ಪ್ರವೀಣ್ ನೆಟ್ಟರ್ ಕೊಲೆ : ಕಿಡಿಗೇಡಿಗಳನ್ನು ಬಂಧಿಸುವಂತೆ ನವೀನ್ ನಾಡಗೌಡ ಮನವಿ

ಮಾನ್ವಿ.ಜು.೨೭- ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಪ್ರವೀಣ್ ಕೊಲೆ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಮಾನ್ವಿ ಮಂಡಲದ ಯುವ ಮೋರ್ಚದ ಅಧ್ಯಕ್ಷರಾದ ನವೀನ್ ಕುಮಾರ ನಾಡಗೌಡರ ನೇತೃತ್ವದಲ್ಲಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಮಾಡಲಾಯಿತು.
ದಿನಾಂಕ ೨೬-೦೭-೨೦೨೨ ರಂದು ರಾತ್ರಿ ಸಮಯದಲ್ಲಿ ಬಿಜೆಪಿ ಯುವಮೋರ್ಚಾ ರಾಜ್ಯಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟರ್ ಅವರನ್ನು ಕೊಲೆ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಪ್ರವೀಣ್ ನೆಟ್ಟ ರವರ ಕುಟುಂಬಕ್ಕೆ ಭದ್ರತೆಯನ್ನು ಒದಗಿಸಬೇಕು.
ಪ್ರವೀಣ್ ನೆಟ್ಟರ್ ಕೊಲೆಗೆ ಕುಮ್ಮಕ್ಕು ನೀಡಿರುವವರನ್ನು ಕೂಡಲೇ ಗುರುತಿಸಿ ಅವರನ್ನು ಗಡಿಪಾರು ಮಾಡಲು ಒತ್ತಾಯಿಸುವುದರ ಮೂಲಕ ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಗೌರವ್ವಾನಿತ ರಾಜ್ಯಪಾಲರು ರಾಜಭವನದ ಕರ್ನಾಟಕ ಸರಕಾರ ಬೆಂಗಳೂರು ಇವರಿಗೆ ಮಾನ್ವಿ ತಹಸೀಲ್ದಾರರ ಮೂಲಕ ಬಿಜೆಪಿ ಮಾನವಿ ಮಂಡಲ ಯುವ ಮೋರ್ಚಾ ಅಧ್ಯಕ್ಷರ ನವೀನ್ ಕುಮಾರ್ ನಾಡಗೌಡರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶರಣಪ್ಪಗೌಡ ನಕ್ಕುಂದಿ, ಅಯ್ಯಪ್ಪ ನಾಯಕ ಮ್ಯಾಕಲ್, ಮಂಜುನಾಥ ನಾಯಕ್ ಜಾನೇಕಲ್, ಹನುಮಂತ್ರಾಯ ನಾಯಕ, ಗುರುಸಿದ್ದಪ್ಪ ಕಣ್ಣೂರು, ಚಂದ್ರು ಮಾನ್ವಿ, ಭಾಸ್ಕರ್ ಜಗಲಿ, ದೊಡ್ಡಪ್ಪ ಹೂಗಾರ್,ಗಿರಿ ನಾಯಕ್,ನರಸಪ್ಪ ಜೂಕೂರು, ವಿ ಜನಾರ್ಧನ್, ಮೋಹನ್ ದಾನಿ, ಹನುಮೇಶ್ ನಾಯಕ್, ತಾಯಣ್ಣ ಕಿನ್ನರಿ ಉಪಸ್ಥಿತರಿದ್ದರು.