ಪ್ರವಾಹ ಪೀಡಿತ ಗ್ರಾಮಗಳಿಗೆ ಮುಂಜಾಗ್ರತ ಕ್ರಮಕ್ಕೆ ಸೂಚನೆ

ಲಿಂಗಸುಗೂರ,ಜು.೨೮-
ಲಿಂಗಸುಗೂರು ತಾಲ್ಲೂಕು ಸಹಾಯಕ ಆಯುಕ್ತರಾದ ಅವರು ಅಧಿಕಾರಿಗಳ ಜೊತೆ ಸೇರಿ ಲಿಂಗಸುಗೂರು ತಹಶೀಲ್ದಾರ್‌ರು ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯತ್ ಹಾಗೂ ತಾಲೂಕ್ ಮಟ್ಟದ ಇತರೆ ಅಧಿಕಾರಿಗಳು ಮತ್ತು ಪ್ರವಾಹ ಪೀಡಿತ ಗ್ರಾಮಗಳಿಗೆ ನೇಮಿಸಿದ ನೋಡಲ್ ಅಧಿಕಾರಿಗಳು ಹಾಗೂ ಗ್ರಾಮದ ಎಲ್ಲಾ ಸಾರ್ವಜನಿಕರೊಂದಿಗೆ ಸಭೆ ನೆಡೆಸಿ
ಎಲ್ಲಾ ಗ್ರಾಮಸ್ಥರಿಗೆ ಮುಂಜಾಗ್ರತ ಕ್ರಮವಾಗಿ ಸೂಚನೆ ನೀಡಿದರು.
ನಾರಾಯಣಪುರ ಡ್ಯಾಮ್ ನಿಂದ ನದಿಗೆ ಹರಿಬಿಡುತ್ತಿರುವ ನೀರಿನ ಬಗ್ಗೆ ಎಚ್ಚರಿಕೆಯಿಂದ ಇರಲು ಸಲಹೆ ಸೂಚನೆಗಳನ್ನು ನೀಡಲಾಯಿತು. ಸದ್ಯ ನಾರಾಯಣಪುರ ಡ್ಯಾಮ್ ನಿಂದ ೧,೧೩,೦೦೦ ಕ್ಯೂಸೆಕ್s ನೀರನ್ನು ಹರಿಬಿಟ್ಟಿದ್ದು ಅದು ಕ್ರಮೇಣವಾಗಿ ೧,೫೦,೦೦೦ ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗುತ್ತದೆ , ಇಂದು ಸಂಜೆವರೆಗೆ ಹೆಚ್ಚಳ ಮಾಡುವದಾಗಿ ತಿಳಿಸಿರುತ್ತಾರೆ.
ನದಿ ದಡದಲ್ಲಿ ಇರುವ ಜನರು ಎಚ್ಚರಿಕೆ ಯಿಂದ ಇರಬೇಕು ಯಾವುದೇ ಕಾರಣಕ್ಕೂ ನದಿ ದಾಟಲು ದೋಣಿ ಮೂಲಕ ಹೋಗಬಾರದು ಎಂಬುದು ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಸಕಲ ಸಿದ್ಧತೆ ಮಾಡಲಾಗುತ್ತದೆ ಅದಕ್ಕಾಗಿ ನದಿ ದಡದಲ್ಲಿ ಇರುವ ಜನರು ತಾಲೂಕು ಆಡಳಿತಕ್ಕೆ ಸಹಕರಿಸಬೇಕು ಎಂದು ಅಧಿಕಾರಿಗಳು ಜನರಿಗೆ ಮನವಿ ಮಾಡಿದರು ಆದ್ದರಿಂದ ಗ್ರಾಮದವರು ಯಾವುದೇ ಕಾರಣಕ್ಕೂ ನದಿ ದಂಡೆಗೆ ಹೋಗಬಾರದು ಮತ್ತು ಜಾನುವಾರುಗಳನ್ನು ಬಿಡದಂತೆ ಎಚ್ಚರವಹಿಸಲು ತಿಳಿಯಪಡಿಸಲಾಯಿತು.
ಈಗಾಗಲೇ ನೇಮಕ ಮಾಡಿರುವ ನೋಡಲ್ ಅಧಿಕಾರಿಗಳ ತಂಡ ಅವರಿಗೆ ವಹಿಸಿರುವ ಗ್ರಾಮಗಳಿಗೆ ತೆರಳಿ ಎಲ್ಲಾ ಗ್ರಾಮಸ್ಥರಿಗೆ ನದಿ ಪಾತ್ರದ ದಂಡೆಗೆ ಹೋಗದಂತೆ ತಿಳಿಸಿರುತ್ತಾರೆ.
ನಾರಾಯಣಪುರ ಡ್ಯಾಮ್ ದಿಂದ ೧,೫೦,೦೦೦ ಕ್ಯೂಸೆಕ್ ನೀರು ಬಿಡುವ ಮೂಲಕ ಶೀಲಹಳ್ಳಿ ಬ್ರಿಡ್ಜ್ ಮುಳುಗುತ್ತದೆ. ಕಾರಣ ಬ್ಯಾರಿಕೇಡ್ ಹಾಕಿ ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ನದಿ ಪಾತ್ರದ ಜನರಿಗೆ ಈಗಾಗಲೇ ಡಂಗೂರ ಮೂಲಕ ಮತ್ತು ವಾಟ್ಸಾಪ್ ಸಂದೇಶದ ಮೂಲಕ ನಾರಾಯಣಪುರ ಡ್ಯಾಮ್ ದಿಂದ ಹರಿಬಿಡುತ್ತಿರುವ ನೀರಿನ ಮಟ್ಟದ ತಿಳಿಸಲಾಗುತ್ತಿದೆ. ಎಂದು ತಾಲ್ಲೂಕು ಆಡಳಿತ ಮಾಹಿತಿಯನ್ನು ನೀಡಿದ್ದಾರೆ.