ಪ್ರವಾಸಿ ತಾಣಗಳು ಬಂದ್‍ಗೆ ಸೂಚನೆ

ಬಾದಾಮಿ, ಏ17: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚಾಗುತ್ತಿರುವುದರಿಂದ ಐತಿಹಾಸಿಕ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲ ಸೇರಿದಂತೆ ಇಲ್ಲಿನ ಪ್ರವಾಸಿ ತಾಣಗಳನ್ನು ಬಂದ್ ಮಾಡಲು ಕೇಂದ್ರ ಪ್ರಾಚ್ಯ ವಸ್ತು ಇಲಾಖೆ ಎ.15 ರಂದು ಆದೇಶ ಹೊರಡಿಸಿದೆ.
ಇದರಿಂದ ಪ್ರವಾಸಿಗರು ಪ್ರವಾಸಿ ತಾಣಗಳ ವೀಕ್ಷಣೆ ಬಂದ್ ಆಗಿದೆ. ಕೆಲವರು ನಗರದ ಗುಹಾಂತರ ದೇವಾಲಯಗಳಿಗೆ ವೀಕ್ಷಣೆಗೆ ಬಂದು ಮರಳಿ ಹೋಗಿದ್ದಾರೆ. ರಾಜ್ಯದ ವಿವಿದೆಡೆ ಮತ್ತು ಬೇರೆ ರಾಜ್ಯ ಮತ್ತು ವಿದೇಶಗಳಿಂದ ಬಂದಂತಹ ವಿದೇಶಿಗರು, ನಮ್ಮ ರಾಜ್ಯದ ಪ್ರವಾಸಿಗರು ಕೋವಿಡ್ ಇಷ್ಟು ಪ್ರಮಾಣದಲ್ಲಿ ಹರಡುತ್ತಿದ್ದರೂ ಸಹಿತ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ.
ಮಾಸ್ಕ್ ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಮಾಯವಾಗಿತ್ತು. ಇದರಿಂದ ಜನರು ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಲು ಬರುವವರಿಗೆ ಕೋವಿಡ್ ತಡೆ ನೀಡಿದಂತಾಗಿದೆ. ಕೂಡಲೇ ಜಾರಿಗೆ ಬರುವಂತೆ ಏಪ್ರಿಲ್ 15 ರಿಂದ ಮೇ 15 ರ ವರೆಗೆ ಬಂದ್ ಮಾಡಲು ಕೇಂದ್ರದ ಪುರಾತತ್ವ ಇಲಾಖೆಯ ನಿರ್ದೇಶಕ ಎನ್.ಕೆ.ಪಾಠಕ್ ಆದೇಶ ಹೊರಡಿಸಿದ್ದಾರೆ.