ಪ್ರವಾಸಿಗರಿಗೆ ಪ್ರಿಯ ತಾಣವಾದ ಪ್ರಾಣಿ ಸಂಗ್ರಹಾಲಯ

ಹೊಸಪೇಟೆ, ಡಿ.25: ಸತತವಾಗಿ ಮೂರು ತಿಂಗಳುಗಳ ಗೃಹಬಂಧನ ಹೊರಜಗತ್ತಿನಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಿಗೆ ದೃಶ್ಯ, ಮುದ್ರಣ, ಸಾಮಾಜಿಕ ಜಾಲತಾಣಗಳೇ ಪ್ರಿಯವಾಗಿದದ್ದ ಈ ವರ್ಷ ಈಗ ಕೊಂಚ ಸಡಿಲಗೊಳ್ಳುತ್ತಿದೆ. ಅದರೊಟ್ಟಿಗೆ ವರ್ಷಾಂತ್ಯದ ಹಿನ್ನಲೆಯಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಆಯಾ ಪ್ರದೇಶಗಳಿಗೂ ಕೊಂಚ ಚಟುವಟಿಕೆಗಳು ಹೆಚ್ಚಾಗುವಂತೆ ಮಾಡಿವೆ.
ನಗರದ ಕಮಲಾಪುರ ಪಟ್ಟಣದ ಅಣತಿ ದೂರದಲ್ಲಿನ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯವು ದಿನೇ ದಿನೇ ಪ್ರವಾಸಿಗರ ಪಿಕ್ ನಿಕ್ ಸ್ಪಾಟ್ ಆಗಿದೆ. ಅದರಲ್ಲೂ ವರ್ಷಾಂತ್ಯದ ಕಾರಣ ಪ್ರವಾಸಿಗರು ಈ ಭಾಗಕ್ಕೆ ಲಗ್ಗೆ ಇಡುತ್ತಿದ್ದಾರೆ.
ಸುಗಮ ಸಫಾರಿ: ಪ್ರಾಣಿ ಸಂಗ್ರಹಾಲಯದ ಆಕ್ರಷಕವೇ ಸಫಾರಿಯಾಗಿದ್ದು, ನಿಗದಿತ ಪ್ರವಾಸಿಗರನ್ನು ಮಿನಿಬಸ್ ಮೂಲಕ ಸಫಾರಿ ಏರ್ಪಡಿಸಿರುವ ಸಂಗ್ರಹಾಲಯವು ಸಿಂಹ, ಹುಲಿ, ಜಿಂಕೆ, ಹಾಗೂ ಕರಡಿಗಳಿಗೆ ಪ್ರತ್ಯೇಕ ಪ್ರದೇಶಗಳನ್ನು ಸ್ವತಂತ್ರವಾಗಿ ಪ್ರಾಣಿಗಳು ಓಡಾಡುವಂತೆ ಅವಕಾಶ ಕಲ್ಪಿಸಿದೃ. ಪ್ರವಾಸಿಗರಿಗೆ ಪ್ರಾಣಿಗಳ ಸಂಚಾರ ಮತ್ತು ಇತರ ಚಟುವಟಿಕೆಗಳನ್ನು ಪ್ರತ್ಯಕ್ಷವಾಗಿ ಕಣ್ತುಂಬಿಕೊಳ್ಳಲೆಂದೇ ಸಫಾರಿಯನ್ನು ಮಾಡಿದೆ.
ಮಕ್ಕಳಿಗಂತೂ ಕಾಣುಪ್ರಾಣಿಗಳ ನೇರದರ್ಶನ ರೋಮಾಂಚನ ಅನುಭವ ನೀಡುತ್ತಿದೆ.
ಸಫಾರಿ ನಂತರ ಕಾಲ್ನಡಿಗೆಯಲ್ಲಿಯೂ ಸಂಗ್ರಹಾಲಯದ ದರ್ಶನಕ್ಕೆ ಅವಕಾಶವಿದ್ದು ಕತ್ತೆ ಕಿರುಬ, ಚಿರತೆ, ವಿವಿಧ ಮಾದರಿಯ ಮಂಗಗಳು, ಮೊಸಳೆ, ಪಕ್ಷಿಗಳು, ನವಿಲು, ಎಮು ಕೋಳಿ ಮುಂತಾದ ಪ್ರಾಣಿ, ಪಕ್ಷಿಗಳನ್ನು ಪ್ರವಾಸಿಗರ ಮನತಣಿಸುತ್ತಿದೆ.
ಪ್ರಾಥಮಿಕ ಹಂತದ ಪ್ರವಾಸಿ ತಾಣವಾಗಿರುವ ಪ್ರಾಣಿಸಂಗ್ರಹಾಲಯವು ವಿಶ್ವವಿಖ್ಯಾತ ಹಂಪಿಗೆ ಹತ್ತಿರವಿರುವ ಕಾರಣ ವಿದೇಶಿಗರ ಭೇಟಿ ಸಹ ಹೆಚ್ಚಾಗುತ್ತದೆ. ಈ ಹಿನ್ನಲೆಯಲ್ಲಿ ಬೃಹತ್ ಪ್ರಾಂಗಣವಾಗಿರುವ ಸಂಗ್ರಹಾಲಯಕ್ಕೆ ಪರಿಸರಕ್ಕೆ ಹೊಂದುವ ಇನ್ನೂ ಹೆಚ್ಚಿನ ಪ್ರಾಣಿಗಳನ್ನು ಸಂಗ್ರಹಾಲಯದಲ್ಲಿ ಕರೆತಂದು ಉತ್ತಮ ಅರಣ್ಯ ಪ್ರದೇಶವನ್ನಾಗಿಸಬೇಕು ಎಂಬುದು ಪ್ರವಾಸಿಗರ ಅಭಿಪ್ರಾಯವಾಗಿದೆ.


ಪ್ರಾಣಿ ಸಂಗ್ರಹಾಲಯ ಹೆಚ್ಚು ವಿಶಾಲವಾಗಿದ್ದು, ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಿ ಹಸಿರೀಕರಣಕ್ಕೆ ಒತ್ತುನೀಡಿ, ಇನ್ನೂ ಹಲವು ಪ್ರಾಣಿಗಳನ್ನು ಕರೆತರಬೇಕು.
-ಇನ್ಸಾಫ್, ಪ್ರವಾಸಿಗ


ವಾರಾಂತ್ಯಗಳಲ್ಲಿ ಪ್ರವಾಸಿಗರ ಸಂಖ್ಯೆ 150 ತಲುಪುತ್ತಿದೆ. ಸಫಾರಿಗಾಗಿ 3 ವಾಹನಗಳಿದ್ದು, ಇನ್ನೂ ಹೆಚ್ಚಿನ ಪ್ರಾಣಿಗಳನ್ನು ತರಿಸಬೇಕು ಎಂಬುದೇ ಪ್ರತಿ ಪ್ರವಾಸಿಗರ ಸಲಹೆಯಾಗಿದೆ. ಅದರಂತೆ ಸಂಗ್ರಹಾಲಯವು ಈ ಕುರಿತಂತೆ ಕಾರ್ಯನಿರತವಾಗಿ ಮುಂದಿನ ದಿನಗಳಲ್ಲಿ ವೈವಿಧ್ಯಮಯ ಪ್ರಾಣಿಗಳನ್ನು ಕರೆತರಲು ಚಿಂತಿಸಿದೆ.
-ವಿರೂಪಾಕ್ಷಿ, ಸಿಬ್ಬಂದಿ