ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ 

ಹರಿಹರ.ಜು. 18: ಪ್ರವಾಹ ಪೀಡಿತ ಪ್ರದೇಶವಾದ ಗಂಗಾನಗರ ಕೈಲಾಸ ನಗರ  ಬೆಂಕಿನಗರ  ಇತರ ಪ್ರದೇಶಗಳಿಗೆ ನೂತನ ಜಿಲ್ಲಾ ಅಧಿಕಾರಿ ಶಿವಾನಂದ್ ಕಪಾಸಿ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು ತುಂಗಭದ್ರಾ ನದಿಯ ನೀರಿನ ಹರಿವು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಗಂಗಾ ನಗರದ ನಿವಾಸಿಗಳಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮಿನಲ್ಲಿ ಕಾಳಜಿ ಕೇಂದ್ರದ ವ್ಯವಸ್ಥೆಯನ್ನು  ಮಾಡಲಾಗಿದ್ದು ನದಿಯ ನೀರು  ನುಗ್ಗುವ ಪ್ರದೇಶದ ನಿವಾಸಿಗಳಿಗೆ ಶಾಶ್ವತ  ವ್ಯವಸ್ಥೆಗೆ ಶೀಘ್ರವಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು. ಬೆಂಕಿ ನಗರ ಗಂಗಾನಗರ ಮತ್ತು ಇತರೆ ಪ್ರದೇಶಗಳಲ್ಲಿ ಅವಘಡ ಸಂಭವಿಸುವ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವ ಕಾರ್ಯವಲ್ಲ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ತಾಲ್ಲೂಕುಮಟ್ಟದ ಅಧಿಕಾರಿಗಳ ಬಳಿ ಸಮಗ್ರವಾಗಿ ಮಾಹಿತಿಯನ್ನು ಪಡೆದು ಮುಂದಿನ ದಿನಗಳಲ್ಲಿ ನಗರದಲ್ಲಿ ಜಲ್ವಂತ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ನನ್ನ ಕರ್ತವ್ಯವನ್ನು ನಿಷ್ಠೆ ಪ್ರಾಮಾಣಿಕತೆಯಿಂದ ಮಾಡುತ್ತೇನೆಂದರು ಪ್ರಥಮವಾಗಿ ನಗರದ ಗುಹಾರಣ್ಯ  ಐತಿಹಾಸಿಕ ಕ್ಷೇತ್ರವಾದ ಶ್ರೀ ಹರಿಹರೇಶ್ವರ  ಸ್ವಾಮಿ ಲಕ್ಷ್ಮಿ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು ನಂತರ ತಹಶೀಲ್ದಾರ್ ಮತ್ತು ಪೌರಾಯುಕ್ತರೊಂದಿಗೆ ಮಳೆ ಮತ್ತು ಇತರ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆದರು.ಈ ವೇಳೆ ತಾಲ್ಲೂಕು ದಂಡಾಧಿಕಾರಿ ಡಾ ಎಂಬಿ ಅಶ್ವತ್ಥ್ .ನಗರಸಭೆ ಪೌರಾಯುಕ್ತ ಬಸವರಾಜ್ ಐಗೂರು . ನಗರಸಭಾ ಅಧ್ಯಕ್ಷೆ ಶಾಹೀನಾ ಬಾನು ದಾದಾಪೀರ್ ಬಾನುವಳ್ಳಿ .ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಸಮೀರ್ ಅಹ್ಮದ್. ಗ್ರಾಮಲೆಕ್ಕಾಧಿಕಾರಿ ಮಲ್ಲಿಕಾರ್ಜುನ್. ದೇವರಾಜ್. ಹನಗವಾಡಿ .ಕಂದಾಯ ಇಲಾಖೆ ನಗರಸಭೆ ಸಿಬ್ಬಂದಿ ವರ್ಗದವರು ಇದ್ದರು.