ಪ್ರವಾಸಿಗರಿಗೆ ಗೋಪುರವನ್ನು ಆಕರ್ಷಣಿಯ ಮಾಡಲಾಗುತ್ತಿರುವುದು ಉತ್ತಮ ಕಾರ್ಯ – ಎಂ.ಪಿ. ಕಾರ್ತಿಕ್

ಸಂಡೂರು ನ 06 : ಪ್ರಕೃತಿ ಸೌಂದರ್ಯದ ಮನೋಹರವನ್ನು ಹೆಚ್ಚಿಸಲು ಸಂಡೂರಿನ ಅರಣ್ಯ ಇಲಾಖೆಯವರು ಶ್ರೀ ಕುಮಾರಸ್ವಾಮಿ ಮಿನರಲ್ಸ್ ಎಕ್ಸೋಪೋರ್ಟ್ ಲೀ., ಕಂಪನಿಯ ಸಹಾಯೋಗದಲ್ಲಿ ವೀಕ್ಷಣಾ ಗೋಪುರದ ದುರಸ್ತಿ ಕೆಲಸ ರಭಸದಿಂದ ಸಾಗುತ್ತಿದ್ದು, ಸ್ವಾಮಿಮಲೈ, ರಾಮಘಡ ಅರಣ್ಯ ಪ್ರದೇಶವನ್ನು ವಿಭಾಗಿಸುವ ಕಡೆಯಲ್ಲಿ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಆಸ್ವಾದಿಸಲು ಸಾಧ್ಯವಾಗದೇ ಇರದೇ ಕಾರಣ ವೀಕ್ಷಣಾ ಗೋಪುರ ಶೀತಿಲಗೊಂಡಿರುವುದು ಪ್ರಮುಕವಾಗಿದೆ. ಆ ಗೋಪುರದ ರಿಪೇರಿ ಸೇರಿ ಆಕರ್ಷಣೀಯಗೊಳಿಸುವ ಕೆಲಸ ವೇಗವಾಗಿ ಸಾಗುತ್ತಿದ್ದು, ರಜಾ ದಿನಾಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರಿಗೆ ಗೋಪುರವನ್ನು ಆಕರ್ಷಣೆಯಾಗಿ ಪರಿವರ್ತಿಸುತ್ತಿರುವುದು ಉತ್ತಮ ಕೆಲಸ ಎಂದು ಸಂಡೂರಿನ ಪರಿಸರ ಪ್ರೇಮಿ ಎಂ.ಪಿ.ಎಂ. ಕಾರ್ತಿಕರವರು ಮನದಾಳದ ಮಾತನ್ನಾಡಿದರು.
ಸಂಡೂರು ಕೂಡ್ಲಿಗಿ ರಾಜ್ಯ ಹೆದ್ದಾರಿಯಲ್ಲಿರುವ ಈ ವೀಕ್ಷಣಾ ಗೋಪುರದ ಮೇಲಿಂದ ಸ್ವಾಮಿ ಮಲೈ ಅರಣ್ಯ ಪ್ರದೇಶ ಮತ್ತೊಂದಡೆಯಾದರೆ, ಒಟ್ಟಾರೆಯಾಗಿ ರಾಮಘಡ ಅರಣ್ಯ ಪ್ರದೇಶವನ್ನು ನೋಡಲು ಪ್ರಕೃತಿಯ ಸೌಂದರ್ಯ ರಮಣೀಯವಾಗಿದ್ದು, ನೋಡಲು 2 ಕಣ್ಣುಗಳು ಸಾಲದಾಗಿದೆ. ನಾರಿಹಳ್ಳಿ ಗಂಡಿ ಮಾರೆಮ್ಮ ದೇವಸ್ಥಾನ ಹಾಗೂ ಗುಡ್ಡ ಬೆಟ್ಟಗಳಿಂದ ಆವೃತ್ತವಾದ ಸಂಡೂರು ಧರ್ಮಾಪುರ ನಾರಿಹಳ್ಳ ಜಲಾಶಯವನ್ನು ವೀಕ್ಷಿಸಬಹುದಾಗಿದ್ದು, ವೀಕ್ಷಣಾ ಗೋಪುರದ ಆಕರ್ಷಣೆ ಹೆಚ್ಚಿಸಲು ಛಾವಣಿಗೆ ಹೊಸ ಶೀಟುಗಳನ್ನು ಅಳವಡಿಸಲಾಗುತ್ತಿದೆ. ಚಿಕ್ಕವರಿಂದ ವಯೋವೃದ್ದರವೆಗೂ ಹತ್ತಲು, ಇಳಿಯಲು ಅನುಕೂಲವಾಗುವಂತೆ ಮೆಟ್ಟಿಲುಗಳ ಅಂತರ ಕಡಿಮೆ ಮಾಡಲು ಯೋಜನೆಯನ್ನ ಹಾಕಿಕೊಂಡಿದ್ದು, ಗೋಡೆಗಳನ್ನು ಭದ್ರಪಡಿಸಲಾಗುತ್ತಿದೆ. ಎಂದು ಅರಣ್ಯ ಉಪ ವಲಯ ಅಧಿಕಾರಿ ತಿಪ್ಪೇಸ್ವಾಮಿಯವರು ತಿಳಿಸಿದರು.