ಪ್ರವಚನ ಆಲಿಸಿದ ಸಿಎಂ

ಭಾಲ್ಕಿ :ಡಿ.6:ಇಂದು ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಬಾಲ್ಕಿ ಚನ್ನಬಸವವಾಶ್ರಮಕ್ಕೆ ಆಗಮಿಸಿ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳ ಪ್ರವಚನ ಆಲಿಸಿದರು. ಮಾತನಾಡಿ ಪರಮಪೂಜ್ಯ ಸಿದ್ದೇಶ್ವರ ಸ್ವಾಮಿಗಳ ಪ್ರವಚನ ಆಲಿಸಿದ್ದು ನನ್ನ ಭಾಗ್ಯ, ಪರಮಪೂಜ್ಯರ ವಾಣಿ ದಿವ್ಯವಾಣಿ ವಿದ್ದಂತೆ, ಅವರು ನಡೆದಾಡುವ ದೇವರು,ಅವರ ಮಾರ್ಗದರ್ಶನ ದಂತೆ ನಡೆಯುತ್ತೇನೆ. ಎಂದರು.
ಬಸವಲಿಂಗ ಪಟ್ಟದ್ದೇವರು ಮಾತನಾಡಿ ಸಿದ್ದೇಶ್ವರ ಮಹಾಸ್ವಾಮಿಗಳ ವಾಣಿಯಂತೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಸಾತ್ವಿಕ ವ್ಯಕ್ತಿಗಳು, ಹಾಗೂ ಸರಳ ಸಜ್ಜನ, ಅವರು ಮುಖ್ಯಮಂತ್ರಿಗಳಾದ ಮೇಲೆ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ, ಕೃಷಿಕರ ಮಕ್ಕಳಿಗೆ ಶಿಷ್ಯವೇತನ, ಆಧ್ಯಾತ್ಮಿಕ, ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಭಗವಂತ ಖುಬಾ, ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚೌಹಾಣ್, ಪುರಸಭೆ ಅಧ್ಯಕ್ಷರಾದ ಬಸವರಾಜ ವಂಕೆ, ಅನೇಕ ರಾಜಕೀಯ ಮುಖಂಡರು, ಪ್ರವಚನ ಆಲಿಸಲು ಬಂದಂತಹ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.