ಪ್ರವಾಹದಿಂದ ಕೊಚ್ಚಿಹೋದ 3 ಎಕರೆ ಗುಲಾಬಿ ತೋಟ:ಸಂಕಟದಲ್ಲಿ ರೈತ

ಸೇಡಂ,ಅ.30: ತಾಲೂಕಿನ ಬೀರನಳ್ಳಿ ಗ್ರಾಮದ ಪ್ರಗತಿಪರ ರೈತ ಬರಡು ಭೂಮಿಯಲ್ಲಿಯೇ ಸಾವಯವ ಕೃಷಿಯಲ್ಲಿ ಮೊಟ್ಟಮೊದಲು ಗುಲಾಬಿ ತೋಟ ಪ್ರಾರಂಭಿಸಿದ ಕೀರ್ತಿ ಗುರುಸ್ವಾಮಿ ಕಲ್ಮಠ ಅವರಿಗೆ ಸಲ್ಲುತ್ತದೆ. ಆದರೆ ಇತ್ತೀಚೆಗೆ ಸುರಿದ ಭಾರೀ ಮಳೆ, ಹಾಗೂ ಬೆಣ್ಣೆ ತೊರೆ ಕೆರೆಯಿಂದ ಕಾಗಿಣಾ ನದಿಗೇ ನೀರು ಬಿಟ್ಟ ಹಿನ್ನಲೆ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ತಾಲೂಕು ಮತ್ತು ಅನೇಕ ಹಳ್ಳಿಗಳ ರೈತರ ಕೂಲಿಕಾರ್ಮಿಕರ ಜನರು ಬದುಕು ದುಸ್ತರವಾಗಿದೆ. ತಾಲೂಕಿನಲ್ಲಿ ಅನೇಕ ತೋಟಗಳಿದ್ದು ನನಗಿರುವ ತೋಟಕ್ಕೆ ಅಧಿಕಾರಿಗಳು ಭೇಟಿ ನೀಡದೆ ಇರುವುದು ದುರದೃಷ್ಟಕರ. ಹಾನಿಯಾಗಿರುವ ಗುಲಾಬಿ ತೋಟಕ್ಕೆ ಸಂಜೆವಾಣಿ ಪತ್ರಿಕೆಯ ವರದಿಗಾರರು ತೋಟಕ್ಕೆ ಭೇಟಿ ನೀಡಿದಾಗ
ಗುರುಸ್ವಾಮಿ ಕಲ್ಮಠ ದುಃಖತಪ್ತರಾಗಿ ವರದಿಗಾರರೊಂದಿಗೆ ಮಾತನಾಡಿದ ಅವರು ಮೂರು ಎಕರೆ ಗುಲಾಬಿ ತೋಟ, 15 ಗುಂಟೆ ಸೇವಂತಿ ಹೂವು, 5 ಗುಲ್ಚರಿ ಹೂವು, ಕಬ್ಬು 20 ಗುಂಟೆ ಕಾಗಿನ ನದಿಗೆ ಹೊಂದಿಕೊಂಡಿರುವುದರಿಂದ 15 ಅಡಿಗೂ ಹೆಚ್ಚು ನೀರು ಎರಡು ದಿನದವರೆಗೆ ಗುಲಾಬಿ ತೋಟಕ್ಕೆ ನುಗ್ಗಿದ ಪರಿಣಾಮ 5 ಲಕ್ಷಕ್ಕೂ ಹೆಚ್ಚು ರೂಪಾಯಿ ಹಾನಿಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ತೋಟದಲ್ಲಿ 10 ಚೀಲ ಗೊಬ್ಬರ, ಪವರ್ ಚಿಲ್ಲರ್ ಮಷೀನ್, 85000 ರೂಪಾಯಿ ಹೊಸದಾಗಿ ತಂದ ಕಳೆ ತೆಗೆಯುವ ಮಷೀನ್ ಗೆ ಹಾನಿ, ಎರಡುನೂರು ಲಿಟರ್ 2 ಬ್ಯಾರೆಲ್ , 30000 ಸಾವಿರ ಹೊಸ ಸೆಡ್ ನಿರ್ಮಾಣ ಮಾಡಿದ್ದು ನೀರಿಗೆ ಸಂಪೂರ್ಣ ಹಾನಿಯಾಗಿದೆ, ಸೋಲಾರ್ ಬ್ಯಾಟರಿ, ಗುಲಾಬಿ ಹೂ ತೆಗೆಯುವ 10 ಬಕೆಟ್, ನೀರಿನ ಮೋಟಾರ್, ಸ್ಪಿಂಕ್ಲರ್ ಪೈಪುಗಳು, 2000 ಸಾವಿರ ನುಗ್ಗಿ ಗಿಡಗಳು, ಹಾನಿಯನ್ನು ಅಳು ಮುಖದಲ್ಲೇ ವಿವರಿಸಿ ಹೇಳಿದರು. ಗುಲಾಬಿ ಗಿಡಗಳನ್ನು ಬದುಕಿಸಲು 40000 ಸಾವಿರ ರೂಪಾಯಿ ಔಷಧಿಯ ಸಿಂಪರಣೆ ಮಾಡಿದ್ದೇವೆ. ಗುಲಾಬಿ ಗಿಡಗಳಿಗೆ ಮಣ್ಣು ಮೆತ್ತಿಕೊಂಡಿರುವುದು ಮುಳ್ಳು-ಕಂಟಿಗಳು ಬಂದು ನಿಂತಿರುವುದರಿಂದ 10 ಕೂಲಿಕಾರ್ಮಿಕರನ್ನು ಒಂದು ವಾರದಿಂದ ತೆಗೆಯಲು ಮುಂದಾಗಿದೆವೆ. ಪ್ರವಾಹ ಬಂದು ಹತ್ತು ದಿನಗಳಾದರೂ ನಮ್ಮ ತೋಟಕ್ಕೆ ಹಾನಿ ಪರಿಶೀಲಿಸಲು ಬಾರದ ತೋಟಗಾರಿಕೆ ಇಲಾಖೆ ಕೃಷಿ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು. ಅಧಿಕಾರಿಗಳು ಜವಾಬ್ದಾರಿಯುತ ಕೆಲಸ ಮಾಡದೆ ಜನರ ತೆರಿಗೆ ಹಣ ತೆಗೆದುಕೊಂಡು ಕೆಲಸ ಮಾಡದಿರುವುದು ದುರದೃಷ್ಟಕರ. ಆಡಳಿತ ಮಾಡುವಂತಹ ಸರ್ಕಾರವು ಅಧಿಕಾರಿಗಳ ವಿರುದ್ಧ ಮತ್ತು ತಾಲೂಕಿಗೆ ಸಂಬಂಧಪಟ್ಟ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಕಂದಾಯ ಇಲಾಖೆಯಗಳ ವಿರುದ್ಧ ಶಾಸಕರು ಯಾವುದೇ ರೀತಿಯ ಕಠಿಣ ಕ್ರಮ ಕೈಗೊಳ್ಳದಿರುವುದು ದುರದಷ್ಟಕರ. ಸಂಜೆವಾಣಿ ಪತ್ರಿಕೆಯ ಮುಖಾಂತರ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಲ್ಲಿ ಜನಪ್ರತಿನಿಧಿಗಳಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ನಮ್ಮ ಉಪಜೀವನಕ್ಕೆ ಈ ತೋಟ ಮಾಡಿಕೊಂಡಿದ್ದು ಪ್ರವಾಹದಿಂದ ಸಂಪೂರ್ಣ ಜಲಾವೃತಗೊಂಡಿದ್ದು ಲಕ್ಷ ರುಪಾಯಿ ಹಾನಿಯಾಗಿದೆ ಸರ್ಕಾರದಿಂದ ಅಲ್ಪ ಸಹಾಯವಾದರೂ ಪರಿಹಾರ ಒದಗಿಸಿಕೊಡಬೇಕೆಂದು,
ಗುರುಸ್ವಾಮಿ ಕಲ್ಮಠ ಬೀರನಳ್ಳಿ ತಾಲೂಕಿನಲ್ಲಿ ಮೊಟ್ಟಮೊದಲು ಸಾವಯವ ಕೃಷಿಯಲ್ಲಿ ಗುಲಾಬಿ ತೋಟ ಮಾಡಿದ ರೈತ ಮನವಿ ಮಾಡಿದ್ದಾರೆ.