ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ

ಮೈಸೂರು,ಜು.30:- ಬಿಜೆಪಿ ಮುಖಂಡ, ಹಿಂದೂ ಕಾರ್ಯಕರ್ತ ಸುಳ್ಯದ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಇಂದು ಹಿಂದೂಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಿತು.
ಮೈಸೂರು ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆಯಲ್ಲಿ ನೂರಾರು ಜನರು ಭಾಗಿಯಾಗಿದ್ದರು. ಚಾಮರಾಜ ಜೋಡಿ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲು ಕಾರ್ಯಕರ್ತರು ಮುಂದಾದರು.
ಪ್ರತಿಭಟನೆಯಲ್ಲಿ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದು, ಎಸ್ ಡಿಪಿಐ, ಪಿಎಫ್ ಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿದರು.
ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಮಾತನಾಡಿ ಪ್ರತಿಭಟನೆ ಯಾರ ವಿರುದ್ಧವೂ ಅಲ್ಲ, ಪ್ರತಿಭಟನೆ ಜಿಹಾದಿಗಳ ವಿರುದ್ಧ. ಇಂದು ಬೆಳಿಗ್ಗೆ ಪತ್ರಿಕೆಗಳಲ್ಲಿ ನೋಡಿದ್ದೇವೆ. ಆಗಸ್ಟ್ ಹದಿನೈದರ ಸ್ವಾತಂತ್ರ್ಯ ಸಂಭ್ರಮದಲ್ಲಿ 75ನೇ ವರ್ಷದ ಈ ಸ್ವಾತಂತ್ರ್ಯದ ಸಂಭ್ರಮದಲ್ಲಿ ಅವರು ನಮ್ಮ ಈ ರಾಜ್ಯದ ಶೃಂಗೇರಿಮಠವನ್ನು, ರಾಮಚಂದ್ರಾಪುರ ಮಠವನ್ನು ಬ್ಲಾಸ್ಟ್ ಮಾಡುವವರಿದ್ದರು ಎಂಬ ಆತಂಕಕಾರಿ ಸಂಗತಿಗಳನ್ನು ಇಂದು ನಾವು ಪತ್ರಿಕೆಗಳ ಮೂಲಕ ತಿಳಿದುಕೊಂಡೆವು. ಇದರ ವಿರುದ್ಧ ನಮ್ಮ ಹೋರಾಟ. ನಾವು ಮಾಡುತ್ತಿರುವುದು ಸಮಾಜದಲ್ಲಿ ಸಾಮರಸ್ಯದಿಂದ ಬದುಕಬೇಕು. ಹಿಂದೂ-ಮುಸ್ಲಿಂ ಅಂತಂದರೆ ಅಣ್ಣ-ತಮ್ಮಂದಿರಿದ್ದ ಹಾಗೆ. ನಾವು ಒಟ್ಟಿಗೆ ಹೋಗಲು ಸಿದ್ಧರಿದ್ದೇವೆ. ಆದರೆ ಬೇರೆ ಜಿಲ್ಲೆಯಿಂದ, ಬೇರೆ ರಾಜ್ಯದಿಂದ ಬಂದಂತಹ ಈ ತರಹದ ಸಮಾಜ ವಿದ್ರೋಹಿಗಳು ಸಮಾಜದ ಮಧ್ಯೆ ಸೇರಿಕೊಂಡು ಸಮಾಜದೊಳಗಡೆ ಅಶಾಂತಿಯನ್ನು ಉಂಟು ಮಾಡುತ್ತಿರುವಂತಹ ಆರಕ್ಷಕರ ಮೇಲೆ, ಪೆÇಲೀಸ್ ಇಲಾಖೆಯ ಮೇಲೆ ಒತ್ತಡವನ್ನು ಸೃಷ್ಟಿಸುತ್ತಿರುವ ಮತಾಂಧದ ಶಕ್ತಿಗಳ ವಿರುದ್ಧ ನಮ್ಮ ಹೋರಾಟ. ಮತಾಂಧ ಶಕ್ತಿಗಳು ಎಲ್ಲಿಯವರೆಗೆ ಈ ರೀತಿಯ ಕೃತ್ಯವನ್ನು ಮಾಡೋದಕ್ಕೆ ಮನಸ್ಸು ಮಾಡಬಾರದು.
ಮನಸ್ಸು ಮಾಡಬಾರದು ಅಂದರೆ ಅವರಿಗೆ ಉಗ್ರ ರೀತಿಯ ಶಿಕ್ಷೆ ವಿಧಿಸಬೇಕು. ಶಿಕ್ಷೆಯ ಸ್ವರೂಪವನ್ನು ನಿಗದಿಪಡಿಸುವುದಕ್ಕೋಸ್ಕರ ಈ ಪ್ರತಿಭಟನೆ. ನಾವು ಮಾಡುತ್ತಿರುವುದು ಜಿಹಾದಿಗಳ ವಿರುದ್ಧ. ಯಾವ ಮುಸ್ಲಿಂರು ಮತಾಂಧರಿದ್ದಾರೆ, ಯಾರು ಸಮಾಜದೊಳಗೆ ಸಾಮರಸ್ಯದಿಂದ ಬದುಕಲು ನಮ್ಮನ್ನು ಬಿಡುತ್ತಿಲ್ಲ. ಆ ರೀತಿಯ ಎಲ್ಲ ದುಷ್ಟಶಕ್ತಿಗಳ ವಿರುದ್ಧ ನಮ್ಮ ಹೋರಾಟ ಎಂದು ತಿಳಿಸಿದರು. ನಾವು ಯಾರ ವಿರುದ್ಧವೂ ಅಲ್ಲ, ನಾವು ಹೋಗುತ್ತಿರುವ ಮಾರ್ಗ ಶಾಂತಿಯುತವಾದ ಮಾರ್ಗ. ಇತ್ತೀಚಿನ ದಿನಗಳಲ್ಲಿ ನಡೆಸುತ್ತಿರುವ ಎಲ್ಲ ಹತ್ಯೆಗಳು ಒಂದೇ ತೆರನಾದ ಹತ್ಯೆಗಳು. ಪ್ರವೀಣ್ ಇರಲಿ, ಹರ್ಷ ಇರಲಿ, ಡಿಜೆಹಳ್ಳಿ ಕೆಜೆಹಳ್ಳಿ ಘಟನೆಗಳು ಎಲ್ಲವೂ ಒಂದೇ ರೀತಿಯಲ್ಲಿ ಮಾಡುತ್ತಿದ್ದಾರೆ. ಯುವಕರಲ್ಲಿ ವಿಶೇಷವಾಗಿ ಬಿಜೆಪಿಯ ಯುವ ಮೋರ್ಚಾ ಕಾರ್ಯಕರ್ತರಲ್ಲಿ ಗೊಂದಲ ನಿರ್ಮಾಣ ಮಾಡುವ ರೀತಿಯಲ್ಲಿ ಮಾಡುತ್ತಿದ್ದಾರೆ.
ಅವರಿಗೆ ಗೊತ್ತಿದೆ ಬಿಜೆಪಿಯಲ್ಲಿ ಹನ್ನೊಂದು ಕೋಟಿಯ ಕಾರ್ಯಕರ್ತರಿದ್ದಾರೆ. ಆ ಸದಸ್ಯರು ಬಿಜೆಪಿಯ ಪರವಾಗಿ ಕೆಲಸ ಮಾಡಿದರೆ ಎಲ್ಲಿ ನಮಗೆ ವೋಟ್ ಬ್ಯಾಂಕ್ ಇರಲ್ಲವೋ, ಎಲ್ಲಿ ನಮಗೆ ತೊಂದರೆಯಾಗಲಿದೆಯೋ ಎಂದು ಯುವಕರಲ್ಲಿ ಅಶಾಂತಿಯನ್ನು, ಅಪನಂಬಿಕೆಯನ್ನು ಹುಟ್ಟಿಹಾಕುವ ಕೆಲಸ ಮಾಡುತ್ತಿದ್ದಾರೆ. ಆ ರೀತಿನ ಸಂಚಿನ ವಿರುದ್ಧ ಪ್ರತಿಭಟನೆ. ಹಿಂದೂ ಸಂಘಟನೆಯಲ್ಲಿ ಯುವಕರು ಕೆಲಸ ಮಾಡಬಾರದು ಎಂಬಂತ ಅವರ ಧೋರಣೆಯ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ.
ಪ್ರತಿಭಟನೆಯಲ್ಲಿ ಹಿಂದೂ ಜಾಗರಾಣ ವೇದಿಕೆಯ ಪ್ರಾಂತದ ಸದಸ್ಯರಾದ ಉಲ್ಲಾಸ್, ಶಾಸಕರುಗಳಾದ ಎಲ್. ನಾಗೇಂದ್ರ, ಎಸ್. ಎ. ರಾಮದಾಸ್, ಮೇಯರ್ ಸುನoದ ಪಾಲನೇತ್ರ, ಪಾಲಿಕೆಯ ಹಾಲಿ ಮಾಜಿ ಬಿಜೆಪಿ ಸದಸ್ಯರು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.