ಪ್ರವಾಹ ಪೀಡಿತ ಪ್ರದೇಶಕ್ಕೆ ಮುಖ್ಯ ಸಚೇತಕರ ಭೇಟಿ

ಕೆ.ಆರ್. ಪುರ,ಸೆ.೧೮- ಮಳೆಯಿಂದ ಹಾನಿಯಾದ ಕ್ಷೇತ್ರದ ಹೊರಮಾವಿನ ಸಾಯಿ ಬಡಾವಣೆಗೆ ಭೇಟಿ ನೀಡಿದ ವಿಧಾನಪರಿಷತ್ ಮುಖ್ಯಸಚೇತಕ ನಾರಾಯಣಸ್ವಾಮಿ ಪರಿಶೀಲನೆ ನಡೆಸಿದರು.
ಪರಿಶೀಲನೆ ನಡೆಸಿ ಮಾತನಾಡಿದ ನಾರಾಯಣಸ್ವಾಮಿ ಮಳೆಯಿಂದಾಗಿ ಕೆಆರ್ ಪುರ ಕ್ಷೇತ್ರ ಹೊರಮಾವು ವಾರ್ಡ್‌ನ ವಡ್ಡರಪಾಳ್ಯ, ಸಾಯಿ ಬಡಾವಣೆ, ಅನುಗ್ರಹ ಬಡಾವಣೆ ಭಾಗಶಃ ಮುಳುಗಿ ಸುಮಾರು ೫೦೦ ಮನೆಗಳಿಗೆ ಹಾನಿಯಾಗಿದ್ದಲ್ಲದೆ, ಜನಜೀವನ ಅಸ್ತವ್ಯಸ್ತವಾಗಿದ್ದು ಇದಕ್ಕೆ ಸ್ಥಳೀಯ ಶಾಸಕರ ನಿರ್ಲಕ್ಷ್ಯವೇ ನೇರಕಾರಣ ಎಂದು ಆರೋಪಿಸಿದರು.
ಸರ್ಮಪಕ ಕಾಮಾಗಾರಿಗಳನ್ನು ಮಾಡಿ ಅಭಿವೃದ್ಧಿಪಡಿಸಿದ್ದರೆ ಯಾವುದೇ ಅವಘಡ ಸಂಭವಿಸುತ್ತಿರಲಿಲ್ಲ ಹಾಗೂ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣ ವಾಗುತ್ತಿರಲಿಲ್ಲ ಎಂದು ಕಿಡಿಕಾರಿದರು.
ಮನೆಗಳಿಗೆ ನುಗ್ಗಿದ ಮಳೆ ನೀರಿನಿಂದ ಸಾಕಷ್ಟು ಹಾನಿಯಾಗಿದ್ದು,
ಇದಕ್ಕೆ ಎರಡು ಲಕ್ಷ ದಿಂದ ಐದು ಲಕ್ಷದವರೆಗೆ ನಷ್ಟ ತುಂಬುವಂತೆ ಸರ್ಕಾರಕ್ಕೆ ಆಗ್ರಹಿಸಿದರು. ಮಾಜಿ ಪಾಲಿಕೆ ಸದಸ್ಯೆ ರಾಧಮ್ಮವೆಂಕಟೇಶ್ ಮಾತನಾಡಿ, ರೈಲ್ವೆ ಸೇತುವೆ ಬಳಿ ರಾಜಕಾಲುವೆ ನಿರ್ಮಿಸಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಾನಿಗೊಳಗಾದ ಪ್ರದೇಶಗಳ ನಿವಾಸಿಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿದರು. ಈ ವೇಳೆ ಬ್ಲಾಕ್ ಅಧ್ಯಕ್ಷ ಮಂಜುನಾಥ್, ಮಹಿಳಾ ಅಧ್ಯಕ್ಷೆ ಸಾಕಮ್ಮ, ಮುಖಂಡರಾದ ಡಿ.ಎ. ಗೋಪಾಲ್, ಕಲ್ಕೆರೆ ನಾರಾಯಣಸ್ವಾಮಿ, ಅಗರ ಪ್ರಕಾಶ್, ಪ್ರಸನ್ನ, ಮೇಡಹಳ್ಳಿ ರಾಕೇಶ್, ದೀಪು ಇದ್ದರು.