ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ಸೇವಾಭಾರತಿ ಟ್ರಸ್ಟ ಕಿಟ್ ವಿತರಣೆ

ಶಹಾಪುರ:ಅ.29: ಇತ್ತೀಚೆಗೆ ಸುರಿದ ಧಾರಾಕಾರ ಮಳೆ ಮತ್ತು ನದಿಗಳ ಹಿನ್ನೀರಿನಿಂದ ನೆರೆ ಪ್ರವಾಹಕ್ಕೆ ಸಿಲುಕಿ ತೊಂದರೆಗೀಡಾದ ಹುರಸಗುಂಡಿಗಿ ಗ್ರಾಮದ ಹಲವು ಕುಟುಂಬಗಳಿಗೆ ಯಾದಗಿರಿ ಸೇವಾಭಾರತಿ ಟ್ರಸ್ಟ್ ವತಿಯಿಂದ ಪರಿಹಾರದ ಕಿಟ್ ವಿತರಿಸಿ, ಯಾವುದಕ್ಕೂ ಆತಂಕ ಪಡಬೇಡಿ ಸೇವಾ ಭಾರತಿ ಟ್ರಸ್ಟ್ ನಿಮ್ಮೊಂದಿಗಿದೆ ಇದೆ ಎಂದು ಕಾರ್ಯಕರ್ತರು ಆತ್ಮಸ್ಥೈರ್ಯ ತುಂಬಿದರು. ಗ್ರಾಮದ 130 ಕುಟುಂಬಗಳ ಪಟ್ಟಿ ಮಾಡಲಾಗಿದ್ದು, ನಿಜವಾದ ಫಲಾನುಭವಿಗಳಿಗೆ ಬಟ್ಟೆಗಳು, ದಿನಬಳಕೆಯ ವಸ್ತುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸೇವಾಭಾರತಿ ಟ್ರಸ್ಟ್‍ನ ವತಿಯಿಂದ ಸುಧೀರ ಕುಮಾರ ಚಿಂಚೋಳಿ, ಗೌರೀಶ ಅವಟಿ, ಬಸವರಾಜ ರೋಜಾ, ರಮೇಶ ಕೋಳ್ಕರ, ವೆಂಕಪ್ಪ ನಾಲ್ವಾರ, ಮರಿಯಪ್ಪ ಹುರಸಗುಂಡಗಿ, ವಿಶ್ವನಾಥ, ಆಂಜನೇಯ, ಭೀಮಣ್ಣ ಹವಾಲ್ದಾರ ಇತರರು ಇದ್ದರು.