ಪ್ರವಾಹ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಕೊಡಿಸುವೆ: ಗುತ್ತೇದಾರ್

ಅಫಜಲಪುರ:ನ.14: ತಾಲೂಕಿನಲ್ಲಿ ಪ್ರವಾಹದಿಂದ ಅಪಾರ ಪ್ರಮಾಣದ ಹಾನಿಯಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿಯಾಗಿ ಹೆಚ್ಚಿನ ಪರಿಹಾರ ಕಲ್ಪಿಸಿ ಕೊಡಲಾಗುವುದು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಮಾಲಿಕಯ್ಯಾ ಗುತ್ತೇದಾರ ಹೇಳಿದರು. ಸ್ಟೇಷನ್ ಗಾಣಾಗಾಪೂರದಲ್ಲಿ ಗುತ್ತೇದಾರ ಅಭಿಮಾನಿ ದೇವರುಗಳಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು ತಾವು ಮಹಾಮಾರಿ ಕೊರೋನಾದಿಂದ ಗುಣಮುಖನಾಗಿ ಕ್ಷೇತ್ರದ ಜನತೆಯ ಸೇವೆ ಮಾಡಲು ಬಂದಿದ್ದೇನೆ. ಈಗಾಗಲೆ ಎರಡು ದಿನಗಳ ಕಾಲ ಅಭಿಮಾನಿ ದೇವರುಗಳಿಗೆ ಮುಖಾಮುಖಿಯಾಗಿ ಭೇಟಿಯಾಗಿದ್ದೇನೆ. ತಾಲೂಕಿನ ಜನತೆಯ ಹಾಗೂ ಎಲ್ಲಾ ಶ್ರೀಮಠಗಳ ಸ್ವಾಮೀಜಿಗಳ ಆಶೀರ್ವಾದದಿಂದ ಶೇ 90ರಷ್ಟು ಗುಣಮುಖನಾಗಿದ್ದು ಇನ್ನು ಹತ್ತು ದಿನಗಳ ಕಾಲ ವೈದ್ಯರ ಸಲಹೆಯ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದು, ಶೀಘ್ರದಲ್ಲಿ ಮತ್ತೆ ತಮ್ಮ ಸೇವೆಗೆ ಬರುವುದಾಗಿ ಹೇಳಿದರು.

ಮಾಲಿಕಯ್ಯಾ ಗುತ್ತೇದಾರ ದೈವಿ ಪುರುಷರಾಗಿದ್ದಾರೆ. ಕೊರೋನಾದಿಂದ ಗುಣಮುಕ್ತಿ ಹೊಂದಿ ಮತ್ತೆ ಜನರ ಸೇವೆ ಮಾಡಲು ದೇವರು ಅವಕಾಶ ಮಾಡಿಕೊಟ್ಟಿದ್ದಾನೆ. ಗುತ್ತೇದಾರ ಕುಟುಂಬ ಒಳ್ಳೆಯ ಸಂಸ್ಕಾರ ಹೊಂದಿದ್ದು ಈ ಕುಟುಂಬಕ್ಕೆ ದೈವಬಲವಿದೆ. ಬಡಜನರಿಗೆ ಸಹಾಯ ಸಹಕಾರ ಮಾಡಿದ್ದಾರೆ. ಅವರು ಮಾಡಿದ ಒಳ್ಳೆಯ ಕಾರ್ಯಗಳಿಗೆ ದೇವರು ಮೆಚ್ಚಿದ್ದಾನೆ.ಅವರ ಅಭಿಮಾನಿ ದೇವರುಗಳ ಆಶೀರ್ವಾದ ಇರಲಿ ಎಂದು ಬಡದಾಳ ಶ್ರೀಗಳು ಮತ್ತು ಅಫಜಲಪುರ ಶ್ರೀಗಳು ಹೇಳಿ ಶುಭ ಹಾರೈಸಿದರು. ಅಲ್ಲದೇ ಈ ಕಾರ್ಯಕ್ರಮದಲ್ಲಿ ಬಡದಾಳ ತೇರಿನ ಮಠದ ಶ್ರೀ ಚನ್ನಮಲ್ಲ ಶೀವಯೋಗಿ ಶಿವಾಚಾರ್ಯರು, ಅಫಜಲಪೂರದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರುದ್ದೇವಾಡಿ, ಸೂರ್ಯಕಾಂತ ನಾಕೇದಾರ, ಜಿಲ್ಲಾ ಜಿಪಂ ಮಾಜಿ ಅಧ್ಯಕ್ಷ ನಿತೀನ ಗುತ್ತೇದಾರ, ಕುಶಾಲ ಗುತ್ತೇದಾರ, ಬಿಜೆಪಿ ಅಧ್ಯಕ್ಷ ಶೈಲೇಶ ಗುಣಾರಿ, ಮುಖಂಡರಾದ ಶಿವಪುತ್ರಪ್ಪ ಕರೂರ, ಮಲ್ಲಿನಾಥ ಪಾಟೀಲ ಚಿಣಮಗೇರಿ, ಸಿದ್ದಯ್ಯ ಆಕಾಶಮಠ, ಬಾಲರಾಜ ಗುತ್ತೇದಾರ, ವಿಶಾಲ ಗುತ್ತೇದಾರ, ರಮೇಶ ಮಾಸ್ತರ ಸೊನ್ನ, ದೇವೀಂದ್ರ ಜಮಾದಾರ, ಶ್ರೀಶೈಲ ಬಳೂರ್ಗಿ, ಧಾನು ಪತಾಟೆ, ಶಿವು ಗಾಣುರ, ಅರವಿಂದ ದೊಡ್ಮನಿ, ಚನ್ನಬಸು ನಾವಿ, ಮಹಾಂತೇಶ ಬಡದಾಳ ಇತರರಿದ್ದರು.