ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಹಿಂದೂ ಮಹಾಸಭಾ ಪ್ರತಿಭಟನೆ

ದಾವಣಗೆರೆ. ಜು.೨೯; ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಪ್ರವೀಣ್ ನೆಟ್ಟಾರು, ಇವರನ್ನು ದುಷ್ಕರ್ಮಿಗಳು ಜಿಹಾದಿ ರೂಪದಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಹತ್ಯೆ ಮಾಡಿರುವುದನ್ನು ಖಂಡಿಸಿ ದಾವಣಗೆರೆಯ ಜಯದೇವ ವೃತ್ತದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಜಿ. ಅರುಣ್ ಕುಮಾರ್  ಬಿಜೆಪಿ ಕೇವಲ ರಾಜಕೀಯ ಪಕ್ಷವಲ್ಲ ಈ ಪಕ್ಷವು ತನ್ನದೇ ಆದ ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಸ್ಥಾಪಿತವಾದ ಒಂದು ಸಂಘಟನೆ ಸೈದ್ಧಾಂತಿಕ ವಿಚಾರ ಮತ್ತು ನಿಲುವಿಗಾಗಿ ಅನೇಕ ನಮ್ಮ ಹಿರಿಯ ಕಾರ್ಯಕರ್ತರ ಬಲಿದಾನವಾಗಿದ್ದು, ಆ ತ್ಯಾಗ ಮತ್ತು ಬಲಿದಾನಗಳ ಮೇಲೆಯೇ ಇಂದು ಬಿಜೆಪಿ ಪಕ್ಷ ಇಷ್ಟೊಂದು ಬೃಹದಾಕಾರವಾಗಿ ಬೆಳೆದು ನಿಂತು, ಕೇಂದ್ರ ಮತ್ತು ರಾಜ್ಯದಲ್ಲಿ ತನ್ನ ಸರ್ಕಾರವನ್ನು ಸ್ಥಾಪಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮತ್ತು ಒಂದು ಕಾರ್ಯಕರ್ತರನ್ನು ಕೆಲವು ಜಿಹಾದಿಗಳು ಹತ್ಯೆ ಮಾಡುತ್ತಿರುವುದನ್ನು ನೋಡಿದರೆ ಈಗಿನ ಬಿಜೆಪಿ ಸರ್ಕಾರವು ನಮ್ಮ ಹಿರಿಯರು ಹಾಕಿಕೊಟ್ಟ ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಸ್ಥಾಪಿತವಾದ ಸರ್ಕಾರವೇ ಎಂಬ ಸಂಶಯವು ನಮ್ಮನ್ನು ಕಾಡುತ್ತಿದೆ.ಪ್ರವೀಣ್ ನೆಟ್ಟಾರು ಯುವಮೋರ್ಚಾದ ಸಕ್ರಿಯ ಕಾರ್ಯಕರ್ತನಾಗಿ ದೇಶಸೇವೆಗಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಹುಡುಗ, ಇಂದು ಸಮಾಜಕ್ಕಾಗಿ ಪ್ರಾಣ ತೆತ್ತಿರುವುದು ದುರ್ದೈವದ ಸಂಗತಿ, ಅಖಿಲ ಭಾರತ ಹಿಂದೂ ಮಹಾಸಭಾವು ಅವರ ಆತ್ಮಕ್ಕೆ ಶಾಂತಿ ಕೋರುವುದರ ಜೊತೆಗೆ ಅವರ ಹತ್ಯೆಗೆ ಕಾರಣರಾದವರನ್ನು ಬಂಧಿಸಿ, ಉಗ್ರ ಶಿಕ್ಷೆಯನ್ನು ನೀಡಬೇಕೆಂದು ಅಖಿಲ ಭಾರತ ಹಿಂದೂ ಮಹಾಸಭಾವು ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತದೆ. ಆದಷ್ಟು ಬೇಗ ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು  ಎಚ್ಚರಿಸಿದರು.ಪ್ರತಿಭಟನೆಯಲ್ಲಿ  ಉಪಾಧ್ಯಕ್ಷರು ಪ್ರಕಾಶ್ ಎಸ್. ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಎಸ್., ಜಿಲ್ಲಾ ನಗರಸಂಚಾಲಕರು ನವೀನ್ ಕುಮಾರ್, ಸಂಘಟನಾ ಕಾರ್ಯದರ್ಶಿ ಗಿರಿರಾಜ್‌, ಪ್ರೋತ್ಸಾಹಕರು ರಾಮಚಂದ್ರ ಗುರುಗಳು, ರಮಣಪ್ರಸಾದ್, ಸತೀಶ್, ಹೆಚ್.ಎಸ್, ದೊಡೇಶ್, ವಿಷ್ಣು, ಮಧು, ರಾಮು, ಸರೀಶ್‌, ಮಂಜು, ಸಿದ್ದೇಶ್‌, ಮಹಾಂತೇಶ್‌, ಸಂಜು, ಆದರ್‌ ಸೇರಿದಂತೆ ಮುಂತಾದವರು ಹಾಜರಿದ್ದರು.