ಪ್ರವಾಹ ಪೀಡಿತ ಪ್ರದೇಶಗಳಿಗೆ  ಭೇಟಿ 

ಹರಿಹರ.ಜು. 16 ; ಜಲಾವೃತಗೊಂಡ ಮನೆಗಳ ಪ್ರದೇಶಗಳಿಗೆ ಹಾಗೂ ಕಾಳಜಿ ಕೇಂದ್ರಕ್ಕೆ ದಾವಣಗೆರೆ ಉಪ ವಿಭಾಗ ಅಧಿಕಾರಿ ತಹಶೀಲ್ದಾರ್ ಪೌರಾಯುಕ್ತರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು ಕೈಲಾಸ್ ನಗರದ ಬೆಂಕಿನಗರ ಮತ್ತು ಇತರ ಪ್ರದೇಶಗಳಲ್ಲಿ ಜಲಾವೃತ ಕೊಳ್ಳುವ ಮುನ್ನವೇ ಗಂಗಾ ನಗರದ ನಿವಾಸಿಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆಯ ಗೋದಾಮಿನ ಕಾಳಜಿ ಕೇಂದ್ರದಲ್ಲಿ  ಸುಮಾರು ಮನೆಗಳ ನಿವಾಸಿಗಳಿಗೆ ಬೆಳಗಿನ ಉಪಾಹಾರ ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಮಾಡಲಾಗಿದೆ ಬಿಡುವಿಲ್ಲದೆ ಸುರಿಯುತ್ತಿರುವ ಮಹಾ ಮಾರಿ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಭದ್ರಾ ಜಲಾಶಯದ ನೀರಿನ ಮಟ್ಟ ಹೆಚ್ಚು ಅರಿವು ಆಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನೀರಿನ ಹರಿವು ಜಾಸ್ತಿ ಆಗುತ್ತಿದೆ ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಕೈಲಾಸ್ ನಗರದಲ್ಲಿರುವ ನಿವಾಸಿಗಳನ್ನು ಸುರಕ್ಷತಾ ಭದ್ರತಾ ದೃಷ್ಟಿಯಿಂದ ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆಯನ್ನು ಮಾಡಲಾಗಿತ್ತು ಸ್ಥಳಗಳಿಗೆ ದಾವಣಗೆರೆ ಜಿಲ್ಲಾ ಉಪ ವಿಭಾಗ ಅಧಿಕಾರಿ ದುರ್ಗಾ ಶ್ರೀ .ತಾಲ್ಲೂಕು ದಂಡಾಧಿಕಾರಿ ಡಾ ಎಂ ಬಿ ಅಶ್ವತ್ಥ್ .ನಗರಸಭೆಯ ಪೌರಾಯುಕ್ತ ಬಸವರಾಜ್ ಐಗೂರು .ನಗರಸಭೆ ಕಂದಾಯ ಇಲಾಖೆ,ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.