ಪ್ರವಾಹಕ್ಕೆ ಕೊಚ್ಚಿಹೋಗಿರುವ ಕರೆಗಳ ಮರುನಿರ್ಮಾಣ: ಸಚಿವ ಮಧುಸ್ವಾಮಿ

ಚಿಂಚೋಳಿ,ಜ.6- ಇಚೇಗೆ ಸುರಿದ ಬಾರಿ ಮಳೆ ಮತ್ತು ಪ್ರವಾಹದಿಂದಾಗಿ ತಾಲೂಕಿನ ಕೆಲ ಕೆರೆಗಳು ಕೊಚ್ಚಿಹೋಗಿದ್ದು, ಅವುಗಳನ್ನು ಮರು ನಿರ್ಮಾಣ ಮಾಡಲಾಗುವುದು ಎಂದು ಸಣ್ಣ ನೀರಾವರಿ ಮತ್ತು ಕಾನೂನು, ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಜೆ. ಸಿ. ಮಾಧುಸ್ವಾಮಿ ಇಂದಿಲ್ಲಿ ಹೇಳಿದರು.
ತಾಲೂಕಿನ ನಾಗಾಯಿದ್ಲಾಯಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಇತ್ತೀಚೆಗೆ ಅತಿ ಹೆಚ್ಚು ಮಳೆ ಬಿದ್ದ ಕಾರಣ ಮಳೆಯ ನೀರಿನ ಪ್ರವಾಹದಿಂದ ಈ ಗ್ರಾಮದ ಕೆರೆ ಕೊಚ್ಚಿಕೊಂಡು ಹೋಗಿದ್ದನ್ನು ಪರಿಶಿಲನೆ ನಡೆಸಿದರು.
ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ತಾಲೂಕಿನಲ್ಲಿ ಎಷ್ಟು ಕೆರೆಗಳು ಪ್ರವಾಹದಿಂದ ಹಾನಿಯಾಗಿರುವ ಕುರಿತು ಮಾಹಿತಿಯನ್ನು ಪಡೆದು ಅವುಗಳನ್ನು ಪುನರ ನಿರ್ಮಾಣ ಕಾರ್ಯವನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು ಹೇಳಿದರು.
ಸಚಿವರೊಂದಿಗೆ ಸಂಸದ ಡಾ. ಉಮೇಶ ಜಾಧವ. ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅನೀಲ ಕುಮಾರ ರಾಠೋಡ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಾದ ಶಿವಶರಣಪ್ಪ ಕೇಶ್ವರ. ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ಗುರುಪ್ರಸಾದ. ಚಿಂಚೋಳಿಯ ಪಿಎಸ್‍ಐ ರಾಜಶೇಖರ ರಾಠೋಡ. ಚಿಂಚೋಳಿಯ ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷರಾದ ಸಂತೋಷ ಗಡಂತಿ. ಬಿಜೆಪಿಯ ಮುಖಂಡರಾದ ಭೀಮಶೆಟ್ಟಿ ಮುರಡಾ. ಲೋಕಸಭೆ ಸದಸ್ಯರ ಮತ್ತು ಶಾಸಕರ ಆಪ್ತ ಕಾರ್ಯದರ್ಶಿಗಳಾದ ಶ್ರೀನಿವಾಸ ಚಿಂಚೋಲಿಕರ್. ಮತ್ತು ನಾಗಾಯಿದ್ಲಾಯಿ ಗ್ರಾಮದ ಮುಖಂಡರು ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.