ಪ್ರಶಸ್ತಿಗೆ ಆಯ್ಕೆ

ಧಾರವಾಡ,ಸೆ14: ಶ್ರೀಮತಿ ಇಂದುಮತಿ ಹಾಗೂ ನಾಡೋಜ ಡಾ. ಪಾಟೀಲ ಪುಟ್ಟಪ್ಪ ದಂಪತಿಗಳ ಪುತ್ರಿ ದಿ. ಶಾಂತಲಾ ಪಾಟೀಲ ಹೆಸರಿನಲ್ಲಿ ಶಾಂತಲಾ ಪಾಟೀಲ ಅವರ ಮಗಳು ವಿಜಯಮಾಲಾ ಅವರು ಇರಿಸಿದ ದತ್ತಿ ಅಂಗವಾಗಿ ಪ್ರತಿ ವರುಷ ಕೊಡಮಾಡುವ ಸಾಹಿತ್ಯಿಕ ಪ್ರಶಸ್ತಿಯಾದ `ಶಾಂತಲಾ ಪಾಟೀಲ ಸಾಹಿತ್ಯ ಪುರಸ್ಕಾರ’ 2020, 2021, 2022ನೇ ಸಾಲಿಗಾಗಿ ಈ ಕೆಳಗಿನ ಗಣ್ಯ ಸಾಹಿತಿಗಳಿಗೆ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಮತ್ತು ಸಮಾಜಮುಖಿಯಾಗಿ ಸಲ್ಲಿಸಿದ, ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ 2020 ನೇ ಸಾಲಿಗೆ ಸಿ. ಚನ್ನಬಸವಣ್ಣ, ಬಳ್ಳಾರಿ, 2021 ನೇ ಸಾಲಿಗೆ ಚಂದ್ರಶೇಖರ ವಸ್ತ್ರದ, ಗದಗ, 2022 ನೇ ಸಾಲಿಗೆ ಶ್ರೀಮತಿ ಸಂಕಮ್ಮ ಸಂಕಣ್ಣವರ, ಬ್ಯಾಡಗಿ ಇವರುಗಳಿಗೆ ಪ್ರಶಸ್ತಿಗಳನ್ನು ನೀಡಲು ಕ.ವಿ.ವ. ಸಂಘವು ಆಯ್ಕೆ ಮಾಡಿದೆ.
ದಿನಾಂಕ 25-9-2022 ರಂದು ಸಾಯಂಕಾಲ 6 ಗಂಟೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜರುಗುವ ದತ್ತಿ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿ ಮೊತ್ತ ರೂಪಾಯಿ 10,000/-ಗಳು ಮತ್ತು ಪ್ರಶಸ್ತಿ ಫಲಕ ನೀಡಿ, ಸನ್ಮಾನಿಸಿ ಗೌರವಿಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.