ಪ್ರವಾಸಕ್ಕೆ ತೆರಳಿದ್ದ ಇಬ್ಬರು ಯುವಕರು ನೀರುಪಾಲು

ಮೈಸೂರು, ಸೆ.17: ಗೋಕರ್ಣಕ್ಕೆ ಪ್ರವಾಸ ತೆರಳಿದ್ದ ಮೈಸೂರಿನ ಇಬ್ಬರು ಯುವಕರು ಸಮುದ್ರ ತೀರದಲ್ಲಿ ಈಜಲು ಹೋಗಿ ನೀರುಪಾಲಾದ ಘಟನೆ ನಡೆದಿದೆ.
ಮೈಸೂರಿನಿಂದ ಎಂಟು ಮಂದಿ ಯುವಕರು ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದರು. ಬೆಳಗ್ಗೆ ಈಜಲೆಂದು ಸಮುದ್ರ ತೀರದಲ್ಲಿ ನೀರಿಗಿಳಿದ ವೇಳೆ ಅಲೆಗಳಿಗೆ ಸಿಕ್ಕು ಇಬ್ಬರು ಕಣ್ಮರೆಯಾಗಿದ್ದಾರೆ. ಓರ್ವ ಯುವಕ ಸುಹಾಸ್(17) ಎಂಬಾತನ ಮೃತದೇಹ ಪತ್ತೆಯಾಗಿದೆ. ಇನ್ನೋರ್ವ ಯುವಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಮಂಡ್ಯ ಮೂಲದ ಉಲ್ಲಾಸ್(15) ಎಂಬಾತ ಕಣ್ಮರೆಯಾಗಿರುವ ಬಾಲಕ ಎಂದು ಹೇಳಲಾಗುತ್ತಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದರೂ ನೀರಿಗಿಳಿದಿದ್ದ ಯುವಕರು ಅಪಾಯಕ್ಕೀಡಾಗಿದ್ದಾರೆ.
ಸ್ಥಳಕ್ಕೆ ಗೋಕರ್ಣ ಪೆÇಲೀಸರು ಭೇಟಿ ನೀಡಿದ್ದು ಶೋಧ ಕಾರ್ಯಕ್ಕೆ ಏರ್ಪಾಡು ಮಾಡಿದ್ದಾರೆ. ಗೋಕರ್ಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.