ಪ್ರವಚನ ಕಾರ್ಯಕ್ರಮ

(ಸಂಜೆವಾಣಿ ವಾರ್ತೆ)
ಬಾದಾಮಿ,ಆ17: ಶ್ರೀಮದ್ವೀರಶೈವ ಶಿವಯೋಗಮಂದಿರ ಸಂಸ್ಥೆ, ಶಿವಯೋಗಮಂದಿರ ಪ್ರವಚನ ಸಮಿತಿ, ಅಕ್ಕನ ಬಳಗ ಹಾಗೂ ಅಖಿಲ ಭಾರತ ವೀರಶೈವ-ಅಂಗಾಯತ ಮಹಾಸಭೆ, ಬಾದಾಮಿಇವರ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ನವಲಗುಂದ ಶ್ರೀ ನಾಗಲಿಂಗೇಶ್ವರ ಜೀವನ ದರ್ಶನ ಪ್ರವಚನ ಇಂದಿನಿಂದ 15 ಸಪ್ಟೆಂಬರ್ 2023 ರ ವರೆಗೆ ಪ್ರತಿದಿನ ಸಂಜೆ 6.30ಕ್ಕೆ ಅಕ್ಕಮಹಾದೇವಿ ಅನುಭಾವ ಮಂಟಪ, ಬಾದಾಮಿಯಲ್ಲಿ ಜರುಗುವದು.
ಡಾ. ಶಿವಯೋಗಿ ದೇವರು ಪ್ರವಚನ ನೀಡಲಿದ್ದಾರೆ.