ಪ್ರವೀಣ್ ಹತ್ಯೆ ಖಂಡಿಸಿ ಮೌನ ಮೆರವಣಿಗೆ

ಮೈಸೂರು: ಆ.03:- ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆಯಲ್ಲಿ ಹೊರಟು ಮಹಾವೀರ ವೃತ್ತ, ಗಾಂಧಿ ಚೌಕ ಮೂಲಕ ವಾಸವಿ ವೃತ್ತವನ್ನು ತಲುಪಿ ಪ್ರವೀಣ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮೌನಾಚರಣೆ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ದಾಂಜಲಿ ಸಲ್ಲಿಸಿ ಸಭೆ ನಡೆಸಲಾಯಿತು.
ಪೆÇಲೀಸ್ ಇಲಾಖೆಯ ವರ್ಗಾವಣೆ ದಂಧೆಯೇ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಮುಖ್ಯ ಕಾರಣ. ಪ್ರಾಮಾಣಿಕ ಅಧಿಕಾರಿಗಳು ಮೂಲೆಗುಂಪಾಗಿ ಬಹುತೇಕ ಅಪ್ರಾಮಾಣಿಕರೇ ಮುಖ್ಯ ಆಯಾಕಟ್ಟಿನ ಜಾಗಗಳಲ್ಲಿ ಕುಳಿತಿದ್ದಾರೆ. ಈಗಲಾದರೂ ವರ್ಗಾವಣೆ ದಂಧೆಗೆ ತಡೆ ಹಾಕಿ ಕಾನೂನು-ಸುವ್ಯವಸ್ಥೆ ಕಾಪಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ.
ಕರ್ನಾಟಕದವರೇ ಆದ ಪ್ರಮೋದ್ ಮುತಾಲಿಕ್ ಅವರಿಗೆ ಮಂಗಳೂರು ಪ್ರವೇಶಕ್ಕೆ ತಡೆ ಹಾಕಿ ಸಾಂತ್ವನ ಹೇಳುವುದನ್ನು ಸಹ ತಡೆಯುತ್ತಾರೆ, ಆದರೆ ಕೇರಳ ಗಡಿ ದಾಟಿ ಕರ್ನಾಟಕದ ಅನೇಕ ಕಡೆ ಬಂದು ಗಲಾಟೆ ಎಬ್ಬಿಸುವ ವವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ.
ಮತರಾಜಕಾರಣ, ತುಷ್ಟೀಕರಣ ಬದಿಗೊತ್ತಿ ಜನರ ಜೀವ, ಕಾನೂನು-ಸುವ್ಯವಸ್ಥೆ ಕಾಪಾಡಬೇಕು. ಕಠಿಣ ಕ್ರಮ ಕೇವಲ ಮಾತಿನಲ್ಲಿರದೇ ಇಂಥ ಸಂಘಟಿತ ಅಪರಾಧ (oಡಿgಚಿಟಿiseಜ ಛಿಡಿime) ನಡೆಸುವವರ ವಿರುದ್ದ ಕಾನೂನು ತಿದ್ದುಪಡಿ ತಂದು ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಲಾಯಿತು.
ಹಿಂದೂ ಪರ ಸಂಘಟನೆಗಳ ಒಕ್ಕೂಟದ ಸಂಚಾಲಕರಾದ ಮೈ.ಕಾ. ಪ್ರೇಮ್ ಕುಮಾರ್, ಸಹ ಸಂಚಾಲಕರಾದ ಸಂಜಯ್, ರಾಕೇಶ್ ಭಟ್, ಜೀವನ್, ನಂಜನಗೂಡು ಚಂದ್ರು, ಕುಮಾರ್, ವಿಕಾಸ್ ಶಾಸ್ತ್ರಿ, ಬಿ.ಸಿ. ಶಶಿಕಾಂತ್, ತನುಜಾ ಮಹೇಶ್, ಮಹೇಶ್ ಮೂರ್ತಿ, ಲಿಂಗಾಂಬುದಿ ಸಿದ್ದೇಶ್, ಪಂಕಜ್ ಪಾರೇಖ್, ಗಾಲ್ಫ್ ಕುಮಾರ್, ಅಭಿಲಾಶ್, ತೇಜಸ್, ಸುರೇಂದ್ರ, ಅನುಜ್ ಸಾರಸ್ವತ್, ಆನಂದ್ ಮೈಲಾರಿ, ಸುರೇಶ್, ಶರ್ಮಣ್ ಪಾರ್ಮಾರ್ ಭಾಗವಹಿಸಿದ್ದರು.