ಪ್ರವಾಸಿಗರಿಂದಾಗಿ ಕೋವಿಡ್ ವಿಸ್ತರಣೆ:ಆನಂದ್ ಸಿಂಗ್

ಬಳ್ಳಾರಿ, ಮಾ.14: ಹೊಸಪೇಟೆ ಮತ್ತು ಬಳ್ಳಾರಿ ಯಲ್ಲಿ ಕರೊನಾ ಸೋಂಕು ಹೆಚ್ಚಳವಾಗುತ್ತಿರುವುದಕ್ಕೆ ಕಾರಣ ಹೊರ ರಾಜ್ಯದಿಂದ ಜನರು ಹೆಚ್ಚಾಗಿ ಬರುವುದರಿಂದ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಇಂದು ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಂಪಿ, ದರೋಜಿ ಕರಡಿಧಾಮ, ತುಂಗಭದ್ರ ಜಲಾಶಯ ಮೊದಲಾದವುಗಳಿಂದ
ಹೊಸಪೇಟೆ ಪ್ರವಾಸಿಗರು ಬಂದು ಹೋಗುವ ತಾಣ ಆಗಿರುವುದರಿಂದ ಹೆಚ್ಚು ಜನರು ಇಲ್ಲಿಗೆ ಬಂದು ಹೋಗ್ತಾರೆ
ಮಹಾರಾಷ್ಟ್ರ ಮತ್ತು ಹೊರ ರಾಜ್ಯದಿಂದ ಬಂದಿರೋ ಕಾರಣ ಇಲ್ಲಿ ಸೋಂಕು ಹೆಚ್ಚಳವಾಗಿದೆ. ಆದರೂ ಕೋವಿಡ್ ಬಗ್ಗೆ ಜನತೆ ಆತಂಕ ಪಡೋದು ಬೇಡ ಸೋಂಕಿನಿಂದ ರಕ್ಷಣೆಗಾಗಿ
ಈಗಾಗಲೇ ಲಸಿಕೆ ಬಂದಿದೆ. ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಸಮಸ್ಯೆ ಇಲ್ಲ.
ಪ್ರತಿಯೊಬ್ಬರೂ ನಿಸ್ಸಂದೇಹವಾಗಿ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದ ಅವರು.ತಾವೂ ಕೋವಿಡ್ ಲಸಿಕೆ ಪಡೆಯುವುದಾಗಿ ಹೇಳಿದರು.
ಏನೇ ಆಗಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದನ್ನು ಮರೆಯಬಾರದು. ಸರ್ಕಾರ ನಿಯಮ ಮಾಡಬಹುದು ಆದರೆ ಪಾಲಿಸುವುದು ಜನರ ಕರ್ತವ್ಯ. ಬಲವಂತವಾಗಿ ನಿಯಮ ಪಾಲನೆ ಮಾಡಿಸಲು ಬಾರದು ಎಂದರು.
ಈ ದಿಶೆಯಲ್ಲಿ ಬಳ್ಳಾರಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆಂದರು.