ಪ್ರವರ್ಗ 1ರ ಜಾತಿಗಳ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ

ಬ್ಯಾಡಗಿ,ಸೆ.17: ಕರ್ನಾಟಕ ರಾಜ್ಯ ಪ್ರವರ್ಗ 1ರ ಜಾತಿಗಳ ಒಕ್ಕೂಟದ ತಾಲೂಕು ಅಧ್ಯಕ್ಷರಾಗಿ ಹನುಮಂತಪ್ಪ ಶಿರಗಂಬಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರು ಮುಳಗುಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಪ್ರವರ್ಗ 1ರ ಜಾತಿಗಳ ಜಾಗೃತ ಸಭೆ ಹಾಗೂ ಒಕ್ಕೂಟದ ನೂತನ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆಯನ್ನು ಒಕ್ಕೂಟದ ಜಿಲ್ಲಾಧ್ಯಕ್ಷ ಶಂಕರ ಸುತಾರ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಒಕ್ಕೂಟದ ಕಾರ್ಯಾಧ್ಯಕ್ಷರಾಗಿ ಯಲ್ಲಪ್ಪ ಓಲೇಕಾರ, ಕೇಶವಗೌಡ ಕಿತ್ತೂರ, ಉಪಾಧ್ಯಕ್ಷರಾಗಿ ನಿಂಗರಾಜ ಹರ್ಲಾಪುರ, ರಾಘವೇಂದ್ರ ಬಾರ್ಕಿ, ಕರಬಸಪ್ಪ ಶಿರಗಂಬಿ, ಬಸನಗೌಡ ಸಣ್ಣಗೌಡ್ರ, ಸಂಘಟನಾ ಕಾರ್ಯದರ್ಶಿಯಾಗಿ ಭರಮಪ್ಲ ಹೊನ್ನತ್ತಿ, ಶಿವಮೂರ್ತಿ ಉಪ್ಪಾರ, ವೆಂಕನಗೌಡ ಪಾಟೀಲ, ಮಾಲತೇಶ ಉಪ್ಪಾರ, ರಮೇಶ ಹೊಳಲ, ಜಂಟಿ ಕಾರ್ಯದರ್ಶಿಯಾಗಿ ರಾಮನಗೌಡ ತಂಗೊಂಡ್ರ, ಮಂಜುನಾಥ ಬಾರ್ಕಿ, ಶಿದ್ದನಗೌಡ ಬೇಗೂರ, ಚಂದ್ರಪ್ಪ ದೊಡ್ಮನಿ, ಕೃಷ್ಣಪ್ಪ ಉಪ್ಪಾರ, ಖಜಾಂಚಿ ಅಶೋಕ ಬಾರ್ಕಿ, ಗೌರವ ಸಲಹೆಗಾರರಾಗಿ ಹೊನ್ನಪ್ಪ ಸಣ್ಣಬಾರ್ಕಿ, ಶಿವಬಸಪ್ಪ ಉಪ್ಪಾರ, ಶೇಖಪ್ಪ ಬಾರ್ಕಿ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ವಿವಿಧ ಸಮುದಾಯದ ಮುಖಂಡರಾದ ಆರ್.ಎಸ್.ಪಾಟೀಲ, ಸಿ.ಬಿ.ಗುಡ್ಡೇರ, ಸಿ.ಎಮ್.ತಂಗೋಡರ, ಮಂಜುನಾಥ ಬೋವಿ, ಮಂಜುನಾಥ ಉಪ್ಪಾರ, ಆರ್.ಸಿ.ಆಂಬಲೆಪ್ಪನವರ ಸೇರಿದಂತೆ ಇನ್ನಿತರರು ಉಪಸ್ಥಿರಿದ್ದರು.