ಪ್ರವೀಣ್ ಹತ್ಯೆಗೆ ಆಂದೋಲಾಶ್ರೀ ಖಂಡನೆ

ಕಲಬುರಗಿ ಜು 27: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಮಾನವ ಸಮಾಜ ತಲೆ ತಗ್ಗಿಸುವಂತಾಗಿದೆ.ದುಷ್ಟ ಶಕ್ತಿಗಳನ್ನ ಮಟ್ಟ ಹಾಕಲು ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು.ಕೊಲೆಗಾರರನ್ನ ನಿಂತ ಜಾಗದಲ್ಲೇ ಗುಂಡಿಟ್ಟು ಕೊಲೆ ಮಾಡಬೇಕು ಎಂದು ಶ್ರೀರಾಮ ಸೇನೆ ಅಧ್ಯಕ್ಷ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ ಬಿಜೆಪಿ ಸರ್ಕಾರ ಹಿಂದೂ ಕಾರ್ಯಕರ್ತರನ್ನ ರಕ್ಷಣೆ ಮಾಡುವಲ್ಲಿ ವಿಫಲವಾಗುತ್ತಿದೆ.
ಹಿಂದೂ ಕಾರ್ಯಕರ್ತರು , ಹಿಂದೂಗಳು ಬಿಜೆಪಿ ಮೇಲೆ ಇಟ್ಟಿರುವ ನಂಬಿಕೆ ಹುಸಿಯಾಗುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಾಲ್ಕನೆಯ ಹಿಂದು ಹತ್ಯೆಯ ಇದಾಗಿದೆ
ಸರ್ಕಾರ ಏನು ಮಾಡ್ತಿದೆ ? ಗೃಹ ಸಚಿವರು ಏನು ಮಾಡುತ್ತಿದ್ದಾರೆ ?ಎನ್ನುವದು ಯಕ್ಷ ಪ್ರಶ್ನೆಯಾಗಿದೆ.ಬಾಯಿ ಮಾತನಿಂದ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇನೆ ಅಂತ ಹೇಳುವ ಉಡಾಫೆ ಹೇಳಿಕೆ ಬಿಡಬೇಕು
ಯಾರಿಗೆ ಜೀವ ಬೆದರಿಕೆ ಇದೆ ಅವರಿಗೆ ಸರ್ಕಾರ ಭದ್ರತೆ ಕೊಡಬೇಕು
ಎಡಿಜಿಪಿ ಅಲೋಕ್ ಕುಮಾರ್ ಸೂಕ್ಷ್ಮ ಪ್ರದೇಶ ಮಂಗಳೂರಿಗೆ ಭೇಟಿ ಕೊಡಬೇಕು. ರಾಜ್ಯದ ಯಾವ ಭಾಗದಲ್ಲೂ ಹಿಂದು ಕಾರ್ಯಕರ್ತರು ಸುರಕ್ಷಿತವಾಗಿಲ್ಲ ಎಂದರು