ಪ್ರಶಸ್ತಿಗಳು ವ್ಯಕ್ತಿಯ ಗೌರವ ಮತ್ತು ಹೊಣೆಗಾರಿಕೆ ಹೆಚ್ಚಿಸುತ್ತವೆ : ಚಂಬಿ ಪ್ರತಿಪಾದನೆ

ಭಾಲ್ಕಿ :ಸೆ.7: ನಾವು ಮಾಡುವ ಸತ್ಕಾರಗಳಿಗೆ ಸಂಘ ಸಂಸ್ಥೆಗಳು ಗುರಿತಿಸಿ ನೀಡುವ ಮಾನ, ಸಮ್ಮಾನ,ಪ್ರಶಸ್ತಿಗಳು ವ್ಯಕ್ತಿಯ ಗೌರವ ಮತ್ತು ಹೊಣೆಗಾರಿಕೆ ಹೆಚ್ಚಿಸುತ್ತವೆ ಎಂದು ಚಂದ್ರಕಾಂತ ಬಿರಾದಾರ ಪ್ರತಿಪಾದಿಸಿದರು.

ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಮಂದಿರ ಸಭಾಂಗಣದಲ್ಲಿ ಡಾ.ಪಂಡಿತ ಪುಟ್ಟರಾಜ ಸೇವಾ ಸಮಿತಿ ನವ ದೆಹಲಿ ಮತ್ತು ಚೇತನ ಫೌಂಡೇಶನ್ ಕರ್ನಾಟಕ ವತಿಯಿಂದ ಕೊಡ ಮಾಡುವ 2022ನೇ ಸಾಲಿನ ಡಾ.ಎಸ್.ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಗೆ ಪೂರಕವಾಗಿ ಮಾತನಾಡಿದರು.

ನಾವು ಯಾವುದೇ ಕ್ಷೇತ್ರದಲ್ಲಿ ಇರಲಿ ಮಾಡುವ ಕಾಯಾಕ ಮನಃಪೂರ್ವಕವಾಗಿ ಆತ್ಮಸಂತೃಪ್ತಿಗಾಗಿ ಮಾಡಬೇಕು, ಎಂದು ನಾನಾ ಕ್ಷೇತ್ರದ ಸಾಧಕರಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಉದ್ಘಾಟಿಸಿದ ಸಮಾಜ ಸೆವಕ, ಸಂತೋಷ ಆರ್.ಸೆಟ್ಟಿ ಸೋಮು ರೆಡ್ಡಿ ಅವರ ”ದ್ವಂದ” ನಾಟಕ ಮತ್ತು ಕವಿ ಗೋಷ್ಠಿ ಉದ್ಘಾಟಿಸಿ ಮಾತನಾಡಿ, ನಾಟಕಗಳು ಸುಂದರ ಸಮಾಜ ನಿರ್ಮಾಣಕ್ಕೆ ಪೂರಕವಾಗಿವೆ, ಆರೋಗ್ಯ ಪೂರ್ಣ ಸಮಾಜ ಕಟ್ಟುವಲ್ಲಿ ಕವಿಗಳ ಪಾತ್ರ ಅತ್ಯಂತ ಹಿರಿದಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿ ಸುರೇಶ ಕೊರೆಕೊಪ್ಪ ಮಾತನಾಡಿ, ಬೀದರ್ ಜಿಲ್ಲೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಕಿಸಾನ ಪ್ರಸಾರಕ ಶಿಕ್ಷಣ ಸಂಸ್ಥೆಯ ಶಿವಾಜಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಚಂದ್ರಕಾಂತ ಬಿರಾದಾರ್ ಅವರು ಗಡಿ ಭಾಗದಲ್ಲಿ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯ ಮತ್ತು ಪತ್ರಿಕಾ ರಂಗದಲ್ಲಿ ಸಲ್ಲಿಸುತ್ತಿರುವ ಸೇವೆ ಶ್ಲ್ಯಾಘನೀಯವಾಗಿದೆ.

ಬಿರಾದಾರ ಅವರನ್ನು ಡಾ.ಎಸ್.ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸೂಕ್ತವಾಗಿದೆ ಎಂದು ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು. ಸಮಾಜದ ನಾನಾ ಕ್ಷೇತ್ರಗಳಲ್ಲಿ ಎಲೆಮರೆ ಕಾಯಿಯಂತೆ ಕಾರ್ಯ ಮಾಡುವವರಿಗೆ ಗುರುತಿಸಿ ವೇದಿಕೆಗೆ ಕರೆದು ಸನ್ಮಾನಿಸುತ್ತಿರುವವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ತಿಳಿಸಿದರು.

ಸಾಹಿತಿ ಪೀರಸಾಬ ನದಾಫ, ಸವಿತಾ ಕುಸಗಲ, ಡಾ.ಶಾಂತ ಭಜಂತ್ರಿ, ಡಾ.ವಿಜಯ ಜಂಬಗಿ, ಪ್ರಕಾಶ ನೂಲ್ವಿ ಇತರೆ ಗಣ್ಯರು ಮಾತನಾಡಿದರು. ಚೇತನ ಫೌಂಡೇಶನ್ ಅಧ್ಯಕ್ಷ ಚಂದ್ರಶೇಖರ ಮಾಡಲಾಗೇರಿ ಪ್ರಾಸ್ತಾವಿಕ ಮಾತನಾಡಿದರು. ಗುರು ಪುಟ್ಟರಾಜ ರಾಷ್ಟ್ರೀಯ ಸೇವಾರತ್ನ ಪ್ರಶಸ್ತಿ, ಡಾ.ಎಸ್.ರಾಧಾಕೃಷ್ಣನ ಶಿಕ್ಷಕರತ್ನ ಪ್ರಶಸ್ತಿ,ಭಾರತ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಂತರ ನಡೆದ ಕವಿಗೋಷ್ಠಿಯಲ್ಲಿ ನಾನಾ ಭಾಗದಿಂದ ಆಗಮಿಸಿದ ಕವಿಗಳು ತಮ್ಮ ಕಾವ್ಯ ವಾಚನ ಮಡಿದರು. ನಂತರ ಸಾಹಿತಿ ಸೋಮು ರೆಡ್ಡಿ ಬರೆದು ನಿರ್ದೇಶಿಸಿದ ದ್ವಂದ್ವ ನಾಟಕ ಪ್ರದರ್ಶನ ನಡೆಯಿತು.