ಪ್ರವೀಣ ಪರಿವಾರಕ್ಕೆ ಸಂಜಯ ಖೇಣಿ 25 ಸಾವಿರ ರೂ. ನೆರವು

ಬೀದರ್: ಜು.29:ದುಷ್ಕರ್ಮಿಗಳಿಂದ ಕೊಲೆಗೀಡಾಗಿರುವ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ ನೆಟ್ಟಾರು ಪರಿವಾರಕ್ಕೆ ಬೀದರ್ ದಕ್ಷಿಣ ಕ್ಷೇತ್ರದ ಬಿಜೆಪಿ ಮುಖಂಡ, ಬಿಎಸ್‍ಎಸ್‍ಕೆ ಮಾಜಿ ಅಧ್ಯಕ್ಷ ಸಂಜಯ ಖೇಣಿ ಅವರು ಆರ್ಥಿಕ ನೆರವು ನೀಡಿದ್ದಾರೆ.

ಸಂತ್ರಸ್ತ ಪರಿವಾರಕ್ಕೆ ಆರ್ಥಿಕ ನೆರವು ತಲುಪಿಸಲು ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಶೇಕಾಪುರ ಅವರಿಗೆ 25,000 ರೂ.ಗಳನ್ನು ತಮ್ಮ ಹಾಗೂ ಬೀದರ್ ದಕ್ಷಿಣ ಯುವ ಮೋರ್ಚಾ ವತಿಯಿಂದ ನೀಡಲಾಗಿದೆ ಎಂದು ಸಂಜಯ ಖೇಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುವ ಮೋರ್ಚಾ ಮುಖಂಡ ಪ್ರವೀಣ ನೆಟ್ಟಾರು ಹತ್ಯೆ ಘಟನೆಯಿಂದ ಪಕ್ಷದ ಕಾರ್ಯಕರ್ತರು ವಿಚಲಿತರಾಗಬಾರದು. ರಾಜೀನಾಮೆಯಂತಹ ತೀರ್ಮಾನಕ್ಕೆ ಮುಂದಾಗಬಾರದು ಎಂದು ಸಂಜಯ ಖೇಣಿ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಸಂತ್ರಸ್ತ ಪರಿವಾರಕ್ಕೆ ನ್ಯಾಯ ದೊರಕಿಸಿಕೊಡುವ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.