ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಚಿವ ಯೋಗೇಶ್ವರ್‍ಗೆ ಮನವಿ

ಕಲಬುರಗಿ ಏ 6: ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯು ಇಂದು ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ನೇತೃತ್ವದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ಅವರನ್ನು ಭೇಟಿಮಾಡಿ ಕಲ್ಯಾಣ ಕರ್ನಾಟಕಪ್ರದೇಶಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ವಿವರವಾದ ಮನವಿ ಪತ್ರವನ್ನು ಸಲ್ಲಿಸಿತು.
ಕಲ್ಯಾಣ ನಡೆ ಜನಪ್ರತಿನಿಧಿಗಳ ಕಡೆ ಅಭಿಯಾನ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸಮಿತಿಯು ಸಚಿವರನ್ನು ಭೇಟಿ ಮಾಡಿತು.ಮನವಿ ಪತ್ರ ಸ್ವೀಕರಿಸಿದ ಸಚಿವರು ಇನ್ನುಮುಂದೆ ಕಲ್ಯಾಣಕರ್ನಾಟಕಕ್ಕೆ ಅನ್ಯಾಯವಾಗದಂತೆ ಮುಖ್ಯಮಂತ್ರಿಗಳಿಗೆ ಮನವರಿಕೆಮಾಡುವುದಾಗಿ ತಿಳಿಸಿದರು.ಕಲ್ಯಾಣ ಕರ್ನಾಟಕ ಪ್ರದೇಶದ ಶ್ರೀಮಂತ ಇತಿಹಾಸದ ಪ್ರವಾಸಿ ತಾಣಗಳಅಭಿವೃದ್ಧಿಗೆ ಒತ್ತು ನೀಡಿ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸಲುಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ರಾಜಕುಮಾರ ಪಾಟೀಲತೇಲ್ಕೂರ,ಬಸವರಾಜ ಮತ್ತಿಮೂಡ, ಪಕ್ಷದ ಅಧ್ಯಕ್ಷರಾದಶಿವರಾಜಪಾಟೀಲ ರದ್ದೇವಾಡಗಿ ಹಾಗೂ ಸಮಿತಿಯ ಮುಖಂಡರುಗಳಾದಮನೀಷ ಜಾಜು, ಲಿಂಗರಾಜ ಸಿರಗಾಪೂರ, ಡಾ. ಮಾಜಿದ್ ದಾಗಿ, ಶಿವಲಿಂಗಪ್ಪಬಂಡಕ್, ಮಹಮ್ಮದ ಮಿರಾಜೊದ್ದೀನ್, ಭದ್ರಶೆಟ್ಟಿ, ಶಾಮ್ ನಾಟಿಕಾರ,ಮಲ್ಲಿನಾಥ ಸಂಗಶೆಟ್ಟಿ, ಭಗವಂತ್ರಾವ ಪಾಟೀಲ್, ಜ್ಞಾನಮಿತ್ರಸ್ಯಮ್ಯುವೆಲ್, ಅಬ್ದುಲ ರಹೀಮ್, ಭವಾನಿಕುಮಾರ ವಳಕೇರಿ, ಶಾಂತಪ್ಪಕಾರಭಾಸಗಿ, ಲಿಂಗಣ್ಣ ಉದ್ದನೂರ, ಅಸ್ಲಂ ಚೌಂಗೆ, ವೀರೇಶ ಪುರಾಣಿಕ,ಶಿವಾನಂದ ಕಾಂದೆ, ರಾಜು ಜೈನ, ಸಾಬೀರ, ಚಂದ್ರಶೇಖರ ಮೇಕಿನ್,ಆಕಾಶ ರಾಠೋಡ ಸೇರಿದಂತೆ ಇತರರು ಇದ್ದರು.