ಪ್ರವಾಹ ಸಂತ್ರಸ್ಥರಿಗೆ ಜಮೀಯತೆ ಅಹ್ಲೆದಿಸ್‍ನಿಂದ ಆಹಾರ ಸಾಮಗ್ರಿ ವಿತರಣೆ

ಅಫಜಲಪುರ: ಅ.26:ಸತತ ಮಳೆ ಹಾಗೂ ಪ್ರವಾಹಕ್ಕೆ ಸಿಲುಕಿರುವ ಅಫಜಲಪುರ ತಾಲೂಕಿನ ಸಂತ್ರಸ್ಥರಿಗೆ ಜಿಲ್ಲಾ ಜಮೀಯತೆ ಅಹ್ಲೆದಿಸ್ ಕಲಬುರಗಿ ಹಾಗೂ ಜಮೀಯತೆ ಅಹ್ಲೆದಿಸ ಅಫಜಲಪುರ ವತಿಯಿಂದ ತಾಲೂಕಿನ ಗೌರ (ಕೆ), ದಿಕ್ಸಂಗಾ, ತೆಲ್ಲೂಣಗಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿನ ಸಂತ್ರಸ್ಥರಿಗೆ ಆಹಾರ ಸಾಮಗ್ರಿ ಕಿಟ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಂತರ ಮಾತನಾಡಿದ ಜಮೀಯತೆ ಅಹ್ಲೆದಿಸ್ ಅಧ್ಯಕ್ಷ ಮಹ್ಮದ ಫಯಾಜ್ ಜಾಮಯಿ ಸತತ ಮಳೆ ಹಾಗೂ ಪ್ರವಾಹದಿಂದ ಸಂಕಷ್ಟದಲ್ಲಿರುವ ಜನರಿಗೆ ಜಿಲ್ಲಾ ಜಮೀಯತೆ ಅಹ್ಲೆದಿಸ್ ವತಿಯಿಂದ ಎಲ್ಲ ಸಮಾಜದ ಜನರಿಗೆ ಆಹಾರ ಸಾಮಗ್ರೀ ಕೀಟ್‍ಗಳನ್ನು ವಿತರಣೆ ಮಾಡಿದ್ದೇವೆ. ಜಿಲ್ಲಾ ಜಮೀಯತೆ ಅಹ್ಲೆದಿಸ್ ಜಿಲ್ಲಾ ಅಧ್ಯಕ್ಷರಾದ ಬಾಬಾಖಾನ್ ಅವರ ನೆರವಿನ ಮೂಲಕ ಸಂಕಷ್ಟದಲ್ಲಿರುವ ನೂರಾರು ಸಂತ್ರಸ್ಥರಿಗೆ ಸಹಾಯ ಮಾಡಿದ್ದೇವಚೆ. ಆದರೆ ಸರಕಾರ ಇವರ ನೆರವಿಗೆ ಬಾರದೆ ಇರುವುದು ನೋವು ತಂದಿದೆ. ಈಗಲಾದರೂ ಸರಕಾರ ಎಚ್ಚೆತ್ತುಕೊಂಡು ಸಂತ್ರಸ್ಥರ ನೆರವಿಗೆ ಬರಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೋಶಿನ ಢಾಲೆ, ರಶೀದ ಚೌಧರಿ, ಜಾವಿದ ಮನಿಯಾರ, ರಫೀಕ ಜವಳಿ, ಸಲೀಂ ಮುಜಾವರ, ಬಿಲಾಲ್ ಚೌಧರಿ, ಮಹಿಬೂಬ ಗೊಬ್ಬೂರ, ಖಾಜು ಹಳ್ಯಾಳ, ಸೊಂದು ಚೌಧರಿ, ಇಲಾಹಿ ಪಟೇಲ ಸೇರಿದಂತೆ ಇನ್ನೀತರು ಇದ್ದರು.