಬಾ ಸೊಗಸಾಗಿ ನಾಟಕಗಳನ್ನು ಕಟ್ಟಿಕೊಡುವ ಗುಣ ಅವರಲ್ಲಿದೆ. ಅಂತಹ ಒಬ್ಬ ಪ್ರತಿಭಾನ್ವಿತರನ್ನು ಗುರುತಿಸಿರುವಂಥದ್ದು ಆ ಪ್ರಶಸ್ತಿಗೆ ಹಾಗೂ ನಂಜುAಡಸ್ವಾಮಿಯವರಿಗೆ ನಿಜವಾಗಿಯೂ ಗೌರವ ಸಂದ ಹಾಗೆ ಎಂದರು. ಈ ಸಂದರ್ಭದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್, ರಂಗಸAಘಟಕ ಶ್ರೀನಿವಾಸ ಜಿ ಕಪ್ಪಣ್ಣ, ಚಲನಚಿತ್ರ ನಿರ್ದೇಶಕ ಬಿ ಸುರೇಶ್ ಮಾತನಾಡಿದರು. ಕೊನೆಯದಾಗಿ ನಟನ ಮೈಸೂರು ತಂಡದವರು ಕಣಿವೆಯ ಹಾಡು ನಾಟಕ ಪ್ರದರ್ಶನ ಮಾಡಿದರು.