ಪ್ರವೀಣ್ ಹತ್ಯೆ ಖಂಡಿಸಿ ಪ್ರತಿಭಟನೆ

ಲಕ್ಷ್ಮೇಶ್ವರ,ಜು.30 ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರ ಹತ್ಯ ಖಂಡಿಸಿ ಬಿಜೆಪಿ ಕಾರ್ಯಕರ್ತರು ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಶಿರಹಟ್ಟಿ ಮಂಡಲ ಅಧ್ಯಕ್ಷ ಪಕಿರೇಶ ರಟ್ಟಿಹಳ್ಳಿ ಯುವ ಮೋರ್ಚಾ ಅಧ್ಯಕ್ಷ ನವೀನ್ ಹಿರೇಮಠ ಮುಖಂಡರಾದ ಬಸವರಾಜ್ ಅರಳಿ ಕೆಸಿಸಿ ಬ್ಯಾಂಕ್ ನಿರ್ದೇಶಕ ಸುನಿಲ ಮಹಾಂತ ಶೆಟ್ಟರ, ಪಿಬಿ ಕರಾಟೆ ಸಹಕಾರಿ ಪ್ರಕೋಷ್ಠ ದ ಅಧ್ಯಕ್ಷ ಸೋಮಣ್ಣ ಉಪನಾಳ ಉಳವೇಶಗೌಡ ಪಾಟೀಲ್ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಹಿಂದುಗಳ ರಕ್ಷಣೆ ಆಗುತ್ತಿಲ್ಲ ಮತಾಂದ ಶಕ್ತಿಗಳಿಗೆ ಕಠಿಣ ಶಿಕ್ಷೆ ಆಗದಿರುವುದರಿಂದ ಅವರು ಹೆದರುತ್ತಲ್ಲ.
ಜನತೆ ಬಿಜೆಪಿಯ ಮೇಲೆ ವಿಶ್ವಾಸವಿಟ್ಟಿದ್ದು ಇದೇ ರೀತಿ ಹಿಂದುಗಳ ಹತ್ಯೆ ಮುಂದುವರೆದರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಘಟನೆಗಳು ತಕ್ಕ ಪಾಠ ಕಲಿಸಲು ಮುಂದಾಗಬಹುದು ಸರ್ಕಾರ ಎಚ್ಚೆತ್ತು ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಂಡಲ್ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಮೆಣಸಿನಕಾಯಿ ನಗರ ಘಟಕದ ಅಧ್ಯಕ್ಷ ದುಂಡೇಶ ಕೊಟಗಿ ರಮೇಶ ಹಾಳದೋಟದ ಪ್ರವೀಣ್ ಪಾಟೀಲ್ ಮಹೇಶ್ ಲಮಾಣಿ ಎಂ ಆರ್ ಪಾಟೀಲ್ ವಿಜಯ ಹತ್ತಿ ಕಾಳ ವಿಜಯ್ ಕುಂಬಾರ ಬಸವರಾಜ್ ಚಕ್ರಸಾಲಿ ಪ್ರವೀಣ್ ಬೊಮ್ಲೇ ಉಮೇಶ್ ಬೆಳವಗಿ, ಸಂಗಮೇಶ್ ಬೆಳವಲಕೊಪ್ಪ ರುದ್ರಪ್ಪ ಉಮಚಗಿ ಸಂತೋಷ ಜಾವೂರ ಪ್ರಕಾಶ್ ಮಾದನೂರು ವೀರೇಶ ಸಾಸಲವಾಡ ವಿಶಾಲ ಬಟಕುರ್ಕಿ ಶರಣು ಚನ್ನೂರ್ ಚಂದ್ರು ಮಾಗಡಿ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.