ಪ್ರವಾದಿಯ ದೈವಸಂದೇಶದ ಅಭಿಯಾನ – ಅಬ್ದುಲ್ ರಹೀಮ್

ಮಾನ್ವಿ,ಅ.೦೨- ತಾಲೂಕ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯಿಂದ ‘ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್’ ಎಂಬ ಧ್ಯೇಯವಾಕ್ಯದಡಿ ಪ್ರವಾದಿ ಜೀವನ ಸಂದೇಶ ಅಭಿಯಾನವನ್ನು ೨೦೨೩, ಸೆ.೨೮ ರಿಂದ ಅಕ್ಟೋಬರ್ ೬ ವರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಮಾತೆ ಇಸ್ಲಾಮಿಕ್ ಹಿಂದ್ ಮಾನವಿ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಹೇಳಿದರು.
ತಾಲೂಕ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ಈ ಅಭಿಯಾನದಲ್ಲಿ ಪ್ರವಾದಿಯವರ ಕುರಿತು ಪುಸ್ತಕ ಬಿಡುಗಡೆ, ವಿಚಾರಗೋಷ್ಠಿ ಸಮಾವೇಶಗಳು, ಪ್ರಬಂಧ ಸ್ಪರ್ಧೆ, ರಕ್ತದಾನ ಶಿಬಿರ, ಶುಚಿತ್ವ ಅಭಿಯಾನ, ಆಸ್ಪತ್ರೆ, ಅನಾಥಾಲಯ, ವೃದ್ಧಾಶ್ರಮ ಭೇಟಿ, ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪರಸ್ಪರ ತಪ್ಪುಕಲ್ಪನೆಗಳು, ಪೂರ್ವಾಗ್ರಹಗಳು, ದ್ವೇಷದ ವಾತಾವರಣವನ್ನು ನಿವಾರಿಸಿ ಶಾಂತಿ, ಸಹಬಾಳ್ವೆ, ಪರಸ್ಪರ ಅರಿಯುವ ಉದ್ದೇಶದಿಂದ ಜಮಾಅತೆ ಇಸ್ಲಾಮೀ ಹಿಂದ್ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಬ್ದುಲ್ ರಹಿಮಾನ ಅಧ್ಯಕ್ಷ, ಅಬ್ದುಲ್ ರಹಿಮಾನ ಉಪಾಧ್ಯಕ್ಷ, ಎಮ್.ಎ.ಎಚ್.ಮುಖಿಮ್ ಸಂಚಾಲಕ, ಕರಿಂ ಖಾನ್ ದಾವುದ್ ಸಿದ್ದಿಕ್, ಸಯ್ಯದ್ ಅಕ್ಬರ್ ಪಾಷ, ಉಮರ್ ದೇವರಮನಿ, ಶೇಖ್ ಬಾಬಾ ಹುಸೇನ್ ಇದ್ದರು.