ಪ್ರವಾಹ ಪೀಡಿತ ಪ್ರದೇಶಗಳಿಗೆ ಅಧಿಕಾರಿಗಳ ಭೇಟಿ 


 ಹರಿಹರ.ಜು 15:   ಪ್ರವಾಹ ಪೀಡಿತ ಪ್ರದೇಶಗಳಾದ ಬೆಂಕಿನಗರ .  ಗಂಗಾನಗರ ಕೈಲಾಸ್ ನಗರ  ನದಿಪಾತ್ರದ  ನಿವಾಸಿ ಸ್ಥಳಗಳಿಗೆ ದಾವಣಗೆರೆ ಅಪಾರ  ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಪೌರಾಯುಕ್ತರ ತಂಡ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಯಾವುದೇ ರೀತಿಯ ಜನ ಜಾನುವಾರುಗಳಿಗೆ  ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ತಿಳಿಸಿದರು. ತಹಶೀಲ್ದಾರ್   ಡಾ ಎಂ.ಬಿ ಅಶ್ವಥ್. ನಗರಸಭೆಯ ಪೌರಾಯುಕ್ತ ಬಸವರಾಜು ಐಗೂರ್ .ನಗರ ಠಾಣೆ ಪಿಎಸ್ ಐ ಸುರೇಶ್ .ಇವರೊಂದಿಗೆ ಚರ್ಚೆ ನಡೆಸಿ ಕಾಳಜಿ ಕೇಂದ್ರದ ವ್ಯವಸ್ಥೆ  ಪ್ರವಾಹ ಭೀತಿ ಎದುರಿಸಲು ಸಿದ್ಧತೆ ಮಾಡಿಕೊಳ್ಳಲು ತಿಳಿಸಿದರು.