
ಸರ್ಕಾರಿ ಮತ್ತು ಖಾಸಗೀ ಶಾಲೆಗಳ ನಡುವಿನ ಅಂತರ ಮತ್ತು ವ್ಯತ್ಯಾಸದ ಬಗ್ಗೆ ಮಾಹಿತಿ ನೀಡಿರುವ ಚಿತ್ರ ” ಪ್ರವೀಣಾ” ತೆರೆಗೆ ಬರಲು ಸಜ್ಜಾಗಿದೆ. ಬಹುತೇಕ ಹೊಸಬರೇ ಸೇರಿಕೊಂಡು ಹೊಸತನದ ನಿರೂಪಣೆಯೊಂದಿಗೆ ನಿರ್ದೇಶಕ ಮಹೇಶ್ ಸಿಂಧುವಳ್ಳಿ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ.
ಕೊರೊನಾ ಸೋಂಕು ಕಾಣಿಸಿಕೊಳ್ಳುವುದಕ್ಕೂ ಮುನ್ನ ಆರಂಭವಾದ ಚಿತ್ರ ಈ ವಾರ ತೆರೆಗೆ ಬರಲಿದೆ.
ಈ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಮಹೇಶ್ ಸಿಂಧುವಳ್ಳಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ನೋಡಿ ನಾವು ಕೂಡ ಇದೆ ವಿಷಯವನ್ನು ಬೇರೆಯ ರೀತಿ ಯಾಕೆ ಹೇಳಬಾರದು ಎಂದಾಗ ಹೊಳೆದಿದ್ದೆ.ಖಾಸಗಿ ಮತ್ತು ಸರ್ಕಾರಿ ಶಾಲೆಯ ನಡುವಿನ ವ್ಯತ್ಯಾಸ ಅದನ್ನು ತೆರೆಯ ಮೇಲೆ ತಂದಿದ್ದೇವೆ ಎಂದರು.
ನಿರ್ಮಾಪಕ ಜಗದೀಶ್ ಕೆ. ಆಕಸ್ಮಿಕವಾಗಿ ನಿರ್ಮಾಣ ಮಾಡಿದೆ ಸಹಕಾರವಿರಲಿ ಎಂದರೆ ನಟಿಯರಲ್ಲಿ ಒಬ್ಬರಾದ ಸ್ನೇಹಾ, ಎರಡನೇ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದರು.
ನಾಯಕ ಶಶಿ,ಸರ್ಕಾರಿ ಶಾಲೆಯ ಹುಡುಗ , ಇಂಗ್ಲೀಷ್ ಮಾದ್ಯಮ ಶಾಲೆಗೆ ಹೋದರೆ ಏನೆಲ್ಲ ಕಷ್ಟ ಪಡುತ್ತಾನೆ ಎನ್ನುವ ಕುರಿತು ಮಾಹಿತಿ ಹಂಚಿಕೊಂಡಿದರು. ಸಂಗೀತ ನಿರ್ದೇಶನ ಮಾಡಿರುವ ನಿನಗಾಗಿ ವಿರು,ಗ್ರಾಮೀಣ ಪ್ರತಿಭೆಗಳನ್ನು ಉಳಿಸುವ ಕೆಲಸ ಮಾಡಿದ್ದಾರೆ ಸಹಕಾರವಿರಲಿ ಎಂದರು.
ಹಿರಿಯ ಕಲಾವಿದ ಮಂಡ್ಯ ರಮೇಶ್, ಮಂಡಲ್ ಪಂಚಾಯ್ತಿ ಅದ್ಯಕ್ಷನ ರೀತಿಯ ಪಾತ್ರ. ಈ ರೀತಿಯ ಪಾತ್ರ ಹೊಸದು. ಹೊಸ ತಂಡಕ್ಕೆ ಎಲ್ಲರ ಬೆಂಬಲವಿರಲಿ ಎಂದು ಕೇಳಿಕೊಂಡರು.