
ಬೆಂಗಳೂರು,ಮಾ.೫-ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧ ನಗರದಲ್ಲಿ ಕಾರ್ಯಾಚರಣೆ ನಡೆಸಿದ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಮೃತಹಳ್ಳಿ ಠಾಣೆ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ನಿನ್ನೆ ರಾತ್ರಿ ಎನ್ ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪ್ರವೀಣ್ ನೆಟ್ಟಾರು ಕೊಲೆಗೈದ ಪ್ರಕರಣದ ತೌಫೀಲ್‌ನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ಕಳೆದ ಐದಾರು ತಿಂಗಳಿಂದ ಅಮೃತಹಳ್ಳಿಯ ಮಾರುತಿ ಲೇಔಟ್‌ನಲ್ಲಿ ಆರೋಪಿ ಮಡಿಕೇರಿ ಮೂಲದ ತೌಫಿಲ್, ನಂಜುಂಡಪ್ಪ ಎಂಬುವರ ಮೂರು ಅಂತಸ್ತಿನ ಕಟ್ಟಡದಲ್ಲಿ ಬಾಡಿಗೆಗೆ ಇದ್ದ. ತೌಫಿಲ್ ಯಾರನ್ನೂ ಅಷ್ಟಾಗಿ ಮಾತನಾಡಿಸುತ್ತಿರಲಿಲ್ಲ. ನಿನ್ನೆ ರಾತ್ರಿ ೯.೩೦ಕ್ಕೆ ಖಚಿತವಾದ ಮಾಹಿತಿ ಮೇರೆಗೆ ತೌಫಿಲ್ ವಾಸವಿದ್ದ ಮನೆ ಮೇಲೆ ಎನ್ ಐಎ ಅಧಿಕಾರಿಗಳ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆಟೋ ಚಾಲಕ,ಪ್ಲಂಬರ್ ವೇಷದಲ್ಲಿ ಮನೆಗೆ ಹೋಗಿ ಫ್ಲಂಬರ್ ಎಂದು ಕೈಯಲ್ಲಿ ರಿಂಚ್ ಹಿಡಿದು ಇಬ್ಬರು ಎನ್ ಐಎ ಅಧಿಕಾರಿಗಳು ಮನೆ ಒಳಗೆ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿ ತೌಫಿಲ್ ಮಾಂಸ ಕತ್ತರಿಸುತ್ತಿದ್ದು,ಅಧಿಕಾರಿಗಳನ್ನು ನೋಡಿ ಗಲಿಬಿಲಿಗೊಂಡ ತೌಫಿಲ್ ಅವರ ಮೇಲೆ ದಾಳಿ ಮಾಡಲು ಯತ್ನಿಸಿದ್ದಾನೆ. ಅಷ್ಟರಲ್ಲಿ ದಾಳಿ ಮಾಡಿ ತೌಫಿಲ್ ಬಂಧಿಸಿದ್ದಾರೆ.
ಎನ್‌ಐಎ ಅಧಿಕಾರಿಗಳು ಆರೋಪಿ ತೌಫೀಲ್ ಪತ್ತೆಗೆ ೫ ಲಕ್ಷರೂಗಳನ್ನು ಬಹುಮಾನ ಘೋಷಣೆ ಮಾಡಿದ್ದರು.
ಕಳೆದ ಜುಲೈ ೨೬ ರಂದು ರಾತ್ರಿ ಪ್ರವೀಣ್ ನೆಟ್ಟಾರುನನ್ನು ಆತನ ಕೋಳಿ ಅಂಗಡಿಗೆ ನುಗ್ಗಿ ಹಂತಕರು ಬರ್ಬರವಾಗಿ ಕೊಲೆ ಮಾಡಿದ್ದರು.ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹತ್ಯೆಗೆ ೩ ಬಾರಿಗೆ ಸಂಚು:
ಪ್ರವೀಣ್ ಹತ್ಯೆಗೆ ಮೊದಲು ಎರಡು ಬಾರಿ ಜು.೨೩ ಮತ್ತು ಜು.೨೪ ರಂದೇ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಜು.೨೩ ರಂದು ಅದೇ ಬೈಕ್‌ನಲ್ಲಿ ಕೊಲ್ಲಲು ತಂಡ ಬಂದಿದ್ದು, ಆದರೆ ಅಂಗಡಿ ಬಳಿ ಜನ ಇದ್ದಿದ್ದರಿಂದ ವಾಪಾಸ್ ಹೋಗಿದ್ದಾರೆ.
ಜು.೨೪ ರಂದು ಸಂಜೆ ೪.೩೦ ಕ್ಕೆ ಕೊಲ್ಲಲು ಸಂಚು ರೂಪಿಸಿ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಲಾಗಿದ್ದು ಗಂಭೀರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರು.
ಈಗಾಗಲೇ ಪ್ರಕರಣದ ಸಂಬಂಧಿಸಿದಂತೆ
ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಒಟ್ಟು ೨೦ ಆರೋಪಿಗಳ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.
೨೪೦ ಸಾಕ್ಷಿಗಳ ಹೇಳಿಕೆ:
ಸುಮಾರು ೨೪೦ ಸಾಕ್ಷಿಗಳ ಹೇಳಿಕೆಗಳು ಒಳಗೊಂಡಿರುವ ಒಟ್ಟು ೧,೫೦೦ ಪುಟಗಳ ಚಾರ್ಜ್‌ಶೀಟ್ ಅನ್ನು ಎನ್ ಐಎ ಅಧಿಕಾರಿಗಳು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಈ ನಡುಚೆ ಕೊಲೆ ಪ್ರಕರಣ ಸಂಬಂಧ ಈವರೆಗೆ ೧೪ ಆರೋಪಿಗಳನ್ನು ಬಂಧಿಸಿಲಾಗಿದ್ದು, ೬ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.